ETV Bharat / state

'ಪಕ್ಷದಲ್ಲಿದ್ದಾಗ ಕುಟುಂಬ ರಾಜಕಾರಣ ಗೊತ್ತಾಗಿಲ್ವಾ?': ಶಿವಲಿಂಗೇಗೌಡರ ವಿರುದ್ಧ ಹೆಚ್​ಡಿಕೆ ವಾಗ್ದಾಳಿ - assembly election 2023

ಮಾಜಿ ಮುಖ್ಯಮಂತ್ರಿ ಹೆಚ್.​ಡಿ.ಕುಮಾರಸ್ವಾಮಿ ಅವರು ಅರಸೀಕೆರೆ ಹಾಲಿ ಜೆಡಿಎಸ್​ ಶಾಸಕ ಶಿವಲಿಂಗೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.

hd-kumarswami-attack-against-shivlingegowda-in-arasikere
ಪಕ್ಷದಲ್ಲಿ ಇದ್ದಾಗ ಕುಟುಂಬ ರಾಜಕಾರಣ ಅಂತ ಗೊತ್ತಾಗ್ಲಿಲ್ವಾ: ಶಿವಲಿಂಗೇಗೌಡರ ವಿರುದ್ಧ ಹೆಚ್​ಡಿಕೆ ವಾಗ್ದಾಳಿ
author img

By

Published : Feb 28, 2023, 5:16 PM IST

Updated : Feb 28, 2023, 7:29 PM IST

'ಪಕ್ಷದಲ್ಲಿದ್ದಾಗ ಕುಟುಂಬ ರಾಜಕಾರಣ ಗೊತ್ತಾಗಿಲ್ವಾ?': ಶಿವಲಿಂಗೇಗೌಡರ ವಿರುದ್ಧ ಹೆಚ್​ಡಿಕೆ ವಾಗ್ದಾಳಿ

ಅರಸೀಕೆರೆ: "ವಿಧಾನಸೌಧದಲ್ಲಿ ಅಬ್ಬರಿಸ್ತಾರೆ ಅಂತ ನಮ್ಮ ಮುಂದೆ ಅಬ್ಬರಿಸೋದಕ್ಕೆ ಆಗಲ್ಲ. ಜೆಡಿಎಸ್ ಬಿಟ್ಟು ಹೋಗೋ ಟೈಮಲ್ಲಿ ಕುಟುಂಬ ರಾಜಕಾರಣ ಅಂತ ಹೇಳ್ತಾರಲ್ಲಾ, ಇಷ್ಟು ದಿನ ಕುಟುಂಬ ರಾಜಕಾರಣ ಅಂತ ಗೊತ್ತಿರ್ಲಿಲ್ವಾ?" ಎಂದು ಹಾಲಿ ಶಾಸಕ ಕೆ.ಎಂ.ಶಿವಲಿಂಗೇಗೌಡರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಹಾಸನದ ಅರಸೀಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, "ಜೆಡಿಎಸ್ ಪುರಾಣ ಬಿಚ್ಚಿಡ್ತೀನಿ ಅಂತಾರಲ್ಲ, ಏನಿದೆಯೋ ಬಿಚ್ಚಿಡ್ಲಿ. ಇವರ ಮಾತಿಗೆ ನಾವೇನ್ ಹೆದ್ರುಕೊಳಲ್ಲ. ವಿಧಾನಸೌಧದಲ್ಲಿ ಮಾತಾಡ್ತಾರೆ ಎಂದು ಅವರಿಗೆ ಯಾರೋ ಹೆದ್ರುಕೊಂಡ್ರೆ ನಾವ್ಯಾರೂ ಹೆದ್ರುಕೊಳಲ್ಲ. ನಾವೇನ್ ತಪ್ ಮಾಡಿದ್ದೇವೆ?, ಜೆಡಿಎಸ್ ಕಾರ್ಯಕ್ರಮಕ್ಕೆ ನಾವು ಬರಬೇಡಿ ಅಂತ ಹೇಳಿದ್ವಾ? ಅವರನ್ನು ಬೆಳೆಸಬೇಕಾದರೆ ಜೆಡಿಎಸ್ ಬೇಕು, ಅವಾಗ ಕುಟುಂಬ ರಾಜಕಾರಣ ಕಾಣಲಿಲ್ಲ. ಅವರ ಬೆಳವಣಿಗೆಯಾದಾಗ ಕುಟುಂಬ ರಾಜಕಾರಣ ಕಾಣಲಿಲ್ಲ. ಜೆಡಿಎಸ್ ಬಿಟ್ಟು ಹೊರಗೆ ಹೋಗಬೇಕಾದರೆ ಕುಟುಂಬ ರಾಜಕಾರಣ ಕಾಣಿಸ್ತಿದೆಯೇ?’" ಎಂದರು.

"ಪಕ್ಷದಲ್ಲಿಯೇ ಇದ್ದಾಗ ಕುಟುಂಬ ರಾಜಕಾರಣ ಎಂದು ಹೇಳಿದರೆ ಒಪ್ಪಿಕೊಳ್ಳಬಹುದಾಗಿತ್ತು. ಈಗ ಕುಟುಂಬ ರಾಜಕಾರಣದ ಬಗ್ಗೆ ಚರ್ಚೆ ಮಾಡಬೇಕಾದರೆ, ಅವತ್ತು ಯಾಕೆ ಸುಮ್ನಿದ್ರು? ಅವತ್ತು ಈ ಕುಟುಂಬ ರಾಜಕಾರಣದ ಕೈಯಿಂದಲೇ ಕೆಲಸ ಮಾಡಿಸಿಕೊಂಡರಲ್ಲ? ಈಗ ಅದು ನಿಮಗೆ ನೋವು ಎಂದು ಕಾಣಿಸ್ತಿದೆಯಾ" ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ಕುಟುಂಬಕ್ಕಿಂತ ಕಾರ್ಯಕರ್ತರು ನನಗೆ ಮುಖ್ಯ: ಹಾಸನದಲ್ಲಿ ಹೆಚ್​ಡಿಕೆ ಹೇಳಿಕೆ

ನಗರಸಭೆ ಸದಸ್ಯರ ಪ್ರಕರಣದ ಸಂಬಂಧ ಮಾತನಾಡಿದ ಅವರು, "ಇವತ್ತು ನಮ್ಮ ಪಕ್ಷದ ಪರವಾಗಿ ಯಾರು ಹೋರಾಟ ಮಾಡುತ್ತಿದ್ದಾರೆ ಅವರನ್ನು ಗುರುತಿಸುವ ಕೆಲಸ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಒಂದು ಉತ್ತಮ ನಿರ್ಧಾರ ಕೈಗೊಳ್ಳುತ್ತೇವೆ" ಎಂದು ತಿಳಿಸಿದರು. "ಅರಸೀಕೆರೆ ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡದಿದ್ದರೂ ಎಲ್ಲರಿಗೂ ಅಭ್ಯರ್ಥಿ ಯಾರು ಅಂತ ಗೊತ್ತಿದೆ. ಎರಡನೇ ಪಟ್ಟಿಯಲ್ಲಿ ಖಂಡಿತ ಬಿಡುಗಡೆ ಮಾಡುತ್ತೇವೆ" ಎಂದು ಹೇಳುವ ಮೂಲಕ ಬಾಣವರ ಅಶೋಕ್ ಹೆಸರೇಳದೇ ಸುಮ್ಮನಾದರು.

ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ಅವರ ಜೀವ ಕಾಪಾಡಲು ಕುಟುಂಬದ ವೈದ್ಯರು ಶ್ರಮಿಸುತ್ತಿರುವ ಸಂದರ್ಭದಲ್ಲಿ ನಾನು ಒಂಟಿಯಾಗಿ ಪಂಚರತ್ನ ಯಾತ್ರೆ ಮಾಡುತ್ತಿದ್ದೇನೆ. ನನಗೂ ಎರಡು ಬಾರಿ ಆಪರೇಷನ್​ ಆಗಿದೆ. ರೈತರ ಉಳಿವಿಗಾಗಿ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಮನಸ್ಸಿನಲ್ಲಿರುವ ಭಾವನೆಯನ್ನು ಈಡೇರಿಸಲು ಬದ್ಧರಿದ್ದೇವೆ ಎಂದು ಹೆಚ್​ಡಿಕೆ ಸೋಮವಾರದಂದು ಹಾಸನದಲ್ಲಿ ಹೇಳಿದ್ದರು.

ಇದನ್ನೂ ಓದಿ: ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಲು ಶಾಸಕ ತನ್ವೀರ್ ಸೇಠ್ ನಿರ್ಧಾರ: ಈಟಿವಿ ಭಾರತದ ಜೊತೆ ಸಂದರ್ಶನ

Last Updated : Feb 28, 2023, 7:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.