ಹಾವೇರಿ: ಎತ್ತಿನ ಮೈತೊಳೆಯಲು ಹೋಗಿದ್ದ ಇಬ್ಬರು ನೀರು ಪಾಲಾದ ಘಟನೆ ಹಾವೇರಿ ತಾಲೂಕಿನ ಹಂದಿಗೆನೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಪರಮೇಶಪ್ಪ ಕಮ್ಮಾರ (62) ಮತ್ತು ಪ್ರಶಾಂತ ಕೊಂಚಿಗೇರಿ (16) ಎಂದು ಗುರುತಿಸಲಾಗಿದೆ.
ವರದಾ ನದಿಯಲ್ಲಿ ಎತ್ತಿನ ಮೈತೊಳೆಯಲು ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.
ಸಂಬಂಧಿಕರ ಜೊತೆ ನದಿಗೆ ತೆರಳಿದ್ದ ಪ್ರಶಾಂತ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಪ್ರಶಾಂತ ನೀರಲ್ಲಿ ಮುಳುಗುತ್ತಿರುವುದನ್ನು ಕಂಡು ಪರಮೇಶಪ್ಪ ಆತನ ರಕ್ಷಣೆಗೆ ನೀರಿಗಿಳಿದಿದ್ದಾರೆ. ಪರಿಣಾಮ ಅವರೂ ಕೂಡಾ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.
ಪರಮೇಶಪ್ಪ ಮತ್ತು ಪ್ರಶಾಂತ ಮೃತದೇಹಕ್ಕಾಗಿ ಶೋಧಕಾರ್ಯ ಆರಂಭವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ನೀರಿನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.