ETV Bharat / state

ಕೋಲಾರ ಡಿಸಿಸಿ ಬ್ಯಾಂಕ್​ನಲ್ಲಿ ನೂರಾರು ಕೋಟಿ ರೂಪಾಯಿ ಅವ್ಯವಹಾರ: ವರ್ತೂರು ಪ್ರಕಾಶ್ ಆರೋಪ

ಕೋಲಾರ ಡಿಸಿಸಿ ಬ್ಯಾಂಕ್​ನಲ್ಲಿ ನೂರಾರು ಕೋಟಿ ರೂಪಾಯಿ ಅವ್ಯವಹಾರ - ಮಹಿಳಾ ಸಮಾವೇಶ ರೇಷ್ಮೆ ಸೀರೆ, ಚಿನ್ನದ ಮೂಗುತಿ, ತಲಾ ಐದುನೂರು ರೂಪಾಯಿ ಹಂಚಲಾಗುತ್ತಿದೆ - ವರ್ತೂರು ಪ್ರಕಾಶ್ ಆರೋಪ

Varthur Prakash
ವರ್ತೂರು ಪ್ರಕಾಶ್
author img

By

Published : Feb 11, 2023, 9:13 PM IST

ಕೋಲಾರ ಡಿಸಿಸಿ ಬ್ಯಾಂಕ್​ನಲ್ಲಿ ನೂರಾರು ಕೋಟಿ ರೂಪಾಯಿ ಅವ್ಯವಹಾರ: ವರ್ತೂರು ಪ್ರಕಾಶ್ ಆರೋಪ

ಕೋಲಾರ: ಇಲ್ಲಿನ ಡಿಸಿಸಿ ಬ್ಯಾಂಕ್​ನಲ್ಲಿ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಹಗರಣ ಮುಚ್ಚಿಹಾಕಲು ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆ. ಸಹಕಾರಿ ಸಚಿವ ಸೋಮಶೇಖರ್​ ಅವರಿಗೆ ಸಿದ್ದರಾಮಯ್ಯ ಒತ್ತಡ ಹಾಕಿ, ಅವ್ಯವಹಾರವನ್ನು ಮುಚ್ಚಿಹಾಕಲು ಸಿದ್ದರಾಮಯ್ಯ ಕುಮ್ಮಕ್ಕು ನೀಡಿದ್ದು, ಕಳ್ಳರ ಟೀಂಗೆ ಶ್ರೀರಕ್ಷೆಯಾಗಿ ನಿಂತಿದ್ದಾರೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್​ ಗಂಭೀರ ಆರೋಪ ಮಾಡಿದ್ದಾರೆ.

ಕೋಲಾರದಲ್ಲಿ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಕೋಲಾರ ಡಿಸಿಸಿ ಬ್ಯಾಂಕ್​ನ ಭ್ರಷ್ಟಾಚಾರದ ಪಿತಾಮಹ ಮಾಜಿ ಸಿಎಂ. ಡಿಸಿಸಿ ಬ್ಯಾಂಕ್​ನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಇದೇ ಫೆ.13 ರಂದು ಕೋಲಾರ ತಾಲೂಕು ವೇಮಗಲ್​ನಲ್ಲಿ ಮಹಿಳಾ ಸಮಾವೇಶ ಮಾಡುತ್ತಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರಿಗೆ ತಾನು ಮಾಡಿದ ಭ್ರಷ್ಟಾಚಾರದ ಹಣದಲ್ಲಿ ಕೊಡುಗೆ ಕೊಡುತ್ತಿದ್ದಾರೆ" ಎಂದು ವರ್ತೂರು ಪ್ರಕಾಶ್​ ದೂರಿದ್ದಾರೆ.

ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬ್ಯಾಂಕ್​ ಹಣ ಬಳಕೆ ಆರೋಪ: "ಡಿಸಿಸಿ ಬ್ಯಾಂಕ್​ನಲ್ಲಿ ಒಂದಲ್ಲ ಎರಡಲ್ಲ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಹಗರಣದ ಹಣದಿಂದಲೇ ಕಾರ್ಯಕ್ರಮ ಮಾಡುತ್ತಿದ್ದಾರೆ. ಬ್ಯಾಂಕ್​ ಅಧ್ಯಕ್ಷ ಗೋವಿಂದಗೌಡ ಕಾರ್ಯಕ್ರಮಕ್ಕೆ ಬರುವವರಿಗೆ ರೇಷ್ಮೆ ಸೀರೆ, ಚಿನ್ನದ ಮೂಗುತಿ, ತಲಾ ಐದುನೂರು ರೂಪಾಯಿ ಕೊಡುಗೆ ನೀಡುತ್ತಿದ್ದಾರೆ. ಈಗಾಗಲೇ ಸ್ವಸಹಾಯ ಸಂಘಗಳ ಸಭೆ ಮಾಡಿ ಮೌಕಿಕ ಆದೇಶ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಮಹಿಳೆಯನ್ನು ಸೇರಿಸುತ್ತಿರುವ ಡಿಸಿಸಿ ಬ್ಯಾಂಕ್​ ಅಧ್ಯಕ್ಷ, ಸಹಕಾರಿ ಕ್ಷೇತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ" ಎಂದು ವರ್ತೂರು ಪ್ರಕಾಶ್ ಆರೋಪಿಸಿದ್ದಾರೆ.

"ಇದು ಕೇಂದ್ರದ ನಬಾರ್ಡ್​ ಹಾಗೂ ಅಫೆಕ್ಸ್ ಬ್ಯಾಂಕ್​ ಮೂಲಕ ಹಣ ನೀಡಲಾಗುತ್ತಿದೆ. ಇದು ಯಾರಪ್ಪನ ಮನೆ ಹಣವಲ್ಲ. ಇನ್ನು ಅಧ್ಯಕ್ಷ ಗೋವಿಂದಗೌಡ ಮನಸ್ಸೋ ಇಚ್ಚೆ ಖರ್ಚು ಮಾಡುತ್ತಿದ್ದಾರೆ. ಹಣ ಡಿಸಿಸಿ ಬ್ಯಾಂಕಿನದ್ದು, ಗೋವಿಂದಗೌಡ ಏನು ಟೊಮೆಟೋ ವ್ಯಾಪಾರ ಮಾಡಿಲ್ಲ, ವ್ಯವಸಾಯವನ್ನೂ ಮಾಡಿಲ್ಲ" ಎಂದು ಅಧ್ಯಕ್ಷರ ವಿರುದ್ಧ ಆರೋಪ ಮಾಡಿದ್ದಾರೆ.

ಚುನಾಣೆಗೆ ಮುನ್ನ ಜೈಲಿಗೆ ಹೋಗುವುದು ಖಂಡಿತ ಎಂದ ಪ್ರಕಾಶ್​: "ಈಗಾಗಲೇ ಬ್ಯಾಂಕ್​ನಲ್ಲಿ ನಡೆದಿರುವ ಅವ್ಯವಹಾರ ಕುರಿತು ತನಿಖೆ ನಡೆಸಿ ವರದಿ ಕೊಟ್ಟಿದ್ದು ಅದಕ್ಕೂ ಕೋರ್ಟ್​ನಿಂದ ತಡೆಯಾಜ್ಞೆ ತಂದಿದ್ದಾರೆ. ಈ ಎಲ್ಲ ಫೈಲ್​ ವಿಧಾನಸೌದದ ಮೂರನೇ ಮಹಡಿಗೆ ಬಂದಿದ್ದು, ವಿಧಾನಸಭೆ ಚುನಾವಣೆ ಒಳಗೆ ಜೈಲಿಗೆ ಹೋಗುವುದು ಖಚಿತ" ಎಂದಿದ್ದಾರೆ.

"ಸಿದ್ದರಾಮಯ್ಯ ಅವರೇ ನಾಚಿಕೆಯಾಗುವುದಿಲ್ಲವೇ, ಕೋಲಾರದ ಅಭ್ಯರ್ಥಿಯಾಗಿರುವ ನೀವು ಅನ್ನರಾಮಯ್ಯ ಅಲ್ಲವೇ, ಜನ ಅಭಿಮಾನದಿಂದ ಸೇರಬೇಕಲ್ಲವೇ, ದುಡ್ಡು, ಹಣ, ಸೀರೆ, ಕೊಟ್ಟು ಜನ ಸೇರಿಸಬೇಕೇ?, ಎಲ್ಲಿ ಹೋಯಿತು ನಿಮ್ಮ ವರ್ಚಸ್ಸು ಎಂದು ಪ್ರಶ್ನೆ ಮಾಡಿರುವ ವರ್ತೂರು ಪ್ರಕಾಶ್.​ ಪ್ರತಿ ತಿಂಗಳು ಸಹಕಾರಿ ಸಂಘಗಳಿಗೆ ನೀಡುವ ಸಾಲ ಮರುಪಾವತಿಯಲ್ಲಿ ಬಡ್ಡಿ ಕ್ಲೈಮ್​ ಹಣ ಲೂಟಿ ಮಾಡಿದ್ದಾರೆ. ಪ್ರತಿ ತಿಂಗಳು ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಗೋವಿಂದಗೌಡ ಸುಮಾರು 7 ಕೋಟಿಯಷ್ಟು ಹಣ ಲೂಟಿ ಮಾಡುತ್ತಿದ್ದಾರೆ" ಎಂದು ವರ್ತೂರು ಪ್ರಕಾಶ್ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ನಾನು ಯಾರ ಕೈ ಹಿಡಿಯುತ್ತೇನೆ ಅನ್ನೋದು ಮೇ ಚುನಾವಣೆ ನಂತರ ಗೊತ್ತಾಗಲಿದೆ: ಜನಾರ್ದನ ರೆಡ್ಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.