ಹಾವೇರಿ : ಕೊರೊನಾ ಭಯದಿಂದಾಗಿ ಅನಾಥ ಶವ ಸಾಗಿಸಲು ಪರದಾಡಿದ ಘಟನೆ ನಗರದಲ್ಲಿ ನಡೆದಿದೆ. ನಗರದ ಜಾನುವಾರು ಮಾರುಕಟ್ಟೆಯಲ್ಲಿ ಕಳೆದ ಕೆಲ ದಿನಗಳಿಂದ ವಾಸವಾಗಿದ್ದ ವ್ಯಕ್ತಿಯೊಬ್ಬರು ಮಂಗಳವಾರ ಮುಂಜಾನೆ ಅಸುನೀಗಿದ್ದರು.
ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಮೃತನ ಗುರುತು ಪತ್ತೆ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಮೃತನ ಶವ ಸಾಗಿಸಲು ಸಾರ್ವಜನಿಕರನ್ನು ಕರೆದಾಗ, ಯಾರೊಬ್ಬರು ಮುಂದೆ ಬಂದಿಲ್ಲ ಎನ್ನಲಾಗಿದೆ.
ಇಂತಹ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಅಬ್ದುಲ್ ಖಾದರ್ ಶವ ಸಾಗಿಸಲು ಮುಂದಾಗಿದ್ದಾರೆ. ಇದೇ ಸಮಯದಲ್ಲಿ ಮಾರುಕಟ್ಟೆಗೆ ಈರುಳ್ಳಿ ತೆಗೆದುಕೊಂಡು ಬಂದಿದ್ದ ಟಂಟಂ ಚಾಲಕ ಮುಂದೆ ಬಂದಿದ್ದಾರೆ. ನಂತರ ಅಬ್ದುಲ್ ಖಾದರ್ ಮತ್ತು ಚಾಲಕ ಸೇರಿ ಶವವನ್ನು ಶವಾಗಾರಕ್ಕೆ ಸಾಗಿಸಿದ್ದಾರೆ.
ಮೊದಲೆಲ್ಲಾ ಈ ರೀತಿಯ ಕೆಲಸಗಳಿಗೆ ಸಾರ್ವಜನಿಕರು ಮುಂದಾಗುತ್ತಿದ್ದರು. ಇದೀಗ ಕೊರೊನಾದಿಂದಾಗಿ ಈ ರೀತಿಯ ಕೆಲಸಕ್ಕೆ ಯಾರೊಬ್ಬರು ಮುಂದೆ ಬರುತ್ತಿಲ್ಲ ಎಂದು ಅಬ್ದುಲ್ ಖಾದರ್ ಬೇಸರ ವ್ಯಕ್ತಪಡಿಸಿದ್ದಾರೆ.
ಓದಿ: ಉಡುಪಿ ಡಿಸಿ ಮಾಸ್ಕ್ ಡ್ರೈವ್: ತುಂಬಿದ ಬಸ್ನಿಂದ ಇಳಿಸಿದ್ದಕ್ಕೆ ವಿದ್ಯಾರ್ಥಿಗಳ ಆಕ್ರೋಶ