ಕಲಬುರಗಿ: ಕಲಬುರಗಿಯ ಪ್ರಸಿದ್ಧ ಕೋರಂಟಿ ಹನುಮಾನ್ ದೇವಸ್ಥಾನಕ್ಕೆ ಕನ್ನ ಹಾಕಿದ್ದ ಮೂವರು ಆರೋಪಿಗಳಿಗೆ ಜೆ.ಎಂ.ಎಫ್.ಸಿ ನ್ಯಾಯಲಯ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಆರೋಪಿಗಳು 2014ರಲ್ಲಿ ತಡರಾತ್ರಿ ಗರ್ಭಗುಡಿಯ ಬಾಗಿಲು ಮುರಿದು 5 ಲಕ್ಷ ರೂಪಾಯಿ ಮೌಲ್ಯದ ದೇವರ ಬೆಳ್ಳಿ ಕವಚ ಕದ್ದಿದ್ದರು. ಚಿನ್ನು ಅಲಿಯಾಸ್ ಚಿನ್ನಪ್ಪಾ, ಯಲ್ಲಾಲಿಂಗ ಹಾಗೂ ಗೋವಿಂದ ಶಿಕ್ಷೆಗೆ ಗುರಿಯಾದ ಆರೋಪಿಗಳು.
2014ರಲ್ಲಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೋಲಿಸರು, ಕಳ್ಳರನ್ನು ಬಂಧಿಸಿ ನ್ಯಾಯಲಯಕ್ಕೆ ಒಪ್ಪಿಸಿದರು. ಕಳುವು ಸಾಬೀತಾದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳಿಗೆ ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಧೀಶರು 3 ವರ್ಷ ಕಠಿಣ ಕಾರಾಗೃಹ ಮತ್ತು ತಲಾ 20 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.