ಹಾವೇರಿ: ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಕೋಡಿಹಳ್ಳಿ ಚಂದ್ರೇಶೇಖರ್ ಬಣ ಇದೇ 26ರಂದು ಬೆಂಗಳೂರಿನಲ್ಲಿ ಜನಗಣ ಪರೇಡ್ ನಡೆಸಲಿದೆ. ಅಂದು ರಾಜ್ಯದ ವಿವಿಧ ಮೂಲೆಗಳಿಂದ ಸಹಸ್ರಾರು ಟ್ರ್ಯಾಕ್ಟ್‌ರಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಪೂಜಾರ್ ತಿಳಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಿ.ಎಂ.ಯಡಿಯೂರಪ್ಪ ಗಣರಾಜ್ಯೋತ್ಸವ ಆಚರಿಸುತ್ತಿದ್ದಂತೆ ತಮ್ಮ ಪರೇಡ್ ಆರಂಭವಾಗಲಿದೆ. ಬೆಂಗಳೂರು ಸಂಪರ್ಕಿಸುವ ಪ್ರಮುಖ ರಸ್ತೆಗಳೆಲ್ಲಾ ರೈತರ ಟ್ರ್ಯಾಕ್ಟರ್‌ಗಳಿಂದ ಬಂದ್ ಆಗಲಿವೆ ಎಂದು ಮಾಲತೇಶ್ ತಿಳಿಸಿದರು.
ಸರ್ಕಾರ ಎಚ್ಚೆತ್ತು ರೈತ ವಿರೋಧಿ ನೀತಿಗಳನ್ನು ಕೈಬಿಡಬೇಕು. ಇಲ್ಲದಿದ್ದರೆ ಬೆಂಗಳೂರಿನಿಂದ ನೇರವಾಗಿ ದೆಹಲಿ ಪ್ರತಿಭಟನೆಗೆ ಟ್ರ್ಯಾಕ್ಟರ್ ತಗೆದುಕೊಂಡು ಹೋಗುತ್ತೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.