ETV Bharat / state

ತಲಕಾವೇರಿಯಲ್ಲಿ ಪೂಜೆ ಅವಕಾಶವನ್ನು ಅಮ್ಮ ಕೊಡವರಿಗೆ ವಹಿಸುವಂತೆ ಮನವಿ..! - ಪೂಜಾಕೈಂಕರ್ಯ

ಅರ್ಚಕ ನಾರಾಯಣ ಆಚಾರ್​ ಅವರು ಭೂಕುಸಿತದಲ್ಲಿ ಸಾವಿಗೀಡಾದ ಹಿನ್ನೆಲೆ ಕೊಡಗಿನ ತಲಕಾವೇರಿಯಲ್ಲಿ ಪೂಜಾಕೈಂಕರ್ಯ ನೆರವೇರಿಸುವ ಅವಕಾಶವನ್ನು ತಮಗೆ ನೀಡುವಂತೆ ಅಖಿಲ ಅಮ್ಮಕೊಡವ ಸಮಾಜ ಜಿಲ್ಲಾಧಿಕಾರಿಗಳಿಗೆ ಕೋರಿದೆ.

talakaveri worship
ಅಮ್ಮ ಕೊಡವರ ಮನವಿ
author img

By

Published : Aug 23, 2020, 5:14 PM IST

ಕೊಡಗು: ಅರ್ಚಕ ನಾರಾಯಣ ಆಚಾರ್ ಅವರು ಗಜಗಿರಿ ಬೆಟ್ಟ ಕುಸಿತದಲ್ಲಿ ಸಾವಿಗೀಡಾದ ಹಿನ್ನೆಲೆ ಪೂಜಾ ಕೈಂಕರ್ಯವನ್ನು ತಮಗೆ ವಹಿಸುವಂತೆ ಅಖಿಲ ಅಮ್ಮಕೊಡವ ಸಮಾಜ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಅಮ್ಮ ಕೊಡವರ ಮನವಿ

150 ವರ್ಷಗಳ ಹಿಂದೆ ಕೊಡಗಿನ ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ಅಮ್ಮ ಕೊಡವರು ಪೂಜೆ ನೆರವೇರಿಸುತಿದ್ದರು. ಕಾಲ ಬದಲಾದಂತೆ ಆ ಪೂಜಾ ಕೈಂಕರ್ಯವನ್ನು ಬ್ರಾಹ್ಮಣ ಅರ್ಚಕರು ನೆರವೇರಿಸಿಕೊಂಡು ಬಂದಿದ್ದರು. ತಲಕಾವೇರಿಯಲ್ಲಿ ಪೂಜೆ ಸಲ್ಲಿಸುತಿದ್ದ ಅರ್ಚಕ ನಾರಾಯಣ ಆಚಾರ್ ಮತ್ತು ಅವರ ಕುಟುಂಬ ಭೂಕುಸಿತದಲ್ಲಿ ಮೃತಪಟ್ಟಿದೆ. ಈಗ ತಲಕಾವೇರಿಯಲ್ಲಿ ಮತ್ತೆ ಪೂಜಾ ಕೈಂಕರ್ಯ ನೆರವೇರಿಸಲು ನಮಗೆ ಅವಕಾಶ ನೀಡುವಂತೆ ಅಖಿಲ ಅಮ್ಮಕೊಡವ ಸಮಾಜ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಅಮ್ಮ ಕೊಡವರು ಪೂಜೆಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗೆ ಸಲ್ಲಿಸಿರುವುದರಲ್ಲಿ ನ್ಯಾಯವಿದೆ. ಅವರಿಗೆ ಅವಕಾಶ ಕೊಡುವುದರಲ್ಲಿ ತಪ್ಪಿಲ್ಲ ಎನ್ನುವುದು ಅಮ್ಮಕೊಡವ ಮುಖಂಡರ ಅಭಿಪ್ರಾಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.