ಹಾಸನ: 2019ರ ಪೌರತ್ವ ತಿದ್ದುಪಡಿ ಕಾಯಿದೆಯಲ್ಲಿ ವಿನಾಯಿತಿ ನೀಡಿದ್ದು, ಯಾವ ತಾರತಮ್ಯ ಮಾಡಿರುವುದಿಲ್ಲ ಎಂದು ವಿರೋಧ ಮಾಡುತ್ತಿರುವ ಓಟ್ ಬ್ಯಾಂಕ್ ರಾಜಕಾರಣಿಗಳಿಗೆ ಶಾಸಕ ಪ್ರೀತಂ ಜೆ. ಗೌಡ ಟಾಂಗ್ ನೀಡಿದ್ದಾರೆ.
ಭಾರತೀಯ ಜನತಾ ಪಾರ್ಟಿಯಿಂದ ಹಮ್ಮಿಕೊಳ್ಳಲಾಗಿದ್ದ ಪೌರತ್ವ ತಿದ್ದುಪಡಿ ಕಾಯಿದೆ ಕುರಿತು ತಾಲೂಕು ಮಟ್ಟದ ಕಾರ್ಯಗಾರದಲ್ಲಿ ಸಿಎಎ ಹಾಗು ಎನ್.ಆರ್.ಸಿ ವಿಷಯ ಇಟ್ಟುಕೊಂಡು ಕಾಂಗ್ರೆಸ್ ಪಕ್ಷದವರು ಸೇರಿದಂತೆ ವಿರೋಧ ಪಕ್ಷಗಳು ಷಢ್ಯಂತರವನ್ನು ಮಾಡುತ್ತಿದೆ. ಕಾಯಿದೆಯು ಮೂರು ದೇಶದಿಂದ ಯಾರು ಬಂದಿದ್ದಾರೆ ಅವರು 11 ವರ್ಷದ ಬದಲು 6 ವರ್ಷ ವಾಸವಿದ್ದರೇ ಸಾಕು ಎನ್ನುವ ವಿನಾಯಿತಿಯನ್ನು ಕೊಟ್ಟಿದ್ದೇವೆ ವಿನಃ ಬೇರೆ ಯಾವ ರೀತಿಯ ತಾತ್ಸರವಾಗಲೀ, ತಾರತಮ್ಯವಾಲೀ ಮಾಡಿರುವುದಿಲ್ಲ ಎಂದು ಅರ್ಥೈಸಿದರು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಎರಡು ಮೂರು ಘಟನಾವಳಿಗಳು ನಡೆದ ಪರಿಣಾಮವಾಗಿ ಕೆಲ ಒಪ್ಪಂದಗಳು ನಡೆಯಿತು. ಅದರ ತಪ್ಪುಗಳ ತಿದ್ದುಪಡಿಯನ್ನು ಏಳು ದಶಕಗಳ ನಂತರ ಕೇಂದ್ರದಲ್ಲಿ ರಾಷ್ಟ್ರೀಯತೆ ಇರುವ ಸದೃಢ ಸರಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ ಎಂದರು.
ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದು, ಏನಾದರೂ ಸಂದೇಹಗಳಿದ್ದರೇ ಪ್ರಶ್ನಿಸುವುದರ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಉತ್ತಮ ವೇದಿಕೆಯಾಗಿದೆ. ಜನರಿಗೆ ಸಿಟಿಜನ್ ಶಿಪ್ ಎಂದರೇ ಗೊತ್ತಿಲ್ಲದೇ ನನ್ನ ಸದಸ್ಯತ್ವವೇ ಹೋಗುತ್ತದೆ ಎಂದು ಕಾಂಗ್ರೆಸ್, ಜೆಡಿಎಸ್ ಹಾಗೂ ಸೆಕ್ಯೂಲರ್ ಪಾರ್ಟಿಗಳು ತಮ್ಮ ಮತ ಬ್ಯಾಂಕನ್ನು ಭದ್ರ ಮಾಡಿಕೊಳ್ಳುವುದಕ್ಕೆ ನಮ್ಮ ಅಲ್ಪಸಂಖ್ಯಾತರಲ್ಲಿ ತಪ್ಪು ಮಾಹಿತಿ ಕೊಡುವುದಕ್ಕೆ ಮುಂದಾಗಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು. ನಾವೇಷ್ಟು ಭಾರತೀಯರು ಅಷ್ಟೆ 130 ಕೋಟಿ ಜನರು ಎಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವ ಕೆಲಸ ಮಾಡಬೇಕು ಎಂದು ವಿರೋಧ ಮಾಡುವವರಿಗೆ ಕಿವಿಮಾತು ಹೇಳಿದರು.