ETV Bharat / state

ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ: ಶಾಸಕ ಸಿ.ಎನ್.ಬಾಲಕೃಷ್ಣ - ಹಾಸನದ ಗ್ರಾಮಾಂತರ ಪ್ರದೇಶ

ಹಾಸನದ ಗ್ರಾಮಾಂತರ ಪ್ರದೇಶದ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಕಡ್ಡಾಯವಾಗಿ ಪೋಷಕರ ಸಭೆ ಕರೆಯುವಂತೆ ಎಲ್ಲ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಶಾಸಕ ಸಿ.ಎನ್.ಬಾಲಕೃಷ್ಣ
author img

By

Published : Aug 27, 2019, 5:41 AM IST

ಹಾಸನ : ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಹಿಂದೆ ಬೀಳಬಾರದೆಂಬ ಉದ್ದೇಶದೊಂದಿಗೆ ಪಟ್ಟಣದಲ್ಲಿರುವ ಸರ್ಕಾರಿ ಶಾಲೆಗಳಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸುತ್ತಿರುವುದಾಗಿ ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಚನ್ನರಾಯಪಟ್ಟಣದಲ್ಲಿನ ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಕಂಪ್ಯೂಟರ್ ಕೊಠಡಿ, ಪೋಷಕರ ಸಭೆ ಮತ್ತು ನಾನಾ ಸಂಘಗಳ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಉತ್ತಮ ಕಲಿಕೆಯ ದೃಷ್ಠಿಯಿಂದ 4 ಸ್ಮಾರ್ಟ್ ಕ್ಲಾಸ್ ಮತ್ತು 25 ಕಂಪ್ಯೂಟರ್ ಹೊಂದಿರುವ ಕೊಠಡಿಗೆ 8 ಲಕ್ಷ ರೂ. ವೆಚ್ಚದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 600 ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಕೊರತೆಯಿದ್ದ ಶೌಚಾಲಯವನ್ನು ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಯಿಂದ 10 ಲಕ್ಷ ಹಣ ಮಂಜೂರಾಗಿದ್ದು, ಮುಂದಿನ ತಿಂಗಳು ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಗ್ರಾಮಾಂತರ ಪ್ರದೇಶದ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ

ಗ್ರಾಮಾಂತರ ಪ್ರದೇಶದ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಕಡ್ಡಾಯವಾಗಿ ಪೋಷಕರ ಸಭೆ ಕರೆಯುವಂತೆ ಎಲ್ಲ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಖಾಸಗಿ ಶಾಲೆಗಳಂತೆ ಪ್ರತಿ 15ದಿನಕ್ಕೊಮ್ಮೆ ವಿಷಯವಾರು ಟೆಸ್ಟ್ ನಡೆಸುವಂತೆ ತಿಳಿಸಲಾಗಿದ್ದು, ಶೈಕ್ಷಣಿಕ ಹಿತದೃಷ್ಠಿಯಿಂದ ತಾಲೂಕಿನೆಲ್ಲೆಡೆ 35 ಕೋಟಿ ವೆಚ್ಚದಲ್ಲಿ ಶಾಲಾ ಕಾಲೇಜು ಕಟ್ಟಡಗಳನ್ನು ಕಟ್ಟುತ್ತಿರುವುದಾಗಿ ಹೇಳಿದರು.

ಜಿ.ಪ.ಸದಸ್ಯ ಸಿ.ಎನ್.ಪುಟ್ಟಸ್ವಾಮೀಗೌಡ ಮಾತನಾಡಿ, ಇಂದಿನ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನ ಅವಶ್ಯಕವಾಗಿದ್ದು, ಜ್ಞಾನ ಮತ್ತು ಬೋಧನಾ ಗುಣಮಟ್ಟ ಹಚ್ಚಿಸುವಲ್ಲಿ ಇಲ್ಲಿನ ಸ್ಮಾರ್ಟ್ ಕ್ಲಾಸ್‌ಗಳು ನೆರವಾಗಿವೆ. ಖಾಸಗಿ ಶಾಲೆಗಳಲ್ಲಿರುವ ಸೌಲಭ್ಯ, ಗುಣಮಟ್ಟವನ್ನು ಸರ್ಕಾರಿ ಶಾಲೆಯೊಂದು ಅಳವಡಿಸಿಕೊಂಡು ಅತ್ಯುತ್ತಮ ಫಲಿತಾಂಶ ದಾಖಲು ಮಾಡಿರುವ ಶಾಲೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಖಾಸಗಿ ಶಾಲೆಯಲ್ಲಿ ಓದಿದರೇ ಮಾತ್ರ ಉನ್ನತ ವ್ಯಾಸಾಂಗ ಮಾಡಬಹುದು, ನೌಕರಿ ಪಡೆಯಬಹುದು ಎಂಬ ತಪ್ಪು ಗ್ರಹಿಕೆಯಿಂದ ಪೋಷಕರು ಹೊರಬರಬೇಕು. ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಹೆಚ್ಚು ಸಾಧನೆ ಮಾಡಿದ ನಿದರ್ಶನಗಳಿರುವುದು, ಮಕ್ಕಳನ್ನು ಕೇವಲ ಅಂಕಗಳಿಗೆ ಸೀಮಿತವಾಗಿಸದೇ ಅವರಲ್ಲಿ ಮೌಲ್ಯಗಳನ್ನು ತುಂಬಬೇಕೆಂದರು.

Intro:ಹಾಸನ : ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಹಿಂದೆ ಬೀಳಬಾರದೆಂಬ ಉದ್ದೇಶದೊಂದಿಗೆ ಪಟ್ಟಣದಲ್ಲಿರುವ ಸರ್ಕಾರಿ ಶಾಲೆಗಳಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸಿರುತ್ತಿರುವುದಾಗಿ ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
Body:ಚನ್ನರಾಯಪಟ್ಟಣದಲ್ಲಿನ ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಕಂಪ್ಯೂಟರ್ ಕೊಠಡಿ, ಪೋಷಕರ ಸಭೆ, ಮತ್ತು ನಾನಾ ಸಂಘಗಳ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿಧ್ಯಾರ್ಥಿಗಳ ಉತ್ತಮ ಕಲಿಕೆಯ ದೃಷ್ಠಿಯಿಂದ ೪ಸ್ಮಾರ್ಟ್ ಕ್ಲಾಸ್, ಮತ್ತು ೨೫ಕಂಪ್ಯೂಟರ್ ಹೊಂದಿರುವ ಕೊಠಡಿಗೆ ರೂ. ೮ಲಕ್ಷ ವೆಚ್ಚದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ, ೬೦೦ ವಿಧ್ಯಾರ್ಥಿಗಳಿರುವ ಶಾಲೆಯಲ್ಲಿ ಕೊರತೆಯಿದ್ದ ಶೌಚಾಲಯವನ್ನು ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಯಿಂದ ೧೦ಲಕ್ಷ ಹಣ ಮಂಜೂರಾಗಿದೆ, ಮುಂದಿನ ತಿಂಗಳು ಕಾಮಗಾರಿ ಪ್ರಾರಂಭಿಸಲಾಗುವುದು, ಗ್ರಾಮಾಂತರ ಪ್ರದೇಶದ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಕಡ್ಡಾಯವಾಗಿ ಪೋಷಕರ ಸಭೆ ಕರೆಯುವಂತೆ ಎಲ್ಲ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ, ಹಾಗೂ ಖಾಸಗಿ ಶಾಲೆಗಳಂತೆ ಪ್ರತಿ ೧೫ದಿನಕ್ಕೊಮ್ಮೆ ವಿಷಯವಾರು ಟೆಸ್ಟ್ ನೆಡಸುವಂತೆ ತಿಳಿಸಲಾಗಿದ್ದು, ಇನ್ನೂ ಶೈಕ್ಷಣೀಕ ಹಿತದೃಷ್ಠಿಯಿಂದ ತಾಲೂಕಿನೆಲ್ಲೆಡೆ ೩೫ಕೋಟಿ ವೆಚ್ಚದಲ್ಲಿ ಶಾಲಾ ಕಾಲೇಜು ಕಟ್ಟಡಗಳನ್ನು ಕಟ್ಟುತ್ತಿರುವುದಾಗಿ ಹೇಳಿದರು.
ಬೈಟ್-೧
ಸಮಾರಂಭ ಉದ್ಘಾಟಿಸಿ ಜಿ.ಪ.ಸದಸ್ಯ ಸಿ.ಎನ್.ಪುಟ್ಟಸ್ವಾಮೀಗೌಡ ಮಾತನಾಡಿ, ಇಂದಿನ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನ ಅವಶ್ಯಕವಾಗಿದ್ದು, ಜ್ಞಾನ ಮತ್ತು ಭೋದನಾ ಗುಣಮಟ್ಟ ಹಚ್ಚಿಸುವಲ್ಲಿ ಇಲ್ಲಿನ ಸ್ಮಾರ್ಟ್ ಕ್ಲಾಸ್‌ಗಳು ನೆರವಾಗಿವೆ. ಖಾಸಗಿ ಶಾಲೆಗಳಲ್ಲಿರುವ ಸೌಲಭ್ಯ, ಗುಣಮಟ್ಟವನ್ನು ಸರ್ಕಾರಿ ಶಾಲೆಯೊಂದು ಅಳವಡಿಸಿಕೊಂಡು ಅತ್ಯುತ್ತಮ ಫಲಿತಾಂಶ ದಾಖಲು ಮಾಡಿರುವ ಶಾಲೆ ಎಂಬ ಹೆಗ್ಗಳಿಕೆ ಹೊಂದಿದೆ, ಖಾಸಗಿ ಶಾಲೆಯಲ್ಲಿ ಓದಿದರೇ ಮಾತ್ರ ಉನ್ನತ ವ್ಯಾಸಾಂಗ ಮಾಡಬಹುದು, ನೌಕರಿ ಪಡೆಯಬಹುದು ಎಂಬ ತಪ್ಪು ಗ್ರಹಿಕೆಯಿಂದ ಪೋಷಕರು ಹೊರಬರಬೇಕು, ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಹೆಚ್ಚು ಸಾಧನೆ ಮಾಡಿದ ನಿದರ್ಶನಗಳಿರುವುದು, ಮಕ್ಕಳನ್ನು ಕೇವಲ ಅಂಕಗಳಿಗೆ ಸೀಮಿತವಾಗಿಸದೇ ಅವರಲ್ಲಿ ಮೌಲ್ಯಗಳನ್ನು ತುಂಬಬೇಕೆಂದರು.
ಬೈಟ್-೨
ಮೆಳಿಯಮ್ಮ ಆಧ್ಯಾತ್ಮೀಕ ಕೇಂದ್ರ ಚಂದ್ರಶೇಖರ್ ಗುರೂಜಿ ಮಾತನಾಡಿ, ಶಿಕ್ಷಕ ಶಾಲೆಯಲ್ಲಿ ವಿದ್ಯೆ ಕಲಿಸಬಹುದಷ್ಟೆ ಆದರೆ ಪೋಷಕರು ತಮ್ಮ ಮನೆಗಳಲ್ಲಿ ಮಕ್ಕಳಿಗೆ ಕಲಿಸುವ ನೈತಿಕ ಪಾಠ ಹೆಚ್ಚು ಮಹತ್ವದಾಗಿರುತ್ತದೆ. ತಾವು ಬೆಳೆದು ಬಂದ ಕಷ್ಟದ ಹಾದಿಗಳನ್ನು ಮಕ್ಕಳಿಂದ ಮರೆಮಾಚಿ, ಕಷ್ಟದ ಅರಿವು ತಿಳಿಯದಂತೆ ಬೆಳೆಸುವ ಪರಿ ಒಳ್ಳೆಯದಲ್ಲ, ಕಾನ್ವೆಂಟ್ ಮೋಹದಿಂದ ಕನ್ನಡ ನಿರ್ಲಕ್ಷಕ್ಕೊಳಗಾಗುತ್ತಿದೆ, ಅನ್ನ ನೀಡುವ ಭಾಷೆ ಕನ್ನಡವನ್ನು ಎಂದಿಗೂ ಕಡೆಗಣಿಸಬಾರದು, ಸಾಧನೆ ಮಾಡಬೇಕಾದ್ರೆ ನಮ್ಮ ಮಾತೃ ಭಾಷೆಯ ಬಗ್ಗೆ ತಿಳಿದಿರಬೇಕು, ಚೆನ್ನಾಗಿ ಕನ್ನಡ ಗೊತ್ತಿದವನಿಗೆ ಇಂಗ್ಲೀಷ್ ಸಹಜವಾಗಿ ಬರುತ್ತೆ ಎಂದರು.
ಬೈಟ್-೩
ಕಳೆದ ಸಾಲಿನಲ್ಲಿ ಶೇ.೯೦ಕ್ಕಿಂತೆ ಹೆಚ್ಚು ಫಲಿತಾಂಶ ಪಡೆದ ೧೮ ವಿಧ್ಯಾರ್ಥಿಗಳು, ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿಧ್ಯಾರ್ಥಿಗಳನ್ನು ಶಾಲಾ ಮಂಡಳಿಯು ಗೌರವಿಸಿತ್ತು. ಅತಿಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಜಿ.ಪ.ಸದಸ್ಯ ಸಿ.ಎನ್.ಪುಟ್ಟಸ್ವಾಮೀಗೌಡ ವೈಯಕ್ತಿನ ನಗದು ಬಹುಮಾನವನ್ನು ನೀಡಿ ಪ್ರೋತ್ಸಾಹಿಸಿದರು.
Conclusion:ಪುರಸಭಾ ಸದಸ್ಯ ಗಣೇಶ್, ತಾ.ಪ.ಮಾಜಿ ಸದಸ್ಯ ಪುಟ್ಟಸ್ವಾಮಿ, ಎಸ್.ಡಿ.ಎಂ.ಸಿ ಸದಸ್ಯರಾದ ಮಂಜುನಾಥ್, ದೇವರಾಜ್, ಮುಖ್ಯ ಶಿಕ್ಷಕ ಬಿ.ಅನಿಲ್ ಹಾಜರಿದ್ದರು.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.