ETV Bharat / state

ಕಾಟಾಚಾರಕ್ಕೆ ಬಂದು ಹೋದ್ರು ಸಿಎಂ ಅಂತಾ ನೆರೆ ಸಂತ್ರಸ್ತರ ಅಸಮಾಧಾನ - ಸಿಎಂ ವಿರುದ್ಧ ಆಕ್ರೋಶ

ತಮ್ಮ ಊರುಗಳಿಗೂ ಬರುತ್ತಾರೆ ಎಂದು ಕಾದಿದ್ದ ಪ್ರವಾಹ ಪೀಡಿತ ನಿರಾಶ್ರಿತರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ
author img

By

Published : Aug 29, 2019, 11:50 PM IST

ಕೊಡಗು: ನಾಡಿನ ದೊರೆ ಬರ್ತಾರೆ. ಬಂದು ನಮ್ಮ ಸಮಸ್ಯೆ ಆಲಿಸಿ ನಮಗೊಂದು ಶಾಶ್ವತ ಪರಿಹಾರ ನೀಡ್ತಾರೆ ಅಂತ ಪ್ರವಾಹದಿಂದ ಎಲ್ಲವನ್ನೂ ಕಳೆದುಕೊಂಡಿರುವ ನಿರಾಶ್ರಿತರು ಕಾದಿದ್ಧೇ ಬಂತು. ಆದರೆ ಸಿಎಂ ಮಾತ್ರ ಅಧಿಕಾರಿಗಳೊಂದಿಗೆ ಸಭೆ ಮಾಡಿ ಬಳಿಕ ಸಂತ್ರಸ್ತರ ಕೇಂದ್ರವನ್ನು ಭೇಟಿ ಮಾಡಿ ವಾಪಾಸ್ ಆಗಿದ್ದಾರೆ. ಹೀಗಾಗಿ ತಮ್ಮ ಊರುಗಳಿಗೂ ಬರುತ್ತಾರೆ ಎಂದು ಕಾದಿದ್ದ ಪ್ರವಾಹ ಪೀಡಿತ ನಿರಾಶ್ರಿತರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಟಾಚಾರಕ್ಕೆ ಬಂದು ಹೋದ್ರಾ ಸಿಎಂ ಎಂದು ನಿರಾಶ್ರಿತರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಳಿಗ್ಗೆಯಿಂದಲೂ ಸಿಎಂ ಊರಿಗೆ ಬರುತ್ತಾರೆ, ಬಂದು ನಮ್ಮ ಸಮಸ್ಯೆಗಳನ್ನು ಆಲಿಸಿ ನಮಗೊಂದು ಸಾಂತ್ವನದ ಮಾತು ಹೇಳ್ತಾರೆ ಅಂತ ಕಾದು ಕುಳಿತಿದ್ದರು. ಆದರೆ ಸಿಎಂ ಮಾತ್ರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲೇ ಇಲ್ಲ. ಬದಲಾಗಿ ಕಾಟಾಚಾರಕ್ಕೆ ಎಂಬಂತೆ ನೆಲ್ಯಹುದಿಕೇರಿಯ ಸಂತ್ರಸ್ತರನ್ನು ಭೇಟಿ ಮಾಡಿ ವಾಪಸ್ ಆಗಿದ್ದಾರೆ.

ಅವರಿಗೆ ಶಾಶ್ವತ ಪರಿಹಾರ ನೀಡುತ್ತೇವೆ. ಈಗಾಗಲೇ ಸರ್ಕಾರಿ ಜಾಗಗಳನ್ನು ಗುರುತಿಸಿದ್ದೇವೆ. ಶೆಡ್ ಹಾಕಿಕೊಳ್ಳುವವರಿಗೆ 50 ಸಾವಿರ ಕೊಡುತ್ತೇವೆ. ಬಾಡಿಗೆ ಮನೆಗಳಿಗೆ ಹೋಗುವವರಿಗೆ ತಿಂಗಳಿಗೆ 5 ಸಾವಿರ ಕೊಡುತ್ತೇವೆ ಅಂತ ಹೇಳಿ ಅಲ್ಲಿಂದ ಹೊರಟ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Intro:ಕಾಟಾಚಾರಕ್ಕೆ ಬಂದು ಹೋದ್ರಾ ಸಿಎಂ..? ಜನಪ್ರತಿನಿಧಿಗಳ ವಿರುದ್ಧ ನಿರಾಶ್ರಿತರ ಅಸಮಾಧಾನ..!

ಕೊಡಗು: ನಾಡಿನ ದೊರೆ ಬರ್ತಾರೆ.ಬಂದು ನಮ್ಮ ಸಮಸ್ಯೆ ಆಲಿಸಿ ನಮಗೊಂದು ಶಾಶ್ವತ ಪರಿಹಾರ ನೀಡ್ತಾರೆ ಅಂತ ಪ್ರವಾಹದಿಂದ ಎಲ್ಲವನ್ನೂ ಕಳೆದುಕೊಂಡಿರುವ ನಿರಾಶ್ರಿತರು ಕಾದಿದ್ಧೇ ಬಂತು. ಆದ್ರೆ ಸಿಎಂ ಮಾತ್ರ ಅಧಿಕಾರಿಗಳೊಂದಿಗೆ ಸಭೆ ಮಾಡಿ ಬಳಿಕ ಕಾಟಾಚಾರಕ್ಕೆ ಒಂದು ಸಂತ್ರಸ್ಥರ ಕೇಂದ್ರವನ್ನು ಭೇಟಿ ಮಾಡಿ ವಾಪಸ್ ಆದ್ರು.ಹೀಗಾಗಿ ತಮ್ಮ ಊರುಗಳಿಗೂ ಬರುತ್ತಾರೆ ಅಂತ ಕಾದಿದ್ದ ಪ್ರವಾಹ ಪೀಡಿತ ನಿರಾಶ್ರಿತರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹೌದು... ಬೆಳಿಗ್ಗೆಯಿಂದಲೂ ಸಿಎಂ ಊರಿಗೆ ಬರುತ್ತಾರೆ. ಬಂದು ನಮ್ಮ ಸಮಸ್ಯೆಗಳನ್ನು ಆಲಿಸಿ ನಮಗೊಂದು ಸಾಂತ್ವನದ ಮಾತು ಹೇಳ್ತಾರೆ ಅಂತ ಕಾದು ಕುಳಿತಿದ್ರು. ಆದ್ರೆ ಸಿಎಂ ಮಾತ್ರ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಲೇ ಇಲ್ಲ. ಬದಲಾಗಿ ಕಾಟಾಚಾರಕ್ಕೆ ಎಂಬಂತೆ ನೆಲ್ಯಹುದಿಕೇರಿಯ ಸಂತ್ರಸ್ಥರ ಭೇಟಿಮಾಡಿ ವಾಪಸ್ ಆದ್ರು. ಅವರಿಗೆ ಶಾಶ್ವತ ಪರಿಹಾರ ನೀಡುತ್ತೇವೆ.ಈಗಾಗಲೇ ಸರ್ಕಾರಿ ಜಾಗಗಳನ್ನು ಗುರುತ್ತಿಸಿದ್ದೇವೆ. ಶೆಡ್ ಹಾಕಿಕೊಳ್ಳುವವರಿಗೆ 50 ಸಾವಿರ ಕೊಡುತ್ತೇವೆ.ಬಾಡಿಗೆ ಮನೆಗಳಿಗೆ ಹೋಗುವವರಿಗೆ ತಿಂಗಳಿಗೆ 5 ಸಾವಿರ ಕೊಡುತ್ತೇವೆ ಅಂತ ಹೇಳಿ ಅಲ್ಲಿಂದ ಹೊರಟೆ ಬಿಟ್ಟರು ಸಿಎಂ.

ಬೈಟ್-1 ಬಿ.ಎಸ್.ಯಡಿಯೂರಪ್ಪ, ಸಿಎಂ

ಇತ್ತ ಸಿಎಂ ಬರ್ತಾರೆ ಅಂತ ಕಾದಿದ್ದ ಕುಂಬಾರಗುಂಡಿ ಮತ್ತು ಕರಡಿಗೋಡಿನ ಜನರು ಮಾತ್ರ ಸಂಪೂರ್ಣ ನಿರಾಸೆ ಅನುಭವಿಸಬೇಕಾಯಿತು.ಜಿಲ್ಲೆಯಲ್ಲಿ ಉಕ್ಕಿ ಹರಿದ ಕಾವೇರಿ ಪ್ರವಾಹದಿಂದ ನಷ್ಟವಾಗಿರುವ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಕೊಡಗಿಗೆ 500 ಕೋಟಿ ಪ್ಯಾಕೇಜ್ ಘೋಷಿಸಿದ್ರು.ಸಭೆ ಮುಗಿಸಿದ ಸಿಎಂ ಯಡಿಯೂರಪ್ಪ ಅವರು ಬಳಿಕ ನೆಲ್ಯಹುದಿಕೇರಿಯ ಸರ್ಕಾರಿ ಶಾಲೆಯಲ್ಲಿರುವ ನಿರಾಶ್ರಿತರನ್ನು ಕೇವಲ ಐದು ನಿಮಿಷಗಳ ಕಾಲ ಕಾಟಾಚಾರಕ್ಕೆ ಭೇಟಿಯಾಗಿ ಭೇಟಿಯಾದ್ರು. ಆದ್ರೆ ನೆರೆ ಪೀಡಿತ ಪ್ರದೇಶಗಳಿಗೆ ಮಾತ್ರ ಹೋಗಲೇ ಇಲ್ಲ ಇದರಿಂದಾಗಿ ಸಂತ್ರಸ್ತರು ನಮ್ಮ ಸಮಸ್ಯೆಗಳನ್ನು ಯಾರ ಹತ್ತಿರ ಹೇಳಿಕೊಳ್ಳಬೇಕು. ಎಲ್ಲವನ್ನೂ ಕಳೆದುಕೊಂಡು ತೀವ್ರ ನೋವು ಅನುಭವಿಸುತ್ತಿರುವ ನಮಗೆ ಸಿಎಂ ಸ್ಥಳಕ್ಕಾಮಿಸದೇ ಹೋಗಿರೋದು ಮತ್ತಷ್ಟು ಬೇಸರ ತರಿಸಿದೆ ಅಂತ ಆಕ್ರೋಶ ವ್ಯಕ್ತಪಡಿಸಿದರು ಸ್ಥಳೀಯ ನಿವಾಸಿ

ಬೈಟ್-2 ಶಾ ಬೋರಿಸ್, ಸ್ಥಳೀಯ ನಿವಾಸಿ

ಒಟ್ಟಿನಲ್ಲಿ ಪ್ರವಾಹ ಬಂದು ಎಲ್ಲವನ್ನೂ ಕಳೆದುಕೊಂಡಿರುವ ಕೊಡಗಿನ ಸಾವಿರಾರು ಕುಟುಂಬಗಳ ಕಣ್ಣೊರೆಸುವ ತಂತ್ರವನ್ನು ಸಿ.ಎಂ.ಯಡಿಯೂರಪ್ಪ ಅವರು ಮಾಡಿದ್ರು.ಆದ್ರೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡದಿದ್ದು, ಕಾಟಾಚಾರಕ್ಕೆ ಭೇಟಿ ನೀಡಿದ್ರು ಅಂತ ಜನರು ಆಕ್ರೋಶ ವ್ಯಕ್ತಪಡಿಸುವಂತೆ ಮಾಡಿದೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.