ETV Bharat / state

ಮಾಲೂರು ಪೊಲೀಸರ ಕಾರ್ಯಾಚರಣೆ: ನಾಲ್ವರು ಡಕಾಯಿತರ ಬಂಧನ

ದಾರಿಹೋಕರನ್ನು ದೋಚುತ್ತಿದ್ದ ನಾಲ್ವರನ್ನು ಕೋಲಾರ ಜಿಲ್ಲಾ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

author img

By

Published : Oct 24, 2019, 4:32 PM IST

ನಾಲ್ವರು ಡಕಾಯಿತರ ಬಂಧನ

ಕೋಲಾರ: ದಾರಿಹೋಕರನ್ನ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ನಾಲ್ವರು ಡಕಾಯಿತರನ್ನ ಬಂಧಿಸುವಲ್ಲಿ ಜಿಲ್ಲೆಯ ಮಾಲೂರು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ಮೂರು ದ್ವಿಚಕ್ರ ವಾಹನ ಸೇರಿ ಕೃತ್ಯಕ್ಕೆ ಬಳಸಲಾಗಿದ್ದ ಡ್ರ್ಯಾಗನ್, ಮಾಸ್ಕ್​ಗಳನ್ನ ವಶಪಡಿಸಿಕೊಂಡಿದ್ದಾರೆ. ಕಳೆದ ಅಕ್ಟೋಬರ್ 1ರಂದು ಮಾಲೂರು ತಾಲೂಕಿನ ಹಾರೋಹಳ್ಳಿ ಬಳಿ ಶಂಕರ್ ಎಂಬಾತನನ್ನ ಅಡ್ಡಗಟ್ಟಿ, ಚಾಕು ತೋರಿಸಿ ಮೊಬೈಲ್ ಹಾಗೂ ಒಂದೂವರೆ ಲಕ್ಷ ನಗದನ್ನ ಸುಲಿಗೆ ಮಾಡಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸಿಕಂದರ್, ಮುಸ್ತಾಫಾ, ಸೈಯದ್ ಶಾಮಿರ್ ಹಾಗೂ ಅಬ್ಬೇನಹಳ್ಳಿ ಗ್ರಾಮದ ಏಜಾಜ್ ಪಾಷಾ ಎಂಬುವರನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

Intro:ಕೋಲಾರ
ದಿನಾಂಕ - 24-10-19
ಸ್ಲಗ್ - ಸುಲಿಗೆಕೋರರ ಬಂಧನ
ಫಾರ್ಮೆಟ್ - ಎವಿ

ಆಂಕರ್ :ಕೋಲಾರದ ಮಾಲೂರು ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ, ದಾರಿಹೋಕರನ್ನ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ನಾಲ್ವರು ಡಕಾಯಿತರನ್ನ ಬಂದಿಸಿರುವಲ್ಲಿ ಯಶಸ್ವಿಯಾಗಿದ್ದಾರೆ.

Body:ಕೋಲಾರ ಜಿಲ್ಲಾವರಿಷ್ಟಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಮಾಲೂರು ಪೊಲೀಸರು ನಾಲ್ವರು ಡಕಾಯಿತರನ್ನ ಬಂದಿಸಿದ್ದು, ಬಂದಿತರಿಂದ ಮೂರು ದ್ವಿಚಕ್ರ ವಾಹನಗಳು ಸೇರಿದಂತೆ ಕೃತ್ಯಕ್ಕೆ ಬಳಸಲಾಗಿದ್ದ ಡ್ರ್ಯಾಗನ್, ಮಾಸ್ಕ್‍ಗಳನ್ನ ವಶಪಡಿಸಿಕೊಂಡಿದ್ದಾರೆ. ಇನ್ನು ಕಳೆದ ಅಕ್ಟೋಬರ್-1 ರಂದು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹಾರೋಹಳ್ಳಿ ಬಳಿ, ಅಬ್ಬೇನಹಳ್ಳಿ ಗ್ರಾಮದ ಶಂಕರ್ ಎಂಬಾತನನ್ನ ಅಡ್ಡಗಟ್ಟಿ, ಚಾಕು ತೋರಿಸಿ ಆತನ ಬಳಿ ಇದ್ದ ಒಂದು ಮೊಬೈಲ್ ಹಾಗೂ ಒಂದೂವರೆ ಲಕ್ಷ ನಗದನ್ನ ಸುಲಿಗೆ ಮಾಡಲಾಗಿತ್ತು. ಪ್ರಕರಣ ಸಂಭಂದ ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಸ್ಪಿ ಕಾರ್ತಿಕ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಇಂದು ಡಕಾಯಿತರನ್ನ ಬಂಧಿಸಲಾಗಿದೆ.

Conclusion:ಇನ್ನು ಬಂದಿತರು ಮಾಲೂರು ಪಟ್ಟಣದ ಸಿಕಂದರ್, ಮುಸ್ತಾಫಾ, ಸೈಯದ್ ಶಾಮಿರ್ ಹಾಗೂ ಅಬ್ಬೇನಹಳ್ಳಿ ಗ್ರಾಮದ ಏಜಾಜ್ ಪಾಷಾ ಎಂಬುವರಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.