ETV Bharat / state

ಕುಖ್ಯಾತ ಸರಗಳ್ಳರ ಬಂಧನ..13.8 ಲಕ್ಷ ಮೌಲ್ಯದ ಚಿನ್ನಾಭರಣ ವಶ - ಕಲಬುರಗಿಯಲ್ಲಿ ನಾಲ್ವರು ಸರಗಳ್ಳರ ಬಂಧನ ಸುದ್ದಿ

ಕಲಬುರಗಿ ನಗರದ ಚೌಕ್ ಪೊಲೀಸರು ಜಿಲ್ಲೆಯ ಹಲವೆಡೆ ಸರಗಳ್ಳತನ ಮಾಡಿದ್ದ ಕುಖ್ಯಾತ ನಾಲ್ವರು ಸರಗಳ್ಳರನ್ನು ಬಂಧಿಸಿದ್ದಾರೆ.

gold chain thieves arrested in kalburgi
ಕಲಬುರಗಿ ಪೊಲೀಸರಿಂದ ಕಲಬುರಗಿ ಪೊಲೀಸರಿಂದ ಸರಗಳ್ಳರ ಬಂಧನ
author img

By

Published : Sep 11, 2020, 8:17 PM IST

ಕಲಬುರಗಿ: ಮಹಿಳೆಯರನ್ನೆ ಟಾರ್ಗೆಟ್ ಮಾಡಿ ಕೊರಳಿಗೆ ಕೈಹಾಕಿ ಸರಗಳ್ಳತನ ಮಾಡುತ್ತಿದ್ದ ಕುಖ್ಯಾತ ಸರಗಳ್ಳರ ಬಂಧಿಸುವಲ್ಲಿ ನಗರದ ಚೌಕ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಸರಗಳ್ಳರ ಬಂಧನ
ಕಳ್ಳರ ಬೇಟೆಗೆ ಜಾಲ ಬೀಸಿದ ಪೊಲೀಸರು, ದೀಪಕ್ ರಾಠೋಡ್, ರೂಪೇಶ್ ಪವಾರ, ಬಲ್ಯಾ ಮತ್ತು ಸಂತೋಷ ಪವಾರ ಎಂಬ 4 ಜನ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಖದೀಮರು ನಗರದ ಹಲವೆಡೆ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯರ ಕೊರಳಿಗೆ ಕೈಹಾಕಿ ಸರ ಕದ್ದು ಪರಾರಿಯಾಗುತ್ತಿದ್ರು. ಇವರ ವಿರುದ್ದ ಚೌಕ್, ಎಂಬಿ ನಗರ, ಬ್ರಹ್ಮಪೂರ್, ಸ್ಟೇಷನ್ ಬಜಾರ್ ಠಾಣೆ ವ್ಯಾಪ್ತಿಯ ಒಟ್ಟು 11 ಪ್ರಕರಣಗಳು ದಾಖಲಾಗಿವೆ.

ಪ್ರಕರಣದ ಬೆನ್ನತ್ತಿದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ. ಬಂಧಿತರಿಂದ 13.8 ಲಕ್ಷ ಮೌಲ್ಯದ 271 ಗ್ರಾಂ. ಚಿನ್ನಾಭರಣ ಮತ್ತು ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.