ಗದಗ: ಜಿಲ್ಲೆಯಲ್ಲಿ ಇಂದು ಮತ್ತೆ ಇಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 178ಕ್ಕೆ ಏರಿಕೆಯಾಗಿದೆ.
ಧಾರವಾಡ ಜಿಲ್ಲೆಯಿಂದ ಆಗಮಿಸಿದ್ದ ನರಗುಂದ ನಗರದ ಗಡಿ ಓಣಿಯ ನಿವಾಸಿ 39 ವರ್ಷದ ಪುರುಷ ಪಿ-15,320 ಹಾಗೂ ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ್ದ ರೋಣ ನಗರದ ಬಾದಾಮಿ ರಸ್ತೆಯಲ್ಲಿರುವ ಕನ್ನಡ ಶಾಲೆ ಹತ್ತಿರದ ನಿವಾಸಿ 21 ವರ್ಷದ ಪುರುಷ ಪಿ-15,321 ಕೊರೊನಾ ಸೋಂಕು ದೃಢಪಟ್ಟಿದೆ.
ಸದ್ಯ ಈ ಇಬ್ಬರಿಗೆ ಗದಗ ನಿಗದಿತ ಜಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಸುಂದರೇಶ್ ಬಾಬು ಎಂ. ತಿಳಿಸಿದ್ದಾರೆ. ಒಟ್ಟು ಸೋಂಕಿತರ ಪೈಕಿ ಮೂವರು ಮೃತಪಟ್ಟಿದ್ದು, 53 ಜನ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 122 ಸಕ್ರಿಯ ಪ್ರಕರಣಗಳಿವೆ.