ಹುಬ್ಬಳ್ಳಿ : ಇಲ್ಲಿನ ಬಾಲ ಪ್ರತಿಭೆಯೊಬ್ಬಳು ವಿಶಿಷ್ಟವಾಗಿ ಸ್ಕೇಟಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾಳೆ. 9 ವರ್ಷದ ಸ್ತುತಿ ಕುಲಕರ್ಣಿ ಎಂಬ ಬಾಲಕಿಯ ಸ್ಕೇಟಿಂಗ್ ಚಾತುರ್ಯ ನೋಡಿದವರು ಶಹಬಾಸ್ ಎನ್ನುತ್ತಿದ್ದಾರೆ.
ಭಾರತದಲ್ಲಿಯೇ ಮೊದಲ ಬಾರಿಗೆ ಮೂರು ರಿಂಗ್ ಬಳಸಿ ಸ್ಕೇಟಿಂಗ್ ಮಾಡುವ ಮೂಲಕ ಸ್ತುತಿ ಕುಲಕರ್ಣಿ ದಾಖಲೆ ನಿರ್ಮಿಸಿದ್ದಾಳೆ.
ಹುಬ್ಬಳ್ಳಿಯ ಪರಿವರ್ತನಾ ಗುರುಕುಲ ಶಾಲೆಯಲ್ಲಿ 4 ನೇ ತರಗತಿ ಓದುತ್ತಿರುವ ಸ್ತುತಿ, ಕಿಶೋರ್ ಕುಲಕರ್ಣಿ ಹಾಗೂ ರಶ್ಮಿ ಕುಲಕರ್ಣಿ ಅವರ ಸುಪುತ್ರಿ. ಈ ಬಾಲಕಿ ಪ್ರದರ್ಶಿಸುವ ಈ ರೀತಿಯ ವಿಶೇಷ ಸ್ಕೇಟಿಂಗ್ ಈಗಾಗಲೇ ಏಷ್ಯಾ ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಗೋಲ್ಡನ್ ಬುಕ್ ರೆಕಾರ್ಡ್ ಸೇರಿದೆ. 28 ಸೆಕೆಂಡುಗಳಲ್ಲಿ ಮೂರು ರಿಂಗುಗಳನ್ನು ಸೊಂಟದಲ್ಲಿ ತಿರುಗಿಸುತ್ತಾ ಸ್ಕೇಟಿಂಗ್ ಮಾಡಿ ಈಕೆ ದಾಖಲೆ ನಿರ್ಮಿಸಿದ್ದಾಳೆ.