ETV Bharat / state

Koppal Crime: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ನಕಲಿ ಸ್ವಾಮೀಜಿ ಬಂಧನ - ಲೈಂಗಿಕ ಕಿರುಕುಳ

Koppal Crime: ಆರೋಗ್ಯ ಸಮಸ್ಯೆ ಪರಿಹರಿಸುವುದಾಗಿ ನಂಬಿಸಿ ಸ್ವಾಮೀಜಿಯೊಬ್ಬ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸ್ವಾಮೀಜಿಯಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ
Allegation of sexual harassment
author img

By

Published : Aug 8, 2023, 10:52 PM IST

ಗಂಗಾವತಿ (ಕೊಪ್ಪಳ): ಮಹಿಳೆಗೆ ಕುಟುಂಬದಲ್ಲಿನ ತೊಂದರೆ ಹಾಗೂ ಅನಾರೋಗ್ಯದ ಸಮಸ್ಯೆ ಪರಿಹರಿಸುವುದಾಗಿ ಹೇಳಿದ ಸ್ವಾಮೀಜಿಯೊಬ್ಬ, ಪೂಜೆ ಮಾಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮಸಾಗರ ತಾಂಡಾದಲ್ಲಿ (ಕರಿಯಮ್ಮ ಕ್ಯಾಂಪ್) ಘಟನೆ ಜರುಗಿದ್ದು, ಸಂತ್ರಸ್ತೆ ನೀಡಿದ ದೂರಿನನ್ವಯ ಪೊಲೀಸರು, ಲಾಯದುಣಿಸಿಯ ವೀರಯ್ಯ ನೀಲಯ್ಯಸ್ವಾಮಿ ದೋಟಿಹಾಳ ಹಿರೇಮಠ ಎಂಬಾತನನ್ನು ಬಂಧಿಸಿದ್ದಾರೆ.

ದೂರಿನ ವಿವರ: ಭಿಕ್ಷೆ ಬೇಡುವ ನೆಪದಲ್ಲಿ ಸಂತ್ರಸ್ತೆಯ ಮನೆಗೆ ಹೋದ ಆರೋಪಿಗೆ, ಮಹಿಳೆ ಹಾಗೂ ಆಕೆಯ ಗಂಡ 21 ರೂಪಾಯಿ ಕಾಣಿಕೆ ನೀಡಿದ್ದಾರೆ. ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇದ್ದರೆ ಪೂಜೆ ಮೂಲಕ ಪರಿಹಾರ ಕಲ್ಪಿಸಿಕೊಡುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಮಹಿಳೆ ತನ್ನ ಬಲಗೈ ಪಕ್ಕೆ ಮತ್ತು ಕೈ ಕಾಲು ನೋಯುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಆಕೆಯ ಪತಿಯನ್ನು ಹೊರಗೆ ಕರೆದೊಯ್ದ ಸ್ವಾಮಿ ಮನೆಯಲ್ಲಿ ಊದಿನಕಡ್ಡಿ ಹಚ್ಚಿಕೊಂಡು ಬರಲು ತಿಳಿಸಿದ್ದ. ಬಳಿಕ ಪೂಜೆ ಮಾಡಿ ಅಗರಬತ್ತಿಯನ್ನು ಮನೆಯ ಹೊರಗಿಡಬೇಕು. ನಾನು ಹೇಳುವವರೆಗೂ ಮನೆಯೊಳಗೆ ಬಾರದಂತೆ ಸ್ವಾಮೀಜಿ ಮಹಿಳೆಯ ಪತಿಗೆ ಸೂಚಿಸಿದ್ದಾನೆ. ನಂತರ ಮನೆಯೊಳಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ತಕ್ಷಣವೇ ಜಾಗೃತಗೊಂಡ ಮಹಿಳೆ, ಸ್ವಾಮೀಜಿ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ಇತ್ತೀಚಿನ ಪ್ರಕರಣ: ಯುವತಿಗೆ ಕಿರುಕುಳ ನೀಡಿದ್ದ ರ‍್ಯಾಪಿಡೋ ಬೈಕ್ ಕ್ಯಾಪ್ಟನ್ ಬಂಧನ: ರೈಡ್ ಬುಕ್ ಮಾಡಿದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ರ‍್ಯಾಪಿಡೋ ಬೈಕ್ ಕ್ಯಾಪ್ಟನ್​ನನ್ನು ಇತ್ತೀಚೆಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಅರೆಸ್ಟ್​ ಮಾಡಿದ್ದರು. ರ‍್ಯಾಪಿಡೋ ಬೈಕ್​ ಕ್ಯಾಪ್ಟನ್ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದ ಯುವತಿ, ತನಗಾದ ಕಹಿ ಅನುಭವದ ಬಗ್ಗೆ ಟ್ವೀಟ್ ಮಾಡಿ, ರ‍್ಯಾಪಿಡೋ ಸೇವೆ ಬಳಸುವವರ ಸುರಕ್ಷತೆಯ ಕುರಿತು ಪ್ರಶ್ನೆ ಮಾಡಿದ್ದರು. ಟೌನ್ ಹಾಲ್​ನಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ತಮ್ಮ ಮನೆಗೆ ತೆರಳಲು‌ ರ‍್ಯಾಪಿಡೋ ಆಟೋ ಬುಕ್ ಮಾಡಿದ್ದಳು. ಆದ್ರೆ, ಬುಕ್​ ಕ್ಯಾನ್ಸಲ್ ಆದ ಹಿನ್ನೆಲೆಯಲ್ಲಿ ವಿಧಿಯಿಲ್ಲದೇ ಬೈಕ್ ಆಯ್ಕೆ ಆಯ್ಕೆಕೊಂಡಿದ್ದರು. ಆ್ಯಪ್​ನಲ್ಲಿ ತೋರಿಸಿದ ನಂಬರಿನ ಬೈಕ್ ರಿಪೇರಿ ಇದೆ ಎಂದಿದ್ದ ಬೈಕ್​ ಚಾಲಕ‌ ಬೇರೆ ಬೈಕಿನಲ್ಲಿ‌ ಬಂದಿದ್ದನು. ನಂತರ ಮಾರ್ಗಮಧ್ಯೆ ನಿರ್ಜನ ಪ್ರದೇಶದಲ್ಲಿ ಒಂದೇ ಕೈಯಲ್ಲಿ ಚಾಲನೆ ಮಾಡುತ್ತ ಹಸ್ತಮೈಥುನ ಮಾಡಿಕೊಂಡಿದ್ದನು ಎಂದು ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಯುವತಿ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಅಪರಾಧಿಗೆ 3 ವರ್ಷ ಶಿಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.