ಕೋಲಾರ: ಶಾಸಕ, ಮಂತ್ರಿಯಾಗಿದ್ದ ವರ್ತೂರ್ ಪ್ರಕಾಶ್ಗೆ ಈ ರೀತಿ ಆಗಿರುವುದು ನನಗೆ ತುಂಬಾ ನೋವಾಗಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವರ್ತೂರ್ ಪ್ರಕಾಶ್ ವಿಚಾರದಲ್ಲಿ ನಡೆದಿರುವ ಸಂಗತಿ ಬಹಳ ನೋವಾಗಿದ್ದು, ಈ ರೀತಿ ನಡೆಸಿಕೊಳ್ಳುತ್ತಾರೆಂದು ನಾನು ಭಾವಿಸಿರಲಿಲ್ಲ. ರಾಜಕಾರಣವೇ ಬೇರೆ, ರಾಜಕಾರಣದಲ್ಲಿ ಗೆಲುವು ಸೋಲು ಎಂಬುದು ಇದ್ದದ್ದೆ, ನಾನು ರಾಜಕಾರಣದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಒಬ್ಬ ಸಮಾಜ ಸೇವಕನಿಗೆ, ಮಂತ್ರಿಯಾಗಿದ್ದವನಿಗೆ ಈ ರೀತಿ ಆಗಿರುವುದಕ್ಕೆ ನಾನೊಬ್ಬ ರಾಜಕಾರಣಿಯಾಗಿ ನೋವನ್ನು ವ್ಯಕ್ತಪಡಿಸುತ್ತಿದ್ದೇನೆ ಎಂದು ಹೇಳಿದರು.
ಪ್ರಕರಣದಲ್ಲಿ ಆರೋಪಿಗಳು ಯಾರೇ ಆದರೂ, ಎಷ್ಟೆ ದೊಡ್ಡ ವ್ಯಕ್ತಿಗಳಾದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆಗೆ ಒತ್ತಾಯಿಸಿದರು.