ETV Bharat / state

ಬೇಡಿಕೆ ಈಡೇರಿಸುವಂತೆ ಆಯುಷ್​ ವೈದ್ಯರ ಆಗ್ರಹ - ಆಯುಷ್ ವೈದ್ಯರ ಅನಿರ್ದಿಷ್ಟಾವಧಿ ಮುಷ್ಕರ

ಸರ್ಕಾರ ಶೀಘ್ರವೇ ಆಯುಷ್ ವೈದ್ಯರ ಬೇಡಿಕೆಗಳನ್ನ ಈಡೇರಿಸಬೇಕು ಎಂದು ಆಯುಷ್ ಫೆಡರೇಶನ್ ಆಫ್ ಇಂಡಿಯಾ ಹಾವೇರಿ ಜಿಲ್ಲಾಧ್ಯಕ್ಷ ಸುನಿಲ್ ಹಿರೆಮಠ ಮನವಿ ಮಾಡಿದ್ದಾರೆ.

Protest of ayush doctors
Protest of ayush doctors
author img

By

Published : Jul 17, 2020, 4:30 PM IST

ಹಾನಗಲ್: ಸರ್ಕಾರ ಶೀಘ್ರವೇ ಆಯುಷ್ ವೈದ್ಯರ ಬೇಡಿಕೆಗಳನ್ನ ಈಡೇರಿಸಬೇಕು ಎಂದು ಆಯುಷ್ ಫೆಡರೇಶನ್ ಆಫ್ ಇಂಡಿಯಾ ಹಾವೇರಿ ಜಿಲ್ಲಾಧ್ಯಕ್ಷ ಸುನಿಲ್ ಹಿರೆಮಠ ಮನವಿ ಮಾಡಿದ್ದಾರೆ.

ಸುನಿಲ್ ಹಿರೆಮಠ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಆಯುಷ್ ವೈದ್ಯರ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆದಿದ್ದು, ಇದಕ್ಕೆ ಬೆಂಬಲವಾಗಿ ಹಾವೇರಿ ಜಿಲ್ಲೆಯ ಖಾಸಗಿ ಆಯುಷ್ ವೈದ್ಯರು ಆಸ್ಪತ್ರೆಗಳನ್ನ ಬಂದ್ ಮಾಡುವುದರ ಮೂಲಕ ಬೆಂಬಲ ಸೂಚಿಸಿದ್ದೇವೆ. ಈಗಾಗಲೇ ನಮ್ಮ ಸರ್ಕಾರಿ ವೈದ್ಯರು ಕೆಲಸ ಸ್ಥಗಿತಗೊಳಿಸಿದ್ದಾರೆ. ಕೆಲ ವೈದ್ಯರು ರಾಜೀನಾಮೆ ನೀಡಿದ್ದಾರೆ.

ಕಳೆದ ಮೂರು ತಿಂಗಳಿಂದ ಸರ್ಕಾರಿ ಆಯುಷ್ ವೈದ್ಯರು ತಮ್ಮ ಜೀವದ ಹಂಗು ತೊರೆದು ಎಲ್ಲಾ ರೀತಿಯ ಸೇವೆ ಸಲ್ಲಿಸಿದ್ದಾರೆ. ಕಳೆದ 13 ವರ್ಷದಿಂದ ನಮ್ಮ ವೈದ್ಯರಿಗೆ ತಾರತಮ್ಯವಾಗುತ್ತಲೇ ಬಂದಿದೆ. ಸೇವಾ ಭದ್ರತೆ ಇಲ್ಲ, ಜೊತೆಗೆ ಅವರ ಕುಟುಂಬ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ. ಹಾಗಾಗಿ ಸರ್ಕಾರ ಆಯುಷ್ ವೈದ್ಯರ ಬೇಡಿಕೆಗಳನ್ನ ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.