ಮಡಿಕೇರಿ : ಹೋಂ ಕ್ವಾರಂಟೆನ್ನಲ್ಲಿರಬೇಕಿದ್ದ ವ್ಯಕ್ತಿ ಬೇಕರಿ ವ್ಯಾಪಾರ ಮಾಡುತ್ತಿದ್ದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಬೇಕರಿಗೆ ಬೀಗ ಜಡಿದಿರುವ ಘಟನೆ ಇಲ್ಲಿನ ಚಿಕ್ಕಪೇಟೆಯಲ್ಲಿ ನಡೆದಿದೆ.
ಕೈಯಲ್ಲಿ ಹೋಂ ಕ್ವಾರಂಟೈನ್ ಸೀಲ್ ಇದ್ದರೂ ವ್ಯಕ್ತಿ ವ್ಯಾಪಾರ ಮಾಡುತ್ತಿದ್ದ. ಲಾಕ್ಡೌನ್ ನಡುವೆ ಚಿತ್ರದುರ್ಗದಲ್ಲಿದ್ದು ಮಡಿಕೇರಿಗೆ ವಾಪಸ್ ಆಗಿದ್ದ. ಇನ್ನು ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ವಶಕ್ಕೆ ಪಡೆದು ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.