ETV Bharat / state

ಪೋನ್- ಇನ್- ಲೈವ್ ನಲ್ಲಿ ಯಾರು ಯಾವ ಪ್ರಶ್ನೆ ಕೇಳಿದ್ರು... ಹಾಸನ ​SP ಕೊಟ್ಟ ಉತ್ತರವೇನು?

ಹಾಸನದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೋನ್​-ಇನ್​-ಲೈವ್​-ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಎಸ್​ಪಿ ಶ್ರೀನಿವಾಸ ಗೌಡ ಅವರು ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ್ರು.

author img

By

Published : Apr 29, 2020, 7:59 PM IST

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್​ ಗೌಡ

ಹಾಸನ: ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೋನ್-ಇನ್-ಲೈವ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಹಲವಾರು ಜನರು ಕರೆ ಮಾಡಿ ನಗರದ ವಾಹನ ಸಂಚಾರದ ಬಗ್ಗೆ ಮತ್ತು ವಾಪಸ್ ಬೇರೆ ಜಿಲ್ಲೆಗೆ ಹೋಗುವ ವಿಚಾರವಾಗಿ ಪ್ರಶ್ನೆಗಳನ್ನು ಕೇಳಿದ್ರು. ಎಲ್ಲರ ಪ್ರಶ್ನೆಗಳನ್ನು ಸಮಾಧಾನವಾಗಿ ಆಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್​ ಗೌಡ ನೇರವಾಗಿ ಉತ್ತರಿಸಿದರು.​ ​ ​ ​

ತಣ್ಣೀರು ಹಳ್ಳದ ಬಿ.ಎಂ. ರಸ್ತೆ ಏಕಮುಖ ಸಂಚಾರವಾಗಿದ್ದು, ಹೋಗಬಹುದು. ವಾಪಸ್ ಬರಬೇಕಾದರೇ ಬೈಪಾಸ್ ಮೂಲಕ ಬರಬೇಕು ಎಂದು ಪೋನ್ ನಲ್ಲಿ ಬಂದ ಪ್ರಶ್ನೆಗೆ ಎಸ್ಪಿ ಉತ್ತರಿಸಿದ್ರು. ಈ ಭಾಗದಲ್ಲಿ ನಗರದಿಂದ ಬರಬಹುದು, ಆದ್ರೆ ವಾಪಸ್ ಬರುವ ಹಾಗಿಲ್ಲ. ಯಾವ ಪಾಸ್‌ ಬೇಡ ನೀವು ಬೈಪಾಸ್ ಮೂಲಕ ಸುತ್ತಿಕೊಂಡೇ ಕೆಲಸಕ್ಕೆ ಹೋಗಬೇಕು. ತುರ್ತು ವಾಹನಗಳಿಗೆ ಮತ್ತು ಸರ್ಕಾರಿ ವಾಹನಗಳಿಗೆ ಅವಕಾಶ ನೀಡಲು ಹೇಳಲಾಗಿದೆ ಎಂದರು.​ ​ ​ ​ ​

ಚಿಕ್ಕಮಗಳೂರಿನಿಂದ ಮಗಳ ಜೊತೆ ವಾಪಸ್ ಬರಬೇಕು ಏನು ಮಾಡುವುದು ಎಂಬ ಪ್ರಶ್ನೆಗೆ ಉತ್ತರಿಸಿದ ಎಸ್ಪಿ, ನೀವು ಚಿಕ್ಕಮಗಳೂರಿನಲ್ಲಿ ಅನುಮತಿ ಪಡೆದು ಬರಬೇಕು. ಮೇ. 3ರ ನಂತರ ಲಾಕ್​​ಡೌನ್ ಏನಾದರೂ ವಾಪಸ್ ಆದರೂ ಕೂಡ ಅನುಮತಿ ಬೇಕು ಎಂದರು.​ ಕಂದಲಿಯಿಂದ ನಗರಕ್ಕೆ ದ್ವಿಚಕ್ರ ದಲ್ಲಿ ಬರಬೇಕು , ಆದರೆ ಇಲ್ಲಿ ಏಕಮುಖ ಸಂಚಾರ ಇರುವುದರಿಂದ ತೊಂದರೆಯಾಗಿದೆ ಎಂಬ ಕರೆಗೆ ಉತ್ತರಿಸಿದ ಎಸ್ಪಿ, ಈ ಭಾಗದಲ್ಲಿ ಯಾವಾಗಲೂ ಟ್ರಾಫಿಕ್ ಜಾಮ್ ಆಗುತ್ತಿದ್ದು, ಎಪಿಎಂಸಿ ಕಡೆಯಿಂದ ಸಮಸ್ಯೆ ಆಗುತ್ತಿದೆ. ಸಾಮಾಜಿಕ ಅಂತರ ಅನುಸರಿಸುತ್ತಿರಲಿಲ್ಲ. ಈ ಉದ್ದೇಶದಿಂದ ಈ ಭಾಗದ ರಸ್ತೆಯನ್ನು ಏಕಮುಖ ರಸ್ತೆ ಮಾಡಿರುವುದಾಗಿ ತಿಳಿಸಿದರು.​

ಮಹಮದ್ ಸಾಧಿಕ್ ಎಂಬುವರು ಕರೆ ಮಾಡಿ ಮಾತನಾಡಿ, ಭಯದ ವಾತವರಣದಲ್ಲಿ ನಾವು ಇದ್ದೆವು. ಆದರೆ ನೀವು ಮುಸಲ್ಮಾನ ಬಾಂಧವರಿಗೆ ಉತ್ತಮ ಸಲಹೆ ಧೈರ್ಯ ತುಂಬಿದ ಪರಿಣಾಮ ಎಲ್ಲರೂ ಶಾಂತ ರೀತಿಯಲ್ಲಿ ವರ್ತಿಸುವಂತೆ ಮಾಡಿದ್ದೀರಿ. ಗುಜರಾತಿನಲ್ಲಿರುವ ಜನರು ನರಸೀಪುರದಲ್ಲಿರುವ ಜಮಾತಿನಲ್ಲಿದ್ದಾರೆ. ಅವರನ್ನು ವಾಪಸ್ ಕಳುಹಿಸುವುದಕ್ಕೆ ಏನು ಮಾಡಬೇಕು ಪ್ರಶ್ನೆಗೆ ಉತ್ತರಿಸಿದ ಎಸ್ಪಿಯವರು, ನೀವು ಅವರ ಪೂರ್ಣ ವಿವರ ನೀಡಿದ್ರೆ ಜಿಲ್ಲಾಡಳಿತವು ಗುಜುರಾತಿನ ಅಧಿಕಾರಿಗಳೊಂದಿಗೆ ಮಾತನಾಡಿದ ಬಳಿಕ ಅಲ್ಲಿಂದ ಅನುಮತಿ ಪತ್ರ ಬಂದರೇ ಇಲ್ಲಿಂದ ಕಳುಹಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.​ ​ ​

ಇತ್ತೀಚೆಗೆ ಇಬ್ಬರು ವ್ಯಕ್ತಿಗಳು ಸಿಮೆಂಟ್ ಲಾರಿಯಲ್ಲಿ ಅವಿತುಕೊಂಡು ಬಾಂಬೆಯಿಂದ ಬಂದಿದ್ದು, ಅವರನ್ನು ವಶಕ್ಕೆ ಪಡೆಯಲಾಗಿದೆ. ಇವರ ಜೊತೆ ಇನ್ನು ಇಬ್ಬರೂ ಬಂದಿದ್ದು, ಅವರು ಇಳಿದುಕೊಂಡು ಕೆ.ಆರ್. ಪೇಟೆಗೆ ಹೋಗಿರುವುದಾಗಿ ಮಾಹಿತಿ ಬಂದಿದೆ. ಇವರ ಜೊತೆ ಇನ್ನು 5 ಜನರು ಭದ್ರಾವತಿಯಲ್ಲಿ ಇಳಿದುಕೊಂಡಿದ್ದಾರೆ. ಅವರು ಯಾರು ಎಂದು ತಿಳಿದು ಬಂದಿರುವುದಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದರು. ಹೀಗೆ ಹಲವಾರು ಸಾರ್ವಜನಿಕರ ಪ್ರಶ್ನೆಗೆ ಎಸ್​ಪಿ ಶ್ರೀನಿವಾಸ್​ ಗೌಡ ಅವರು ಉತ್ತರ ನೀಡಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.