ETV Bharat / state

ಹಾವೇರಿ: ಮೂರು ತಿಂಗಳಿನಿಂದ ಆರೋಗ್ಯ ಕವಚ 108 ಆ್ಯಂಬುಲೆನ್ಸ್​​ ಸಿಬ್ಬಂದಿ ಕೈ ಸೇರಿಲ್ಲ ಸಂಬಳ! - ಆರೋಗ್ಯ ಕವಚ ಅಂಬ್ಯುಲೆನ್ಸ್

ಮೂರು ತಿಂಗಳಿನಿಂದ ಆರೋಗ್ಯ ಕವಚ 108 ಆ್ಯಂಬುಲೆನ್ಸ್ ಸಿಬ್ಬಂದಿಗೆ ವೇತನವಾಗದೇ ಜೀವನ ಬಂಡಿ ದೂಡಲು ಕಷ್ಟ ಪಡುತ್ತಿದ್ದಾರೆ.

salary problem for Arogya Kavacha ambulance staff
ಆರೋಗ್ಯ ಕವಚ 108 ಅಂಬ್ಯುಲೆನ್ಸ್ ಸಿಬ್ಬಂದಿಯ ವೇತನ ಸಮಸ್ಯೆ
author img

By

Published : Mar 23, 2022, 8:55 AM IST

ಹಾವೇರಿ: ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಕವಚ 108 ಆ್ಯಂಬುಲೆನ್ಸ್​​ ಸಿಬ್ಬಂದಿಗೆ ಕಳೆದ ಮೂರು ತಿಂಗಳಿನಿಂದ ವೇತನವಾಗಿಲ್ಲ. ಜಿಲ್ಲೆಯಲ್ಲಿ 22 ಆ್ಯಂಬುಲೆನ್ಸ್​​ಗಗಳಿದ್ದು ಅವುಗಳಲ್ಲಿ 85 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಈ ಸಿಬ್ಬಂದಿಗೆ ಮೂರು ತಿಂಗಳಿನಿಂದ ವೇತನವಾಗಿಲ್ಲ. ಇದರಿಂದ ತಮ್ಮ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

ಆರೋಗ್ಯ ಕವಚ 108 ಅಂಬ್ಯುಲೆನ್ಸ್ ಸಿಬ್ಬಂದಿಯ ವೇತನ ಸಮಸ್ಯೆ

ನಮಗೂ ಸಹ ವೃದ್ಧ ತಂದೆ ತಾಯಿಯರಿದ್ದಾರೆ. ಶಾಲೆಗೆ ಹೋಗುವ ಮಕ್ಕಳಿದ್ದಾರೆ. ಹೀಗಿರುವಾಗ ವೇತನವಾಗಿಲ್ಲ ಎಂದರೆ ಹೇಗೆ ಜೀವನ ನಡೆಸಬೇಕು ಎಂದು ಪ್ರಶ್ನಿಸಿದ್ದಾರೆ. ಈ ಕುರಿತಂತೆ ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಕೇಳಿದರೆ ಅವರಲ್ಲಿ ಸ್ಪಷ್ಟ ಉತ್ತರವಿಲ್ಲ. ಜಿವಿಕೆ ಸಂಸ್ಥೆಯ ಮುಖ್ಯಸ್ಥರನ್ನು ಕೇಳಿದರೆ ಸರ್ಕಾರದಿಂದ ಅನುದಾನ ಬಂದಿಲ್ಲ ಎನ್ನುತ್ತಿದ್ದಾರೆ. ಸರ್ಕಾರಕ್ಕೆ ಮನವಿ ಮಾಡಿದರೆ ಅವರು ಸಂಸ್ಥೆಯ ಕಾರ್ಯ ವೈಫಲ್ಯದ ಬಗ್ಗೆ ಹೇಳುತ್ತಾರೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಬಾಲ್ಯ ವಿವಾಹದಲ್ಲಿ ಕರ್ನಾಟಕಕ್ಕೆ ನಂಬರ್-1 ಸ್ಥಾನ: ಸದನದಲ್ಲಿ ಒಪ್ಪಿಕೊಂಡ ಸರ್ಕಾರ

ಜಿವಿಕೆ ಸಂಸ್ಥೆಯ ಮುಖ್ಯಸ್ಥರ ಮತ್ತು ಸರ್ಕಾರದ ನಡುವಿನ ಸಮಸ್ಯೆಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು 108 ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೇತನವಿಲ್ಲದ ಕಾರಣ ಕೈಗೆ ಕಪ್ಪು ಬಟ್ಟೆ ಧರಿಸಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಇದು ಹಾವೇರಿ ಜಿಲ್ಲೆಯ ಸಮಸ್ಯೆ ಮಾತ್ರವಲ್ಲ ರಾಜ್ಯದಲ್ಲಿ 3,500 ಕ್ಕೂ ಅಧಿಕ ಸಿಬ್ಬಂದಿ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರ, ಸಂಸ್ಥೆ ತಮಗೆ ವೇತನ ನೀಡಬೇಕು. ಈ ತಿಂಗಳ 25ರವರೆಗೆ ಕಾಯುತ್ತೇವೆ. ನಂತರ ನಮ್ಮದೇ ಹಾದಿ ತುಳಿಯಬೇಕಾಗುತ್ತದೆ ಎಂದು ಆರೋಗ್ಯ ಕವಚ ಸಿಬ್ಬಂದಿ, ಆರೋಗ್ಯ ಕವಚ ನೌಕರರ ಸಂಘ ಎಚ್ಚರಿಕೆ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.