ಕಲಘಟಗಿ: ಪಟ್ಟಣದ ನಿವಾಸಿ ತಬಕದಹೊನ್ನಿಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಕಾಂತ ಜಾಲಿಸತಕಿ ಇವರನ್ನು ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ, ಜಯಚಂದ್ರ ಗೋವೆಬೆಟ್ಟ ಹಾಗೂ ದಿನೇಶ ವಾಮನ ಎಂಬುವರು ಬೆಳಗ್ಗೆ ಅಪರಹರಣ ಮಾಡಿರುವ ಘಟನೆ ನಡೆದಿದೆ.
ಇವರು ಬೆಳಗ್ಗೆ 11 ಘಂಟೆ ಸುಮಾರಿಗೆ ತಮ್ಮ ಮೋಟರ್ ಸೈಕಲ್ನಲ್ಲಿ ಶಾಲೆಗೆ ತೆರಳುತ್ತಿದ್ದಾಗ ತಾಲೂಕಿನ ಹಿಂಡಸಗೇರಿ ಗ್ರಾಮದ ರಾಜ್ಯ ಹೆದ್ದಾರಿ ಬೇಡ್ತಿ ಹಳ್ಳದ ಸೇತುವೆ ಹತ್ತಿರ ಅಡ್ಡಗಟ್ಟಿ ಹಣದ ವಿಚಾರವಾಗಿ ಗಲಾಟೆ ನಡೆಸಿ, ಕಾರಿನಲ್ಲಿ ಬಂದು ಶಿಕ್ಷಕನನ್ನು ಅಪಹರಣ ಮಾಡಿಕೊಂಡು ಪರಾರಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ಕೂಡ ಹಣದ ವಿಚಾರವಾಗಿ ಸಣ್ಣ ಪುಟ್ಟ ಗಲಾಟೆ, ಜಗಳ ಆಗಿದೆ ಎಂದು ಶಿಕ್ಷಕನ ಪುತ್ರ ವಿದ್ಯಾರ್ಥಿಯಾದ ಹರ್ಷಿತ ಜಾಲಿಸತಕಿ ಪೊಲೀಸ್ ಠಾಣೆಯಲ್ಲಿ ಅಪಹರಣ ಮಾಡಿದವರ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಕುರಿತು ಕಲಘಟಗಿ ಪೊಲೀಸ್ ಠಾಣೆ ಎಎಸ್ಐ ಆರ್.ಎಂ ಸಂಕಿನದಾಸರ ಹಾಗೂ ಸಿಪಿಐ ವಿಜಯ ಬಿರಾದಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಕಾಂತ ಜಾಲಿಸತಕಿ ಇವರನ್ನು ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಯಚಂದ್ರ ಗೋವೆಬೆಟ್ಟ ಹಾಗೂ ದಿನೇಶ ವಾಮನ ಎಂಬುವರು ಶಿಕ್ಷಕನನ್ನು ಬೆಳಗ್ಗೆ ಅಪರಹರಣ ಮಾಡಿಕೊಂಡು ಹೋದ ಘಟನೆ ನಡೆದಿದೆ.