ETV Bharat / state

ಮಹಿಳೆಯರು ಸ್ವಾವಲಂಬಿಗಳಾಗಿ ಸ್ವಾಭಿಮಾನದಿಂದ ಬದುಕಿ.. ಡಿಸಿ ದೀಪಾ ಚೋಳನ್ - ಡಿಸಿ ದೀಪಾ ಚೋಳನ್

ಸಾಮಾಜಿಕ ವ್ಯವಸ್ಥೆ ಅವಲೋಕಿಸಿದಾಗ ಮಹಿಳೆಯರ ನಿತ್ಯದ ಬದುಕು, ಕಾರ್ಯಚಟುವಟಿಕೆ, ಸಾಮಾಜಿಕ ಗೌರವ ಸೇರಿ ವಿವಿಧ ಕ್ಷೇತ್ರಗಳಲ್ಲಿ ಹಿಂದಿನ ಕಾಲದ ಪರಿಸ್ಥಿತಿಗಿಂತ ಇಂದು ಬಹಳಷ್ಟು ಬದಲಾವಣೆಯಾಗಿದೆ. ಮಹಿಳೆಯರ ಸಾಧನೆಗೆ ಪುರುಷರು ಸಹಕಾರ, ಪ್ರೋತ್ಸಾಹ ಮತ್ತು ಮಹಿಳೆಯರು ಸ್ವತಃ ನಿರ್ಧಾರ ಕೈಗೊಳ್ಳವಲ್ಲಿ ಸ್ವಾತಂತ್ರ್ಯ ನೀಡುವ ಅಗತ್ಯವಿದೆ.

womens_day_programme_in dharwad
ಡಿಸಿ ದೀಪಾ ಚೋಳನ್
author img

By

Published : Mar 8, 2020, 11:42 PM IST

ಧಾರವಾಡ : ಮಹಿಳೆಯರ ಸಾಧನೆಗೆ ಪುರುಷರ ಸಹಕಾರ, ಪ್ರೋತ್ಸಾಹ ಮತ್ತು ಮಹಿಳೆಯರು ಸ್ವತಃ ನಿರ್ಧಾರ ಕೈಗೊಳ್ಳವಲ್ಲಿ ಸ್ವಾತಂತ್ರ್ಯ ನೀಡುವ ಅಗತ್ಯವಿದೆ ಎಂದು ಧಾರವಾಡದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ.

ಡಿಸಿ ದೀಪಾ ಚೋಳನ್

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಹಿಳಾ ಅಭಿವೃದ್ಧಿ ನಿಗಮ ಮತ್ತು ಸ್ತ್ರೀ ಶಕ್ತಿ ಒಕ್ಕೂಟದ ಸಹಯೋಗದಲ್ಲಿ ಡಾ.ಮಲ್ಲಿಕಾರ್ಜುನ ಮನಸೂರ ಸಭಾ ಭವನದಲ್ಲಿ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬಿಗಳಾಗಿ ಸ್ವಾಭಿಮಾನದಿಂದ ಬದುಕಲು ಸರ್ಕಾರ ಹಲವಾರು ಯೋಜನೆ ಹಾಗೂ ಮಹಿಳೆಯರ ರಕ್ಷಣೆಗಾಗಿ ವಿವಿಧ ಕಾನೂನುಗಳನ್ನು ಜಾರಿಗೊಳಿಸಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದೆ.

ಸಾಮಾಜಿಕ ವ್ಯವಸ್ಥೆ ಅವಲೋಕಿಸಿದಾಗ ಮಹಿಳೆಯರ ನಿತ್ಯದ ಬದುಕು, ಕಾರ್ಯಚಟುವಟಿಕೆ, ಸಾಮಾಜಿಕ ಗೌರವ ಸೇರಿ ವಿವಿಧ ಕ್ಷೇತ್ರಗಳಲ್ಲಿ ಹಿಂದಿನ ಕಾಲದ ಪರಿಸ್ಥಿತಿಗಿಂತ ಇಂದು ಬಹಳಷ್ಟು ಬದಲಾವಣೆಯಾಗಿದೆ. ಮಹಿಳೆಯರ ಸಾಧನೆಗೆ ಪುರುಷರು ಸಹಕಾರ, ಪ್ರೋತ್ಸಾಹ ಮತ್ತು ಮಹಿಳೆಯರು ಸ್ವತಃ ನಿರ್ಧಾರ ಕೈಗೊಳ್ಳವಲ್ಲಿ ಸ್ವಾತಂತ್ರ್ಯ ನೀಡುವ ಅಗತ್ಯವಿದೆ ಎಂದರು. ಗ್ರಾಮೀಣ ಭಾಗದ ಮಹಿಳೆಯರು ಸೇರಿ ಎಲ್ಲ ಮಹಿಳಾ ಸಮುದಾಯಗಳು ಸಮಾನತೆಯಿಂದ ಬದುಕಲು ಸಹಾಯಕವಾಗುವಂತೆ ಮಹಿಳೆಯರ ಸಮಗ್ರ ಅಭಿವೃದ್ಧಿಗಾಗಿ ಪರಸ್ಪರ ಗೌರವ, ಸಹಕಾರ ನೀಡುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ್ ಮಾತನಾಡಿದರು. ವೇದಿಕೆಯಲ್ಲಿ ಅಬಕಾರಿ ಇಲಾಖೆಯ ಉಪ ಆಯುಕ್ತ ಶಿವನಗೌಡರ, ಅಧೀಕ್ಷಕ ಮಂಜುನಾಥ , ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕಲ್ಲಪ್ಪ ಪುಡಕಲಟ್ಟಿ, ಧಾರವಾಡ ತಾಲೂಕು ಪಂಚಾಯತ್ ಅಧ್ಯಕ್ಷ ಈರಪ್ಪ ಏಣಗಿ ಸೇರಿ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅಸಾಧಾರಣ ಸಾಧನೆ ಮಾಡಿದ ಯುವ ಮಹಿಳಾ ಪ್ರತಿಭೆಗಳಿಗೆ ಸನ್ಮಾನ ಮಾಡಲಾಯಿತು. ಉತ್ತಮವಾಗಿ ಕಾರ್ಯನಿರ್ವಹಿಸಿದ ಸ್ತ್ರೀಶಕ್ತಿ ಸಂಘಗಳು, ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಸನ್ಮಾನಿಸಿ, ಪ್ರಮಾಣ ಪತ್ರ ವಿತರಿಸಲಾಯಿತು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಲು ಮಹಿಳೆಯರಿಗೆ ಪ್ರೋತ್ಸಾಹಿಸಿದ ಗಣ್ಯ ವ್ಯಕ್ತಿಗಳನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಹಕ್ಕುಗಳು ಹಾಗೂ ಘೋಷಣೆ ಕುರಿತ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ನಂತರ ಸ್ತ್ರೀ ಶಕ್ತಿ ಸಂಘಗಳು ವಿವಿಧ ಯೋಜನೆಗಳಡಿ ಸರ್ಕಾರದ ಧನ ಸಹಾಯ ಪಡೆದು ಉತ್ಪಾದನೆ ಮಾಡಿದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಇತರರು ಉದ್ಘಾಟಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.