ETV Bharat / state

ಕೊರೊನಾ ಬಂತೆಂದು ರಜೆ ಕೊಟ್ರೆ ಹೀಗಾ ಮಾಡೋದು...?

ಕೊರೊನಾ ಭೀತಿ ತಡೆಯಲು ಸರ್ಕಾರ ಮುಂದಾದ್ರೆ, ರಜೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರೋ ಘಟನೆ ಹೆಚ್ಚುತ್ತಿದೆ. ಸಕಲೇಶಪುರದಲ್ಲಿ ಕಂಠಪೂರ್ತಿ ಕುಡಿದು ಗಲಾಟೆ ಮಾಡಿದ ನಾರೀಮಣಿಯರ ಪ್ರಕರಣದ ಬೆನ್ನಲ್ಲೇ ಇದೀಗ ಮತ್ತೊಂದು ಯುವಕರ ತಂಡ ಜೀವದ ಜೊತೆ ಚೆಲ್ಲಾಟ ಆಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

youngsters making problem in the name of enjoyment in Hassan
ಕೊರೊನಾ ಭೀತಿಗೆ ರೆಜೆ ಘೋಷಿಸಿದ ಸರ್ಕಾರ...ಯುವಕ-ಯುವತಿಯರ ಪುಂಡಾಟ
author img

By

Published : Mar 18, 2020, 12:56 PM IST

ಹಾಸನ: ಹತ್ತು ದಿನಗಳ ಕಾಲ ಸರ್ಕಾರ ರಜೆ ಘೋಷಣೆ ಮಾಡಿದ್ದರಿಂದ ಕೆಲ ಯುವಕ-ಯುವತಿಯರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಗಮಿಸಿ ಕುಣಿದು ಕುಪ್ಪಳಿಸುವುದರ ಜೊತೆಗೆ ಇತರರಿಗೆ ಮೋಜು ಮಸ್ತಿಯ ನೆಪದಲ್ಲಿ ತೊಂದರೆ ಕೊಡುತ್ತಿದ್ದಾರೆ.

ಸಕಲೇಶಪುರದಲ್ಲಿ ಕಂಠಪೂರ್ತಿ ಕುಡಿದು ಗಲಾಟೆ ಮಾಡಿದ ನಾರೀಮಣಿಯರ ಪ್ರಕರಣದ ಬೆನ್ನಲ್ಲೇ ಇದೀಗ ಮತ್ತೊಂದು ಯುವಕರ ತಂಡ ಜೀವದ ಜೊತೆ ಚೆಲ್ಲಾಟ ಆಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದ ಸುಬ್ರಮಣ್ಯ ದೇವಸ್ಥಾನದ ದರ್ಶನಕ್ಕೆಂದು ರಾಮನಾಥಪುರ ತಾಲೂಕಿನ ಮೂರು ಕುಟುಂಬಗಳು ಬಂದಿದ್ದು, ಸಮೀಪದಲ್ಲಿರುವ ಕಾವೇರಿ ಹೊಳೆಯಲ್ಲಿ ಸ್ನಾನ ಮಾಡಲು ಮುಂದಾಗಾಗ ಅಲ್ಲಿಗೆ ಅದೇ ಸಮಯಕ್ಕೆ ಬಂದ ಕುಶಲನಗರ ಮೂಲದ ಸುಮಾರು ಇಪ್ಪತ್ತು ಮಂದಿ ಕಾಲೇಜು ಹುಡುಗರು ಸ್ನಾನಕ್ಕೆಂದು ನದಿಗೆ ಇಳಿದಿದ್ದಾರೆ.

ಕೊರೊನಾ ಭೀತಿಗೆ ರೆಜೆ ಘೋಷಿಸಿದ ಸರ್ಕಾರ...ಯುವಕ-ಯುವತಿಯರ ಪುಂಡಾಟ

ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಈ ಕುಟುಂಬದ ಸದಸ್ಯರಲ್ಲಿ ಒಬ್ಬರು(ರವಿ) ಕಾಲು ಯುವಕನ ದೇಹಕ್ಕೆ ತಾಕಿದೆ. ಕಾಲು ತಾಕಿದ ಈ ಸಣ್ಣ ವಿಚಾರಕ್ಕೆ ನದಿಯಲ್ಲಿಯೇ ಯುವಕರು, ರವಿಯೊಂದಿಗೆ ಮಾತಿನ ಚಕಮಕಿ ನಡೆದಿದೆ. ನನಗೆ ಗೊತ್ತಿಲ್ಲದೆ ತಾಕಿದೆ ಕ್ಷಮೆ ಇರಲಿ ಅಂತ ಕೇಳಿಕೊಂಡರೂ ಕೂಡಾ ಪಾನಮತ್ತ ಯುವಕರು ನದಿಯಿಂದ ಹೊರಬಂದು ದೊಣ್ಣೆ ಮತ್ತು ಕಲ್ಲಿನಿಂದ ಹಲ್ಲೆ ಮಾಡಿ ಅಲ್ಲಿಂದ ಒಂದು ಕಾರಿನಲ್ಲಿ ಪರಾರಿಯಾಗಿದ್ದಾರೆ.

ಎಸ್ಕೇಪ್ ಆಗೋ ಧಾವಂತದಲ್ಲಿ ತಾವು ತಂದಿದ್ದ ಮತ್ತೊಂದು ಕಾರನ್ನ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರಿಂದ ಸದ್ಯ ಕಾರನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಹಲ್ಲೆಗೊಳಗಾದ ರಾಮನಾಥಪುರದ ರವಿ(34), ಪ್ರದೀಪ್ (33), ಬಸವರಾಜ್ (38) ಮತ್ತು ಕಿರಣ್(29) ಎಂಬುವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅರಕಲಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಹಲ್ಲೆಗೊಳಗಾದ ರವಿ ಎಂಬವರ ಪತ್ನಿ ಆಶಾ ಕೊಣನೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿ ಈ ಸಂಬಂಧ ತಪ್ಪು ಮಾಡಿದವರಿಗರ ತಕ್ಕ ಶಿಕ್ಷೆ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.