ETV Bharat / state

ಕೋಲಾರ ಜಿಲ್ಲೆಯ ಯೋಧ ಹುತಾತ್ಮ : ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಸದ್ಯ ಯಲಹಂಕ CRPFನಲ್ಲಿ‌ ಕೆಲಸ ಮಾಡುತಿದ್ದ ಯೋಧ, ಕಳೆದ ತಡರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತ ಯೋಧನ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನಡೆಯಿತು..

author img

By

Published : Jul 12, 2021, 3:42 PM IST

Warrior martyr in Kolar district
ಕೋಲಾರ ಜಿಲ್ಲೆಯ ಯೋಧ ಹುತಾತ್ಮ

ಕೋಲಾರ : ಜಿಲ್ಲೆಯ ಕೆಜಿಎಫ್ ತಾಲೂಕಿನ ಹುಲ್ಕೂರು ಗ್ರಾಮದ 52 ವರ್ಷದ ಯೋಧ ಪ್ರಕಾಶ್ ಹೆಚ್ ಆರ್ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ. ಮೂರು ದಿನಗಳಿಂದ ಉಸಿರಾಟದ ತೊಂದರೆ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಯೋಧ, ಬೆಂಗಳೂರಿನ ಜಯದೇಯ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

ಕಳೆದ 28 ವರ್ಷಗಳಿಂದ CRPFನಲ್ಲಿ ಕೆಲಸ ಮಾಡುತಿದ್ದ ಪ್ರಕಾಶ್ ಅವರು, ಜಮ್ಮುಕಾಶ್ಮೀರ, ನಗಾತ್, ಅರುಣಾಚಲಪ್ರದೇಶ ಹಾಗೂ ಇನ್ನಿತರ ಸ್ಥಳಗಳಲ್ಲಿ ದೇಶ ಸೇವೆ ಮಾಡಿದ್ದಾರೆ. ಸದ್ಯ ಯಲಹಂಕ CRPFನಲ್ಲಿ‌ ಕೆಲಸ ಮಾಡುತಿದ್ದ ಯೋಧ, ಕಳೆದ ತಡರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇನ್ನು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮೃತ ಯೋಧನ ಸ್ವಗ್ರಾಮದಲ್ಲಿ ನಡೆಯಿತು. ಯೋಧನ ಸಾವಿಗೆ ಜಿಲ್ಲೆಯ ಜನ ಕಂಬನಿ ಮಿಡಿದಿದ್ದು, ಕೆಜಿಎಫ್ ಪೊಲೀಸರು ಗೌರವ ವಂದನೆ ಸಲ್ಲಿಸಿದರು.

ಇದನ್ನೂ ಓದಿ : ಚೆಂಡು ಉಮಾಪತಿ ಅಂಗಳದಲ್ಲಿದೆ, ಗೋಲು​ ಹೊಡೆಯುವುದು ಅವರಿಗೆ ಬಿಟ್ಟಿದ್ದು: 25 ಕೋಟಿ ವಂಚನೆ ಕೇಸ್​ಗೆ ದಚ್ಚು ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.