ETV Bharat / state

ಮಹಿಳೆ-ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಖಂಡಿಸಿ ಕರಾಳ ಮಹಿಳಾ ದಿನ ಆಚರಣೆ

ಹಾಸನದಲ್ಲಿ ಮಹಿಳೆ-ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಖಂಡಿಸಿ ಕರಾಳ ಮಹಿಳಾ ದಿನ ಆಚರಣೆ ಮಾಡಲಾಯಿತು.

author img

By

Published : Apr 2, 2021, 5:33 PM IST

Black Women's Day Celebration in  Hassan
ಲೈಂಗಿಕ ದೌರ್ಜನ್ಯ ಖಂಡಿಸಿ ಕರಾಳ ಮಹಿಳಾ ದಿನ ಆಚರಣೆ

ಹಾಸನ: ಮಗುವಿನ ಮೇಲೆ ನಡೆದಿದ್ದ ಪೈಶಾಚಿಕ ಕೃತ್ಯವನ್ನು ಖಂಡಿಸಿ ಕರಾಳ ಮಹಿಳಾ ದಿನದ ಸಮಿತಿಯವರು ನಗರದಲ್ಲಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಕರಾಳ ಮಹಿಳಾ ದಿನ ಆಚರಣೆ

ಹೆತ್ತವರೊಂದಿಗೆ ಬಸ್ ನಿಲ್ದಾಣದಲ್ಲಿ ಮಲಗಿದ್ದ ಪುಟ್ಟ ಕಂದಮ್ಮನನ್ನು ವಿಕೃತ ಕಾಮಿಯೊಬ್ಬ ಹೊತ್ತೊಯ್ದು, ಅತ್ಯಾಚಾರವೆಸಗಿ ಪರಾರಿಯಾಗಿದ್ದ.

ಐದು ತಿಂಗಳ ಹಿಂದೆಯೂ ಭಿಕ್ಷುಕಿಯೊಬ್ಬಳನ್ನು ಅತ್ಯಾಚಾರವೆಸಗಿ ಬಳಿಕ ಆಕೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು.

ಇದರ ಜೊತೆಗೆ ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿದ್ದು, ಇವುಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಲಾಗಿದೆ.

ನಗರದ ಮಹಾರಾಜ ಪಾರ್ಕ್​ನಲ್ಲಿ ಅಪ್ರಾಪ್ತೆಯೊಬ್ಬಳ ಮೇಲೆ ನಿರಂತರ ಲೈಂಗಿಕ ಕಿರುಕುಳ ನೀಡಲಾಗಿತ್ತು. ಇದಲ್ಲದೇ ಜಿಲ್ಲೆಯ ಹಲವಾರು ಕಡೆ 16-17 ವರ್ಷದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಗಳು ಜರುಗಿದ್ದು, ಹಾಸನದಲ್ಲಿ ಮಹಿಳೆ ಮತ್ತು ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ.

ಹೀಗಾಗಿ ಜಿಲ್ಲೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾಕಾರರು, ಮೌನ ಮೆರವಣಿಗೆ ಮೂಲಕ ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಬಂದು ಮನವಿ ಸಲ್ಲಿಸಿದರು. ಬಳಿಕ ಜಿಲ್ಲಾ ಪೊಲೀಸ್ ಕಚೇರಿಗೆ ಮುಂದೆ "ಕರಾಳ ಮಹಿಳಾ ದಿನ" ಆಚರಣೆ ಮಾಡುವ ಮೂಲಕ ಮೌನ ಪ್ರತಿಭಟನೆ ಮಾಡಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.