ETV Bharat / state

ಉಪ್ಪರಿಗೆ ಮೇಲೆ ಕೂರಿಸಿದ್ರೂ ರೇವಣ್ಣ ತಮ್ಮ ಹಳೆ ಚಾಳಿ ಬಿಡೋದಿಲ್ಲ.. ಮಾಜಿ ಸಚಿವ ಎ.ಮಂಜು ವ್ಯಂಗ್ಯ

ಅಪ್ಪ-ಮಕ್ಕಳ ಜೊತೆ ಹೋದರೆ ಕಾಂಗ್ರೆಸ್ ಉಳಿಯಲ್ಲ ಅಂತಾ ನಾನು ಮೊದಲೇ ಹೇಳಿದ್ದೆ. ಅದು ಹಾಗೇ ಆಗಿದೆ. ನಾನು ಕಾಂಗ್ರೆಸ್ ಬಿಡುವಾಗ ಸಿದ್ದರಾಮಯ್ಯನವರಿಗೆ ಹೇಳ್ಬಿಟ್ಟೆ ಬಂದಿದ್ದೆ ಎಂದು ಮಾಜಿ ಸಚಿವ ಎ.ಮಂಜು ಹೇಳಿದ್ದಾರೆ.

ಮಾಜಿ ಸಚಿವ ಎ.ಮಂಜು ಪತ್ರಿಕಾಗೋಷ್ಠಿ
author img

By

Published : Jul 15, 2019, 6:51 PM IST

ಹಾಸನ : ನಾಯಿನ ಎಲ್ಲೇ ತಂದು ಕೂರಿಸಿದರೂ ಅದು ತಿಪ್ಪೆ ಕೆರೆಯೋ ಬುದ್ದಿನ ಬಿಡುವುದೇ ಇಲ್ಲ. ಹಾಗೇನೆ ನಮ್ಮ ಹೆಚ್‌ ಡಿ ರೇವಣ್ಣನವರು ಕೂಡ ತಮ್ಮ ಹಳೆ ಚಾಳಿನ ಬಿಡೋದೇ ಇಲ್ಲ ಎಂದು ಮಾಜಿ ಸಚಿವ ಎ.ಮಂಜು ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪ್ಪ-ಮಕ್ಕಳ ಜೊತೆ ಹೋದರೆ ಕಾಂಗ್ರೆಸ್ ಉಳಿಯಲ್ಲ ಅಂತಾ ನಾನು ಮೊದಲೇ ಹೇಳಿದ್ದೆ. ಅದು ಹಾಗೇ ಆಗಿದೆ. ನಾನು ಕಾಂಗ್ರೆಸ್ ಬಿಡುವಾಗ ಸಿದ್ದರಾಮಯ್ಯನವರಿಗೆ ಹೇಳ್ಬಿಟ್ಟೇ ಬಂದಿದ್ದೆ. ನೀವೇನಾದ್ರೂ ಅವರ ಜೊತೆ ಕೈಜೋಡಿಸಿದರೆ ನಾನು ನಿಮ್ಮ ಪಕ್ಷದಲ್ಲಿ ಇರೋಲ್ಲ ಅಂತಾ. ಇವತ್ತು ಕಾಂಗ್ರೆಸ್ ಪಕ್ಷದ ಸ್ಥಿತಿಯನ್ನು ನೋಡಿದರೆ ನಿಮಗೆ ಗೊತ್ತಾಗುತ್ತೆ, ನಾನು ಯಾಕೆ ಕಾಂಗ್ರೆಸ್ ಬಿಟ್ಟೆ ಅನ್ನೋದು ಎಂದರು.

ಮಾಜಿ ಸಚಿವ ಎ.ಮಂಜು ಪತ್ರಿಕಾಗೋಷ್ಠಿ

ಸಿದ್ದರಾಮಯ್ಯ ನನಗೆ ಮೊದಲೇ ಹೇಳಿದ್ದರು. ಹೆಚ್‌ ಡಿ ರೇವಣ್ಣ ಪ್ರಾಣ ಬೇಕಾದ್ರೂ ಬಿಡ್ತಾನೆ, ಕೆ‌ಎಂಎಫ್ ಬಿಡೋದಿಲ್ಲ ಅಂತಾ. ಪಿಡಬ್ಲ್ಯೂಡಿನಲ್ಲಿರುವ ಭ್ರಷ್ಟ ಅಧಿಕಾರಿಗಳನ್ನ ಸರ್ಕಾರದ ಆದೇಶ ಧಿಕ್ಕರಿಸಿ ವರ್ಗಾವಣೆ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ರೇವಣ್ಣನವರ ಕೃಪಾಕಟಾಕ್ಷ ಇದೆ ಎಂದು ಎ. ಮಂಜು ದೂರಿದರು.

ಈ ಹಿಂದೆ ಯಡಿಯೂರಪ್ಪನವರು ಸದನದಲ್ಲಿ ಅಪ್ಪ-ಮಕ್ಕಳ ಬಗ್ಗೆ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರಿಗೆ ಹೇಳಿದ್ರು. ಇವರನ್ನ ನಂಬಿಕೊಂಡು ಹೋದರೆ, ನಿಮಗೆ ಖಂಡಿತಾ ಅನ್ಯಾಯ ಮಾಡ್ತಾರೆ ಅಂತಾ ಎಚ್ಚರಿಸಿದ್ದರು. ರಾಜ್ಯದಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಒಳ್ಳೆಯ ಕೆಲಸಗಳು ಆಗುತ್ತವೆ ಅಂತಾ ಇದೇ ವೇಳೆ ಎ. ಮಂಜು ವಿಶ್ವಾಸ ವ್ಯಕ್ತಪಡಿಸಿದರು.

Intro: ರೇವಣ್ಣ ವಿರುದ್ಧ ಹರಿಹಾಯ್ದ ಮಾಜಿ ಸಚಿವ ಎ ಮಂಜು.

ನಾಯಿನ ಎಲ್ಲೆ ತಂದು ಕೂರಿಸಿದರು ಅದು ತಿಪ್ಪೆ ಕೆರೆಯೊ ಬುದ್ದಿನ ಬಿಡುವುದೇ ಇಲ್ಲ , ಹಾಗೇನೆ ನಮ್ಮ ರೇವಣ್ಣನವರು ಕೂಡ ತಮ್ಮ ಹಳೆ ಚಾಳಿನ ಬಿಡೋದೇ ಇಲ್ಲ ಅಂತ ಅಂದದ್ದು ಬೇರ್ಯಾರು ಅಲ್ಲ. ಅದು ಮಾಜಿ ಸಚಿವ ಎ.ಮಂಜು.

ನಗರದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವ್ರು ರೇವಣ್ಣ ವಿರುದ್ಧ ಆಕ್ರೋಶದ ಸುರಿಮಳೆಯನ್ನೇ ಸುರಿಸಿದರು. ಅಪ್ಪ-ಮಕ್ಕಳ ಜೊತೆ ಹೋದರೆ ಕಾಂಗ್ರೆಸ್ ಉಳಿಯಲ್ಲ ಅಲ್ಲ ಅಂತ ನಾನು ಮೊದಲೇ ಹೇಳಿದ್ದೆ ಅದು ಹಾಗೆ ಆಗಿದೆ. ನಾನು ಕಾಂಗ್ರೆಸ್ ಬಿಡುವಾಗ ಸಿದ್ದರಾಮಯ್ಯನವರಿಗೆ ಹೇಳ್ಬಿಟ್ಟೆ ಬಂದಿದ್ದೆ ನೀವೇನಾದ್ರೂ ಅವರ ಜೊತೆ ಕೈಜೋಡಿಸಿದರೆ ನಾನು ನಿಮ್ಮ ಪಕ್ಷದಲ್ಲಿ ಇರೋಲ್ಲ ಅಂತ. ಇವತ್ತು ಕಾಂಗ್ರೆಸ್ ಪಕ್ಷದ ಸ್ಥಿತಿಯನ್ನು ನೋಡಿದರೆ ನಿಮಗೆ ಗೊತ್ತಾಗುತ್ತೆ ನಾನು ಯಾಕೆ ಕಾಂಗ್ರೇಸ್ ಬಿಟ್ಟೆ ಅನ್ನೋದು ಎಂದರು.

ಸಿದ್ದರಾಮಯ್ಯ ನನಗೆ ಮೊದ್ಲೇ ಹೇಳಿದ್ರು, ರೇವಣ್ಣ ಪ್ರಾಣ ಬೇಕಾದ್ರು ಬಿಡ್ತಾನೆ ಕೆ‌ಎಮ್‌ಎಫ಼್ ಬಿಡೋಲ್ಲ ಅಂತ. ಪಿಡಬ್ಲ್ಯೂಡಿ ನಲ್ಲಿರುವ ಭ್ರಷ್ಟ ಅಧಿಕಾರಿಗಳನ್ನ ಸರ್ಕಾರದ ಆದೇಶವನ್ನು ಧಿಕ್ಕರಿಸಿ ವರ್ಗಾವಣೆ ಮಾಡುತ್ತಿದ್ದಾರೆ ಇದಕ್ಕೆಲ್ಲಾ ರೇವಣ್ಣನವರ ಕೃಪಾಕಟಾಕ್ಷ ಇದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯುದ್ದಕ್ಕೂ ರೇವಣ್ಣನವರ ವಿರುದ್ಧ ಹರಿಹಾಯ್ದ ಎ ಮಂಜು ಸದನದಲ್ಲಿ ಈ ಹಿಂದೆ ಯಡಿಯೂರಪ್ಪನವರು ಹೇಳಿದ ಮಾತುಗಳನ್ನು ನೆನಪಿಸಿಕೊಂಡರು. ಯಡಿಯೂರಪ್ಪನವರು ಅಪ್ಪ-ಮಕ್ಕಳ ಬಗ್ಗೆ ಮೊದ್ಲೆ ಶಿವಕುಮಾರ್ ಅವರಿಗೆ ಮತ್ತು ಸಿದ್ದರಾಮಯ್ಯನವರಿಗೆ ಹೇಳಿದ್ರು. ನೀವು ಇವರನ್ನ ನಂಬಿ ಕೊಂಡು ಹೋದರೆ ನಿಮಗೆ ಖಂಡಿತ ಇವರು ಅನ್ಯಾಯ ಮಾಡ್ತಾರೆ. ನನಗೂ ಕೂಡ ಇವರು ಅನ್ಯಾಯ ಮಾಡಿದ್ದಾರೆ ಅಂತ ಹೇಳಿದ್ರು. ಇವತ್ತು ಅವರು ಹೇಳಿದಾಗ ಹಾಗಿದೆ. ಪ್ರಸ್ತುತ ರಾಜಕೀಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಎ ಮಂಜು ಮುಂದೆ ರಾಜ್ಯದಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಒಳ್ಳೆಯ ಕೆಲಸಗಳು ಆಗುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೈಟ್ : ಎ.ಮಂಜು, ಮಾಜಿ ಸಚಿವ.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.