ETV Bharat / state

ನಗರಸಭೆ ವೈಖರಿಗೆ ಬೇಸತ್ತು ಶ್ರಮದಾನ ಮಾಡಿದ ಆಟೋ ಚಾಲಕರು - Gagavathi news

ಚರಂಡಿ ಕಾಮಗಾರಿ ಮಾಡಿದ್ದ ಗುತ್ತಿಗೆದಾರ, ಆಟೋಗಳನ್ನು ನಿಲ್ಲಿಸುತ್ತಿದ್ದ ಸ್ಥಳದಲ್ಲಿ ಚರಂಡಿಯ ಒಂದು ಭಾಗವನ್ನು ಮುಚ್ಚದೇ ಬಿಟ್ಟಿದ್ದರು..

Auto drivers
ನಗರಸಭೆ ವೈಖರಿಗೆ ಬೇಸತ್ತು ಶ್ರಮದಾನ ಮಾಡಿದ ಆಟೋ ಚಾಲಕರು
author img

By

Published : Aug 1, 2020, 10:06 PM IST

ಗಂಗಾವತಿ : ಚರಂಡಿ ಬ್ಲಾಕ್ ಆಗುತ್ತಿರುವ ಮತ್ತು ತ್ಯಾಜ್ಯ ಸಂಗ್ರಹವಾಗುತ್ತಿರುವ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕಿವಿಗೊಡದ ನಗರಸಭೆ ಅಧಿಕಾರಿಗಳ ವಿಳಂಬ ಧೋರಣೆ ಖಂಡಿಸಿ ಆಟೋ ಚಾಲಕರು ಶ್ರಮದಾನ ಮಾಡಿದ ಘಟನೆ ನಗರದಲ್ಲಿ ನಡೆಯಿತು.

ನಗರದ ನೀಲಕಂಠೇಶ್ವರ ವೃತ್ತದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಕ್ಷಣಾ ಗೋಡೆಗೆ ಅಂಟಿಕೊಂಡಂತೆ ನಿತ್ಯ ನೂರಾರು ಆಟೋ ನಿಲ್ಲುತ್ತವೆ. ಆದರೆ ಇತ್ತೀಚಿಗೆ ಕೈಗೊಳ್ಳಲಾಗಿದ್ದ ಅಮೃತ ಸಿಟಿ ಯೋಜನೆಯಲ್ಲಿನ ಚರಂಡಿ ಕಾಮಗಾರಿಯಿಂದ ಆಟೋ ಚಾಲಕರಿಗೆ ಸಮಸ್ಯೆಯಾಗಿತ್ತು. ಚರಂಡಿ ಕಾಮಗಾರಿ ಮಾಡಿದ್ದ ಗುತ್ತಿಗೆದಾರ, ಆಟೋಗಳನ್ನು ನಿಲ್ಲಿಸುತ್ತಿದ್ದ ಸ್ಥಳದಲ್ಲಿ ಚರಂಡಿಯ ಒಂದು ಭಾಗವನ್ನು ಮುಚ್ಚದೇ ಬಿಟ್ಟಿದ್ದರು.

ಇದರಿಂದ ನಿತ್ಯ ಗಬ್ಬುವಾಸನೆ ಹರಡುತ್ತಿತ್ತು. ಅಲ್ಲದೇ ಮಳೆ ಬಂದಾಗಲೊಮ್ಮೆ ನೀರಿನ ರಭಸಕ್ಕೆ ಚರಂಡಿಯಲ್ಲಿನ ತ್ಯಾಜ್ಯ ಸಂಗ್ರಹವಾಗಿ ಮೇಲೆ ಬಂದು ಸಂಗ್ರವಾಗುತಿತ್ತು. ಸಂಗ್ರವಾದ ತ್ಯಾಜ್ಯದಿಂದ ಆಟೋಗಳನ್ನು ನಿಲ್ಲಿಸಲಾಗದಂತ ಸ್ಥಿತಿ ನಿರ್ಮಾಣವಾಗಿತ್ತು.

ಹೀಗಾಗಿ, ಆಟೋ ಚಾಲಕರು ಸಾಕಷ್ಟು ಬಾರಿ ನಗರಸಭೆಯವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಶ್ರಮದಾನದ ಮೂಲಕ ನಗರಸಭೆಯ ಅಧಿಕಾರಿಗಳಿಗೆ ಬಿಸಿಮುಟ್ಟಿಸಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.