ETV Bharat / state

ಎಲ್ಲಿ ಶಕ್ತಿ ಇರುತ್ತೋ ಅಲ್ಲಿಗೆ ಜನ ಹೋಗ್ತಾರೆ: ಡಿ.ಕೆ. ಶಿವಕುಮಾರ್ - ದಿಂಗಾಲೇಶ್ವರ ಮಠ

ಲಕ್ಷ್ಮೇಶ್ವರ ತಾಲೂಕಿನ ದಿಂಗಾಲೇಶ್ವರ ಮಠಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ದಿಂಗಾಲೇಶ್ವರ ಶ್ರೀಗಳ ಆಶೀರ್ವಾದ ಪಡೆದರು.

KPCC President DK Shivakumar
ದಿಂಗಾಲೇಶ್ವರ ಮಠಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ
author img

By

Published : Dec 18, 2020, 2:22 PM IST

ಗದಗ : ದಿಂಗಾಲೇಶ್ವರ ಶ್ರೀಗಳು ವಚನಗಳ ಮೂಲಕ ಅಪಾರವಾದ ಕ್ರಾಂತಿ ಮಾಡುತ್ತಿದ್ದಾರೆ. ಇಂತಹ ಒಬ್ಬ ಮಹಾನ್​ ಮಠಾಧೀಶರನ್ನು ಭೇಟಿ ಮಾಡಬೇಕು ಎಂದು ಬಹಳ ದಿನಗಳಿಂದ ಕಾಯುತ್ತಿದ್ದೆ. ಹಾಗಾಗಿ ಅವರ ದರ್ಶನ, ಮಾರ್ಗದರ್ಶನ ಮತ್ತು ಆಶೀರ್ವಾದ ಪಡೆದು ಹೋಗುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ದಿಂಗಾಲೇಶ್ವರ ಮಠಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದಿಂಗಾಲೇಶ್ವರ ಮಠದಲ್ಲಿ ಮಾತನಾಡಿದ ಅವರು, ಎಲ್ಲಿ ಶಕ್ತಿ ಇರುತ್ತೋ ಅಲ್ಲಿಗೆ ಜನ ಹೋಗ್ತಾರೆ. ಅವರಲ್ಲಿ ಶಕ್ತಿ ಇದೆ. ಜ್ಞಾನ ಭಂಡಾರ, ಸಂಸ್ಕೃತಿ, ಮಾರ್ಗದರ್ಶನ ಕೊಡುವ ಶಕ್ತಿ ಅವರಲ್ಲಿದೆ. ಹಾಗಾಗಿ ಅವರ ದರ್ಶನ ಮಾಡಿ ಧನ್ಯನಾಗಬೇಕು ಅಂತ ಬಂದಿದ್ದೆ ಎಂದು ತಿಳಿಸಿದರು.

ಓದಿ :ದಿಂಗಾಲೇಶ್ವರ ಮಠಕ್ಕೆ ಡಿಕೆಶಿ ಭೇಟಿ.. ಕುತೂಹಲ ಮೂಡಿಸಿದ ಶ್ರೀಗಳ ಜತೆಗಿನ ಮಾತುಕತೆ

ವೀರಶೈವ ಲಿಂಗಾಯತರ ಮನ ಗೆಲ್ಲುವ ಪ್ರಯತ್ನದ ಭೇಟಿನಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ರಾಜಕಾರಣ ಮಾಡಬೇಕು ಎನ್ನುವ ಇಚ್ಛೆ ಅವರಲ್ಲಿಲ್ಲಾ. ಅವರು ಧರ್ಮ, ಸಮಾಜ ಕಾಪಾಡಬೇಕು ಅಷ್ಟೇ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.