ETV Bharat / state

ಕೊರೊನಾ ದೃಢವಾಗ್ತಿದ್ದಂತೆ ಹಾವೇರಿಯಲ್ಲಿ ಸೋಂಕಿತ ಎಸ್ಕೇಪ್​.. ಕಬ್ಬಿನ ಗದ್ದೆಯಲ್ಲಿ ಆ್ಯಂಬುಲೆನ್ಸ್​​ ಸಿಬ್ಬಂದಿ ಹುಡುಕಾಟ ​ - covid positive patient escapes,

ಕೊರೊನಾ ದೃಢಪಡುತ್ತಿದ್ದಂತೆ ವ್ಯಕ್ತಿಯೋರ್ವ ಆರೋಗ್ಯ ಇಲಾಖೆ ಸಿಬ್ಬಂದಿ ಕೈಗೆ ಸಿಗದಂತೆ ಕಬ್ಬಿನ ಗದ್ದೆಯಲ್ಲಿ ಎಸ್ಕೇಪ್​ ಆಗಿದ್ದಾನೆ. ಆ್ಯಂಬುಲೆನ್ಸ್​ನಲ್ಲಿ ಕರೆತರಲು ಹೋದಾಗ ಸೋಂಕಿತ ಓಡಿಹೋಗಿರುವುದು ಹಾವೇರಿ ಜಿಲ್ಲೆಯ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸ್​ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

covid patient escape
ಕೊರೊನಾ ಸೋಂಕಿತ ಪರಾರಿ
author img

By

Published : Apr 29, 2021, 5:21 PM IST

Updated : Apr 29, 2021, 8:33 PM IST

ಹಾವೇರಿ: ಕೊರೊನಾ ಪಾಸಿಟಿವ್ ಬಂದ ವ್ಯಕ್ತಿವೋರ್ವ ಕಬ್ಬಿನ ಗದ್ದೆಯಲ್ಲಿ ಓಡಿ ಹೋಗಿರುವ ಘಟನೆ ತಾಲೂಕಿನ ಕಬ್ಬೂರು ತಾಂಡಾದಲ್ಲಿ ನಡೆದಿದೆ.

35 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಯ ಗಂಟಲು ಮತ್ತು ಮೂಗಿನ ದ್ರವವನ್ನ ಬುಧವಾರ ಪರೀಕ್ಷೆ ಮಾಡಲಾಗಿತ್ತು. ವರದಿ ಪಾಸಿಟಿವ್ ಬರುತ್ತಿದ್ದಂತೆ ಆ್ಯಂಬುಲೆನ್ಸ್​ ಸಿಬ್ಬಂದಿ ಆ ವ್ಯಕ್ತಿಯನ್ನ ಕರೆತರಲು ಇಂದು ತಾಂಡಾಕ್ಕೆ ಹೋಗಿದ್ದರು. ಆ್ಯಂಬುಲೆನ್ಸ್ ಬರುತ್ತಿದ್ದಂತೆ ಮನೆಯಿಂದ ತಪ್ಪಿಸಿಕೊಂಡ ಸೋಂಕಿತ ಸಮೀಪದಲ್ಲಿರುವ ಕಬ್ಬಿನ ಗದ್ದೆಯೊಳಗೆ ಮಾಯವಾಗಿದ್ದಾನೆ.

ಕೊರೊನಾ ಪಾಸಿಟಿವ್​ ಅನ್ನೋದನ್ನು ತಿಳಿದು ವ್ಯಕ್ತಿ ಪರಾರಿ.. ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿಗೆ ತಲೆಬಿಸಿ ​

ಆ್ಯಂಬುಲೆನ್ಸ್ ಸಿಬ್ಬಂದಿ ತೌಪಿಕ್​ ಪಠಾಣ್​ ಮತ್ತು ಶಂಕರ ಲಮಾಣಿ, ಗ್ರಾಮಸ್ಥರು ಸೋಂಕಿತನ ಪತ್ತೆಗಾಗಿ ಕಬ್ಬಿನ ಗದ್ದೆಯಲ್ಲಿ ಹುಡುಕಾಟ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಗ್ರಾಮಾಂತರ ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ಸಹ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಹಾವೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಸೋಂಕಿತ ವ್ಯಕ್ತಿ ತಪ್ಪಿಸಿಕೊಂಡಿರುವುದು ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.

Last Updated : Apr 29, 2021, 8:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.