ETV Bharat / state

ಮೂಲ ಬೃಂದಾವನದ ಬಗ್ಗೆ ಚರ್ಚೆ: ವಿವಾದದ ಕೇಂದ್ರಬಿಂದುವಾದ ಕಾಗಿಣಾ ನದಿ ತಟದ ಉತ್ತರಾದಿ ಮಠ

ಬೃಂದಾವನ ಅಂದ್ರೆ ಭಕ್ತಗಣಕ್ಕೆ ಪರಮಾನಂದ. ಅಂತಹ ಬೃಂದಾವನದ ಬಗ್ಗೆ ಇದೀಗ ಬಹಿರಂಗ ಚರ್ಚೆಯಾಗಿ ಮತ್ತೆ ವಿವಾದ ಹುಟ್ಟಿಕೊಂಡಿದೆ. ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕಾಗಿಣಾ ನದಿ ತಟದಲ್ಲಿನ ಉತ್ತರಾದಿ ಮಠ ಕೋಟಿ ಕೋಟಿ ಭಕ್ತ ಸಮಾಜವನ್ನು ಹೊಂದಿದೆ. ಈಗ ಉತ್ತರಾದಿ ಮಠದಲ್ಲಿನ ಜಯತೀರ್ಥರ ಮೂಲ ಬೃಂದಾವನದ ಬಗ್ಗೆ ರಾಯರ ಮಠದ ಭಕ್ತಗಣ ಆಕ್ಷೇಪ ಎತ್ತಿದೆ.

ವಿವಾದದ ಕೇಂದ್ರಬಿಂದುವಾದ ಕಾಗಿಣಾ ನದಿ ತಟದ ಉತ್ತರಾದಿ ಮಠ!

author img

By

Published : Jun 23, 2022, 5:49 PM IST

Updated : Jun 23, 2022, 5:54 PM IST

ಕಲಬುರಗಿ : ಕೋಟ್ಯಂತರ ಭಕ್ತರ ಸಮೂಹವನ್ನು ಹೊಂದಿರುವ ಜಿಲ್ಲೆಯ ಸೇಡಂ ತಾಲೂಕಿನ ಕಾಗಿಣಾ ನದಿ ತಟದಲ್ಲಿನ ಉತ್ತರಾದಿ ಮಠ ಸದ್ಯ ವಿವಾದದ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಬೃಂದಾವನ ಅಂದ್ರೆ ಭಕ್ತಗಣಕ್ಕೆ ಪರಮಾನಂದ. ಅಂತಹ ಬೃಂದಾವನದ ಬಗ್ಗೆ ಇದೀಗ ಬಹಿರಂಗ ಚರ್ಚೆಯಾಗಿ ಮತ್ತೆ ವಿವಾದ ಹುಟ್ಟಿಕೊಂಡಿದೆ.

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕಾಗಿಣಾ ನದಿ ತಟದಲ್ಲಿನ ಉತ್ತರಾದಿ ಮಠ ಕೋಟಿ ಕೋಟಿ ಭಕ್ತ ಸಮಾಜವನ್ನು ಹೊಂದಿದೆ. ಅಂತಹ ಉತ್ತರಾದಿ ಮಠದಲ್ಲಿನ ಜಯತೀರ್ಥರ ಮೂಲ ಬೃಂದಾವನದ ಬಗ್ಗೆ ರಾಯರ ಮಠದ ಭಕ್ತಗಣ ಆಕ್ಷೇಪ ಎತ್ತಿದ್ದು, ಉತ್ತರಾದಿ ಮಠದ ಭಕ್ತರನ್ನು ಕೆರಳಿಸುವಂತೆ ಮಾಡಿದೆ. ಮಳಖೇಡದಲ್ಲಿರೋದು ಮೂಲ ಬೃಂದಾವನವಲ್ಲ. ಆನೆಗೊಂದಿಯ ನವ ವೃಂದಾವನದಲ್ಲಿರೋದೇ ಮೂಲ ಬೃಂದಾವನ. ಹಾಗಾಗಿ ಅದುವೇ ಶ್ರೇಷ್ಠ ಅನ್ನೋ ಮಂತ್ರಾಲಯ ಶ್ರೀಗಳ ಮಾತಿನ ಕುರಿತು ಇದೀಗ ಎಲ್ಲೆಡೆ ಚರ್ಚೆ ಆಗ್ತಿದೆ.

ವಿವಾದದ ಕೇಂದ್ರಬಿಂದುವಾದ ಕಾಗಿಣಾ ನದಿ ತಟದ ಉತ್ತರಾದಿ ಮಠ

ಉತ್ತರಾದಿ ಮಠಕ್ಕೆ 600 ವರ್ಷಗಳ ಇತಿಹಾಸವಿದೆ. ಅಷ್ಟೇ ಅಲ್ಲದೆ ಮೂಲ ಬೃಂದಾವನ ಮಳಖೇಡದಲ್ಲಿದೆ ಅನ್ನೋದು ಇತಿಹಾಸ. ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ ನ್ಯಾಯಸುಧಾ ಮಂಗಳ ಮಹೋತ್ಸವ ನಡೆದಿದೆ ಎನ್ನುತ್ತಾರೆ ಮಧ್ವಮತದ ಭಕ್ತಾದಿಗಳು. ಇಷ್ಟಾದ್ರೂ ಕೆಲವರು ಇಲ್ಲಸಲ್ಲದ ಗೊಂದಲ ಸೃಷ್ಟಿಸುತ್ತಿದ್ದಾರೆ ಅನ್ನೋ ಮಾತು ಕೆಲವರದ್ದು.

ಇದನ್ನೂ ಓದಿ: ಏಕನಾಯಕತ್ವದ ಕೂಗು.. ಎಐಎಡಿಎಂಕೆ ಸಭೆಯಿಂದ ಹೊರನಡೆದ ಪನ್ನೀರ್​​ ಸೆಲ್ವಂ

Last Updated : Jun 23, 2022, 5:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.