ETV Bharat / state

ಕುಷ್ಟಗಿಯಲ್ಲಿ ಸಿಡಿಲಿಗೆ ಬಲಿಯಾದ ರೈತ..! - ಕುಷ್ಟಗಿ ತಾಲೂಕಿನ ತೋಪಲಕಟ್ಟಿ ಗ್ರಾಮದಲ್ಲಿ ಸಿಡಿಲಿಗೆ ಬಲಿಯಾದ ರೈತ

ಕುಟುಂಬದವರೊಂದಿಗೆ ಹೆಸರು ಬಿತ್ತನೆ ನಿರತರಾಗಿದ್ದ ವೇಳೆ ಸಿಡಿಲು ಬಡಿದು ರೈತನೊಬ್ಬ ಸಾವನ್ನಪ್ಪಿರುವ ಘಟನೆ, ಕುಷ್ಟಗಿ ತಾಲೂಕಿನ ತೋಪಲಕಟ್ಟಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

a farmer died in kushtagi
ಕುಷ್ಟಗಿಯಲ್ಲಿ ಸಿಡಿಲಿಗೆ ಬಲಿಯಾದ ರೈತ
author img

By

Published : May 16, 2020, 8:48 PM IST

ಕುಷ್ಟಗಿ (ಕೊಪ್ಪಳ): ಸಿಡಿಲು ಬಡಿದು ರೈತನೊಬ್ಬ ಸಾವನ್ನಪ್ಪಿರುವ ಘಟನೆ, ಕುಷ್ಟಗಿ ತಾಲೂಕಿನ ತೋಪಲಕಟ್ಟಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮುದಿಯಪ್ಪ ಮಲಿಯಪ್ಪ ಟಕ್ಕಳಕಿ (32) ಎಂಬ ರೈತ ಮೃತನಾಗಿದ್ದು, ಕುಟುಂಬದವರೊಂದಿಗೆ ಹೆಸರು ಬಿತ್ತನೆ ನಿರತರಾಗಿದ್ದ ವೇಳೆ, ಈ ಅವಘಡ ನಡೆದಿದೆ.

ಬಿರುಗಾಳಿ ಸಹಿತ ಮಳೆ ಶುರುವಾದಾಗ, ಮಳೆಯ ರಕ್ಷಣೆಗಾಗಿ ಗಿಡದ ಕೆಳಗೆ ನಿಂತಿದ್ದರು. ಈ ವೇಳೆ, ಸಿಡಿಲು ಬಡಿದಿದೆ. ಅವರ ಸಹೋದರನ ಮಗ ಮಲ್ಲಪ್ಪ ಅಸ್ವಸ್ಥಗೊಂಡಿದ್ದು, ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಡಿಲಿಗೆ ಬಲಿಯಾದ ಮುದಿಯಪ್ಪನು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಕುಷ್ಟಗಿಯಲ್ಲಿ ಸಿಡಿಲಿಗೆ ಬಲಿಯಾದ ರೈತ

ಘಟನಾ ಸ್ಥಳಕ್ಕೆ ತಹಶೀಲ್ದಾರ್​ ಎಂ. ಸಿದ್ದೇಶ ಭೇಟಿ ನೀಡಿ ಪರಿಶೀಲಿಸಿದ್ದು, ಕುಟುಂಬದವರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರವನ್ನು ಕಲ್ಪಿಸುವ ಭರವಸೆ ನೀಡಿದ್ದಾರೆ. ಇನ್ನು ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.