ETV Bharat / state

'ಕಮಿಷನ್ ಬಗ್ಗೆ ಮಾತನಾಡಿದ್ದಕ್ಕೆ ನನ್ನ ಮೇಲೆ ಸರ್ಕಾರ ಪೊಲೀಸರನ್ನು ಛೂಬಿಟ್ಟಿದೆ' - ಗೂಢಾಚಾರದ ಮೂಲಕ ಕೇಸ್​ಗಳ ಮಾಹಿತಿ

ಸರ್ಕಾರದ ಕಮಿಷನ್ ಬಗ್ಗೆ ಮಾತನಾಡಿದ್ದಕ್ಕೆ ಗೂಢಾಚಾರದ ಮೂಲಕ ನನ್ನ ಮೇಲಿನ ಕೇಸ್​ಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಪೊಲೀಸರು ಬಾಲೆಹೊಸೂರಿನ ಮಠಕ್ಕೆ ಭೇಟಿ ನೀಡಿ ಭಕ್ತರಿಗೆ ಕಾಟ ಕೊಡುತ್ತಿದ್ದಾರೆ. ಅಲ್ಲದೇ, ನನ್ನ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳನ್ನು ಸಚಿವ ಸಿ.ಸಿ.ಪಾಟೀಲ್ ಸಾಬೀತು ಮಾಡಬೇಕೆಂದು ದಿಂಗಾಲೇಶ್ವರ ಶ್ರೀ ಒತ್ತಾಯಿಸಿದ್ದಾರೆ.

ಫಕೀರ್ ದಿಂಗಾಲೇಶ್ವರ ಶ್ರೀ ಆರೋಪ
ಫಕೀರ್ ದಿಂಗಾಲೇಶ್ವರ ಶ್ರೀ ಆರೋಪ
author img

By

Published : Apr 21, 2022, 6:06 PM IST

ಗದಗ: ರಾಜ್ಯ ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಸರ್ಕಾರ ಪೊಲೀಸ್ ಅಧಿಕಾರಿಗಳ ಮೂಲಕ ನನ್ನ ಹೆದರಿಸುವ ಪ್ರಯತ್ನ ಮಾಡುತ್ತಿದೆ ಎಂದು ಶಿರಹಟ್ಟಿಯ ಫಕೀರೇಶ್ವರ ಮಠದ ಫಕೀರ್ ದಿ‌ಂಗಾಲೇಶ್ವರ ಶ್ರೀ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಗೂಢಾಚಾರದ ಮೂಲಕ ನನ್ನ ಮೇಲಿನ ಕೇಸ್​ಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಪೊಲೀಸರು ಬಾಲೆಹೊಸೂರಿನ ಮಠಕ್ಕೆ ಭೇಟಿ ನೀಡಿ ಭಕ್ತರಿಗೆ ಕಾಟ ಕೊಡುತ್ತಿದ್ದಾರೆ. ಈ ರೀತಿ ನನ್ನ ಹೆದರಿಸುವ ಹುಚ್ಚು ಸಾಹಸಕ್ಕೆ ಕೈ ಹಾಕಿದರೆ ನಾನು ಹೆದರುವ ಸ್ವಾಮಿಯಲ್ಲ ಎಂದು ಅವರು ಹೇಳಿದ್ದಾರೆ.

ಸಚಿವ ಸಿ.ಸಿ.ಪಾಟೀಲ್ ಮನೆ ಮುಂದೆ ಪ್ರತಿಭಟನೆ: ಗದಗಿನ ಲಿಂಗೈಕ್ಯ ತೋಂಟದಾರ್ಯ ಸಿದ್ಧಲಿಂಗ ಶ್ರೀಗಳ ಜನ್ಮದಿನದಿಂದ ಭಾವೈಕ್ಯತೆ ದಿನ ಘೋಷಣೆ ಮಾಡಿದ್ದಕ್ಕೂ ಶ್ರೀಗಳು ಆಕ್ಷೇಪ ಎತ್ತಿದ್ದರು. ಆದರೆ, ಸಚಿವ ಸಿ.ಸಿ.ಪಾಟೀಲ್ ಅವರು ಶ್ರೀಗಳ ಆಕ್ಷೇಪಣೆ ಖಂಡಿಸಿ ಶ್ರೀಗಳ ಹಿನ್ನೆಲೆ ಬಗ್ಗೆ ಮತ್ತು ಹಲವಾರು ಗುರುತರ ಆರೋಪಗಳನ್ನು ಮಾಡಿದ್ದರು. ಹೀಗಾಗಿ ಈಗ ಸಿ.ಸಿ.ಪಾಟೀಲ್ ವಿರುದ್ಧ ಶ್ರೀಗಳು ಕಿಡಿಕಾರಿದ್ದಾರೆ.

ಇದೇ 27ನೇ ತಾರೀಖಿನೊಳಗಾಗಿ ನನ್ನ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳನ್ನು ಸಚಿವ ಸಿ.ಸಿ.ಪಾಟೀಲ್ ಸಾಬೀತು ಮಾಡಬೇಕು. ಸಾಬೀತಾದರೆ ನಾನು ಎಲ್ಲಾ ಮಠಗಳ ಪೀಠತ್ಯಾಗ ಮಾಡುತ್ತೇನೆ. ಒಂದು ವೇಳೆ ಸಾಬೀತು ಮಾಡದಿದ್ದರೆ ಏ.27ರಂದು ನರಗುಂದ ಪಟ್ಟಣದಲ್ಲಿರುವ ಸಿ.ಸಿ ಪಾಟೀಲ್ ಮನೆ ಎದುರು ಧರಣಿ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಾಲೀಕರಾಗಿದ್ದಿರೋ, ಜೀತದಾಳು ಆಗಿದ್ದೀರೋ: ಸಿ.ಸಿ.ಪಾಟೀಲ್​ ನನ್ನ ಬಗ್ಗೆ ಕೆಳಮಟ್ಟದ ಪದ ಬಳಸಿ ನಮಗೆ ಭಕ್ತರು ಆಘಾತ ಮಾಡಿದ್ದಾರೆ. ಶ್ರೀಗಳ ಪೂರ್ವಾಶ್ರಮದ ಬಗ್ಗೆ ನನಗೆ ಗೊತ್ತಿದೆ ಅಂದಿದ್ದಾರೆ. ನಾನು 5ನೇ ವರ್ಷದವನಾಗಿದ್ದಾಲೇ ಮಾನಸಿಕವಾಗಿ ಸನ್ಯಾಸಿ ಸ್ವೀಕಾರ ಮಾಡಿದ್ದೇನೆ. ನಮ್ಮ ಮನೆಯಲ್ಲಿ ಸಿ.ಸಿ.ಪಾಟೀಲ್ ಮಾಲೀಕರಾಗಿದ್ದಿರೋ. ಜೀತದಾಳು ಆಗಿದ್ದೀರೋ ಸಮಾಜಕ್ಕೆ ಸ್ಪಷ್ಟ ಪಡಿಸಬೇಕೆಂದೂ ಒತ್ತಾಯಿಸಿದ್ದಾರೆ.

ಮೂರು ಸಾವಿರ ಮಠದ ವಿಷಯ ಪ್ರಸ್ತಾಪ ಮಾಡಿ, ಪೀಠಕ್ಕಾಗಿ ನಾನು ರೌಡಿಸಂ‌ ಮಾಡಿದ್ದೇನೆ ಎಂದಿದ್ದಾರೆ. ರೌಡಿಸಂ ಏನ್ ಮಾಡಿದ್ದೇನೆ ಅಂತ ಸಚಿವರು ತೋರಿಸಬೇಕು. ಅವರು ನನ್ನ ಮೇಲೆ ಮಾಡಿರುವ ಆರೋಪಗಳು ಸಾಬೀತು ಮಾಡಿದರೆ ತಕ್ಷಣ ಎಲ್ಲ ಮಠಗಳ ಪೀಠ ತ್ಯಾಗ ಮಾಡುತ್ತೇನೆ ಎಂದು ಶ್ರೀಗಳು ಗುಡುಗಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ: ಮೌಲ್ವಿ ಮೌಲಾನಾ ವಾಸೀಂ ಪಠಾಣ್ ಪೊಲೀಸ್ ವಶಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.