ETV Bharat / state

ಗಂಡನ ಅನುಮಾನಕ್ಕೆ ಹೆಂಡ್ತಿ ಬಲಿ: ಮಗನ ಕೃತ್ಯದಿಂದ ನೊಂದ ತಾಯಿಯೂ ಆತ್ಮಹತ್ಯೆ! - hasan wife murder case

ಗಂಡನ ಅನುಮಾನಕ್ಕೆ ಹೆಂಡತಿ ಬಲಿಯಾದ ಬೆನ್ನಲ್ಲೇ, ಮಗ ಕೊಲೆಗೈದಿದ್ದನ್ನು ಕೇಳಿ ವಿಷ ಸೇವಿಸಿದ್ದ ತಾಯಿಯೂ ಕೂಡ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ.

hasan-murder-case-mother-dead-who-took-poison
ಗಂಡನ ಅನುಮಾನಕ್ಕೆ ಹೆಂಡ್ತಿ ಬಲಿ
author img

By

Published : Nov 20, 2020, 1:59 AM IST

Updated : Nov 20, 2020, 2:42 AM IST

ಹಾಸನ: ಗಂಡನ ಅನುಮಾನದ ಭೂತಕ್ಕೆ ಹೆಂಡತಿ ಬಲಿಯಾದ ಬೆನ್ನಲ್ಲೇ, ಮಗ ಕೊಲೆಗೈದ ವಿಷಯ ತಿಳಿದು ವಿಷ ಸೇವಿಸಿದ್ದ ತಾಯಿಯೂ ಕೂಡ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ಘಟನೆ ನಡೆದಿದೆ.

ನ.17ರಂದು ಚನ್ನರಾಯಪಟ್ಟಣ ತಾಲೂಕಿನ ಕಾಚೇನಹಳ್ಳಿ ಗ್ರಾಮದಲ್ಲಿ ಗಂಗಾಧರ ಎಂಬಾತ ತನ್ನ ಪತ್ನಿ ಪೂಜಾಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ. ಮಗ ಕೊಲೆ ಮಾಡಿರುವುದನ್ನು ತಿಳಿದು ಗಂಗಾಧರನ ತಾಯಿ ಜಯಮ್ಮ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೀಟನಾಶಕ ಸೇವಿಸಿದ್ದ ಜಯಮ್ಮ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾಳೆ.

ಇದನ್ನೂ ಓದಿ: ಪತ್ನಿ ಮೇಲೆ ಅನುಮಾನ: ಕೊಚ್ಚಿ ಕೊಂದು ಪತಿ ಪರಾರಿ

ವಿಡಿಯೋ ವೈರಲ್​:

ಇನ್ನು ಕೊಲೆ ನಡೆಯುತ್ತಿದ್ದ ವೇಳೆ ಗಂಗಾಧರ ಹಾಗೂ ಪೂಜಾಳ ಮಗ ಕೃತ್ಯವನ್ನು ನೋಡಿದ್ದಾನಂತೆ. ಆತ ಘಟನೆ ಬಗ್ಗೆ ಮಾತನಾಡಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ತಂದೆಯ ಕ್ರೌರ್ಯದ ಬಗ್ಗೆ ಬಾಲಕ ಆಡುತ್ತಿರುವ ಮುಗ್ಧ ಮಾತುಗಳು ಕಣ್ಣೀರು ತರಿಸುವಂತಿವೆ.

ಇದನ್ನೂ ಓದಿ: ಚನ್ನರಾಯಪಟ್ಟಣ: ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಕೊಂದ ಪತಿರಾಯ!

ಘಟನೆ ನಡೆದ 24 ಗಂಟೆಯಲ್ಲೇ ಕೊಲೆ ಆರೋಪಿ ಗಂಗಾಧರನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ತನಿಖೆ ನಡೆಯುತ್ತಿದೆ.

Last Updated : Nov 20, 2020, 2:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.