ETV Bharat / state

ದರೋಡೆ ಮಾಡುತ್ತಿದ್ದ ಅಂತರ್​ ರಾಜ್ಯ ಖದೀಮರ ಬಂಧನ - ಕಳ್ಳತನ

ಗದಗ ನಗರದಲ್ಲಿ ಕಳೆದ ಕೆಲ ತಿಂಗಳುಗಳ ಹಿಂದೆ ನರಸಾಪುರ ಕೈಗಾರಿಕಾ ಪ್ರದೇಶ ಹಾಗೂ ಗದಗ ಎಪಿಎಂಸಿಯಲ್ಲಿ ಜರುಗಿದ ಸರಣಿ ಕಳ್ಳತನಕ್ಕೆ ಸಂಬಂಧಿಸಿದಂತೆ ಗುಜರಾತಿನ 5 ಜನ ದರೋಡೆಕೋರನ್ನು ಬೆಟಗೇರಿ ಠಾಣೆ ಪೊಲಿಸರು ಬಂಧಿಸಿದ್ದಾರೆ.

ಸರಣಿ ಕಳ್ಳತನಕ್ಕೆ
author img

By

Published : Feb 9, 2019, 5:56 PM IST

ಗದಗ: ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹಗಲು ರಾತ್ರಿ ಎನ್ನದೇ ದರೋಡೆ ಮಾಡುತ್ತಿದ್ದ ಕುಖ್ಯಾತ ಅಂತರ್​ ರಾಜ್ಯ ದರೋಡೆಕೋರರನ್ನು ಗದಗ-ಬೆಟಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗದಗ ನಗರದಲ್ಲಿ ಕಳೆದ ಕೆಲ ತಿಂಗಳುಗಳ ಹಿಂದೆ ನರಸಾಪುರ ಕೈಗಾರಿಕಾ ಪ್ರದೇಶ ಹಾಗೂ ಗದಗ ಎಪಿಎಂಸಿಯಲ್ಲಿ ಜರುಗಿದ ಸರಣಿ ಕಳ್ಳತನಕ್ಕೆ ಸಂಬಂಧಿಸಿದಂತೆ ಗುಜರಾತಿನ 5 ಜನ ದರೋಡೆಕೋರನ್ನು ಬೆಟಗೇರಿ ಠಾಣೆ ಪೊಲಿಸರು ಬಂಧಿಸಿದ್ದಾರೆ. ಶಂಕರಭಾಯ್, ದಿಲೀಪ್ ಭಾಯ್, ಕಾಲೂಭಾಯ್, ಕೊಹ್ಲೇಶಭಾಯ, ಅಲೇಶಭಾಯ್ ಬಂಧಿತ ಆರೋಪಿಗಳು.

ದರೋಡೆಕೋರರಿಂದ ಒಟ್ಟು 65 ಸಾವಿರ ನಗದು, 5 ಮೊಬೈಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿತರಾದ ದರೋಡೆಕೊರರು, ನರಸಾಪೂರ ಕೈಗಾರಿಕಾ ಪ್ರದೇಶದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಹಾಗೂ ಗದಗ ಎಪಿಎಂಸಿಯ ಮಾರುಕಟ್ಟೆಯಲ್ಲಿ ಜರುಗಿದ ದರೋಡೆ ಪ್ರಕರಣ ಸೇರಿದಂತೆ ರಾಜ್ಯದ ರಾಯಚೂರು, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ ಹಾಗೂ ಆಂಧ್ರ ಪ್ರದೇಶದ ಆದೋನಿ, ನಂದ್ಯಾಳ ಪಟ್ಟಣದಲ್ಲಿ ದರೋಡೆ ಮಾಡಿರುವುದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಂತೋಷ ಬಾಬು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.