ಗದಗ: ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರದ ಕಾಶಿ ವಿಶ್ವನಾಥ ನಗರದಲ್ಲಿ ಕುಡಿಯುವ ನೀರಿಗೆ ಚರಂಡಿ ನೀರು ಮಿಕ್ಸ್ ಆಗುತ್ತಿದೆ.
ಪದೇ ಪದೇ ಕುಡಿಯುವ ನೀರಿನ ನಲ್ಲಿಯಲ್ಲಿ ಚರಂಡಿ ನೀರು ಸೇರಿಕೊಂಡು ಬರುತ್ತಿದೆ. ಹೀಗಾಗಿ ನೀರು ಕಲುಷಿತಗೊಂಡು ಕುಡಿಯಲಾರದಂತಾಗಿದೆ. ಆದರೂ ಬೇರೆ ದಾರಿ ಇಲ್ಲದೆ ಜನರು ಇದೇ ನೀರನ್ನು ಬಳಸುತ್ತಿದ್ದು, ಹಲವರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ನಗರಸಭೆಯ ನೀರು ಸರಬರಾಜು ಮಾಡುವ ಪೈಪ್ ಲೈನ್ ಒಡೆದು ಹೋಗಿರುವುದೇ ಈ ಅವಾಂತರಕ್ಕೆ ಕಾರಣ ಎನ್ನಲಾಗಿದ್ದು. ಈ ಬಗ್ಗೆ ಹಲವು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.