ETV Bharat / state

ರಾಜಕೀಯಕ್ಕೆ ಬರೋರಿಗೆ ಹಾಸನ ಟ್ರೈನಿಂಗ್ ಸೆಂಟರ್ ಆಗಿದೆ: ಸಚಿವ ವಿ. ಸೋಮಣ್ಣ

ಹಾಸನದಲ್ಲಿ ರಾಜಕೀಯಕ್ಕೆ ತಕ್ಕ ಹಾಗೆ, ಯಥಾ ರಾಜ ತಥಾ ಪ್ರಜಾ ಅನ್ನೋ ರೀತಿ ಶಾಸಕ ಪ್ರೀತಂ ಗೌಡ ಇದ್ದು, ಹಾಸನದಲ್ಲಿನ ರಾಜಕೀಯ ನನಗೆ ಗೊತ್ತಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

somanna
somanna
author img

By

Published : Sep 11, 2020, 5:40 PM IST

ಹಾಸನ: ಹಾಸನ ಕ್ಷೇತ್ರದಲ್ಲಿ ರಾಜಕೀಯಕ್ಕೆ ತಕ್ಕ ಹಾಗೆ ಶಾಸಕನಾಗಿ ಪ್ರೀತಂ ಗೌಡ ಇದ್ದು, ಇಲ್ಲಿ ರಾಜಕೀಯ ಹೇಗೆ ಮಾಡಬೇಕು ಎಂದು ನನಗೆ ಗೊತ್ತಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.

ನಗರದ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಮ್ಮು ಉದ್ದೇಶಿಸಿ ಮಾತನಾಡಿದ ಅವರು, ಹಾಸನದಲ್ಲಿ ರಾಜಕೀಯಕ್ಕೆ ತಕ್ಕ ಹಾಗೆ ಯಥಾ ರಾಜ ತಥಾ ಪ್ರಜಾ ಅನ್ನೋ ರೀತಿ ಶಾಸಕ ಪ್ರೀತಂ ಗೌಡ ಇದ್ದು, ಹಾಸನದಲ್ಲಿನ ರಾಜಕೀಯ ನನಗೆ ಗೊತ್ತಿದೆ ಎಂದರು.

ಕಾರ್ಯಕರ್ತರ ಸಭೆ

ಪ್ರೀತಂ ಗೌಡ ಯುವಕನಿದ್ದು, ಹಾಸನ ಕ್ಷೇತ್ರಕ್ಕೆ ಹೇಳಿ ಮಾಡಿಸಿದ ಹಾಗೆ ಇದ್ದಾರೆ. ರಾಜಕೀಯಕ್ಕೆ ಬರೋರಿಗೆ ಹಾಸನ ಟ್ರೈನಿಂಗ್ ಸೆಂಟರ್ ಆಗಿದೆ. ಈ ಹಿಂದೆ ಪ್ರೀತಂ ಗೌಡನಿಗೆ ಟಿಕೇಟ್ ಕೊಡಿ ಶಾಸಕ ಆಗ್ತಾನೆ ಎಂದು ನಾನೇ ಹೇಳಿದ್ದೆ. ಈಗ ಹೇಳಿದಂತೆ ಈಗಪ್ರೀತಂ ಗೌಡ ಶಾಸಕನಾಗಿದ್ದಾನೆ ಎಂದು ತಿಳಿಸಿದರು‌.

ಯಾವ ಅಭಿವೃದ್ಧಿ ಕೆಲಸವಾಗಿಲ್ಲ ಎಂದು ಬೇಸರ ಮಾಡಿಕೊಳ್ಳಬೇಡಿ. ಅವನು ಸಾಕಷ್ಟು ಕೆಲಸ ಮಾಡುತ್ತಿದ್ದಾನೆ. ಹಾಸನ ಕ್ಷೇತ್ರದ ಶಾಸಕನನ್ನು ಅನಿಸರಿಸಿಕೊಂಡು ಎಲ್ಲರೂ ಹೋಗಬೇಕೆಂದು ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಕರೆ ಕೊಟ್ಟರು.

​ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ತಮ್ಮ ಇಳಿ ವಯಸ್ಸಿನಲ್ಲಿಯೂ ತಮ್ಮ ಜವಾಬ್ದಾರಿ ನಿರ್ವಹಣೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿಯ ಎಲ್ಲಾ ಕಾರ್ಯಕರ್ತರು ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಇನ್ನು ವೆಂಕ - ನಾಣಿ - ಸೀನ ಬರಲಿ ಹೋಗಲಿ ನಮಗೆಲ್ಲಾ ಪಕ್ಷದ ಸಂದೇಶ ಮುಖ್ಯ. ಹಳ್ಳಿಗಳಿಗೆ ಮನೆ ನೀಡೋದು ದೊಡ್ಡದಲ್ಲ, ಜಿಲ್ಲಾ ಕೇಂದ್ರದಲ್ಲಿ ಮನೆ ನೀಡುವುದು ಒಂದು ಸವಾಲು. ನಗರ ಪ್ರದೇಶಗಳಲ್ಲಿ ಜಮೀನು ನೀಡಿದರೆ ಶೇ. 50ರಷ್ಟು ಅನುಪಾತದಲ್ಲಿ ಅಭಿವೃದ್ಧಿ ಮಾಡಿ ನಿವೇಶನ ಹಂಚುವ ಕೆಲಸ ಮಾಡುವುದಾಗಿ ಇದೆ ವೇಳೆ ಹೇಳಿದರು.

ಶಾಸಕ ಪ್ರೀತಮ್ ಜೆ. ಗೌಡರವರು ಮಾತನಾಡಿ, ವಸತಿ ಸಚಿವರಾಗಿರುವ ವಿ. ಸೋಮಣ್ಣನವರು ಪಕ್ಷವನ್ನು ಹೇಗೆ ಗಟ್ಟಿಗೊಳಿಸಬಹುದು ಎಂಬುದನ್ನು ತೋರಿಸಿ ಎಲ್ಲರಿಗೂ ಮಾರ್ಗದರ್ಶಕರಾಗಿ ಇಂದು ನಾನು ಕೂಡ ಶಾಸಕನಾಗಲು ಕಾರಣಕರ್ತರಾಗಿದ್ದಾರೆ ಎಂದರು. ಇದೆ ವೇಳೆ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಕುಮಾರ್ ಹಾಗೂ ಇತರರು ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.