ETV Bharat / state

ಪರಿಶಿಷ್ಟರು, ಬ್ರಾಹ್ಮಣರು ಯಾರು ಬೇಕಾದ್ರೂ ಸಿಎಂ ಆಗ್ಬಹುದು: ಸಚಿವ ಶ್ರೀರಾಮುಲು - Etv Bharat Kannada

ಕೇವಲ ರಾಜಕಾರಣಕ್ಕೆ ಮತ್ತು ಚುನಾವಣೆ ಹತ್ತಿರ ಬರುತ್ತಿದೆ ಎಂದು ವೈಯಕ್ತಿಕ ಟೀಕೆಗಳನ್ನು ಮಾಡಬಾರದು ಎಂದು ಶ್ರೀರಾಮುಲು ಹೇಳಿದರು.

ಸಚಿವ ಶ್ರೀರಾಮುಲು
ಸಚಿವ ಶ್ರೀರಾಮುಲು
author img

By

Published : Feb 10, 2023, 8:02 PM IST

ಹೆಚ್​ಡಿಕೆ ಹೇಳಿಕೆಗೆ ಶ್ರೀರಾಮುಲು ಪ್ರತಿಕ್ರಿಯೆ

ಹುಬ್ಬಳ್ಳಿ: ಬ್ರಾಹ್ಮಣರು, ಪರಿಶಿಷ್ಟ ಜಾತಿ, ಪಂಗಡದವರು ಸೇರಿದಂತೆ ಎಲ್ಲರೂ ಸಿಎಂ ಆಗಬಹುದು ಎಂದು ಬಿಜೆಪಿ ಮುಂದಿನ ಸಿಎಂ ವಿಚಾರವಾಗಿ ಹೆಚ್​ಡಿಕೆ ಹೇಳಿಕೆಗೆ ಸಾರಿಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಂದ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದೆ. ಸಿಎಂ ಹುದ್ದೆಯನ್ನು ಕುಮಾರಸ್ವಾಮಿ ಕುಟುಂಬದವರು ಗುತ್ತಿಗೆ ತಗೆದುಕೊಂಡಿದ್ದಾರಾ? ಪ್ರಜಾಪ್ರಭುತ್ವದಲ್ಲಿ ಇವರೇ ಮುಖ್ಯಮಂತ್ರಿ ಆಗಬೇಕು ಅನ್ನೋದಿಲ್ಲ ಎಂದರು.

ಪ್ರಹ್ಲಾದ್ ಜೋಶಿ ಅವರು ಪೇಶ್ವೆ ಸಂಸ್ಕೃತಿಯಿಂದ ಬಂದವರು ಎಂದು ಹೆಚ್​ಡಿಕೆ ಹೇಳುತ್ತಾರೆ. ಕೇವಲ ರಾಜಕಾರಣಕ್ಕೆ ಮತ್ತು ಚುನಾವಣೆ ಹತ್ತಿರ ಬರುತ್ತಿದೆ ಎಂದು ವೈಯಕ್ತಿಕ ಟೀಕೆ ಸರಿಯಲ್ಲ. ಮುಂದಿನ ಸಿಎಂ ವಿಚಾರವಾಗಿ ಬಿಜೆಪಿಯಲ್ಲಿ ಯಾವುದೇ ಚರ್ಚೆ ಆಗಿಲ್ಲ. ಪ್ರಹ್ಲಾದ್​ ಜೋಶಿ ಕೂಡ ಇಂದು ಬಹಳ ಶಕ್ತಿವಂತ ನಾಯಕ. ಅವರ ಬಗ್ಗೆ ಏಕವಚನದಲ್ಲಿ ಮಾತಾಡೋದು ಸರಿ ಅಲ್ಲ. ಜೋಶಿ ಅವರನ್ನು ಕೇವಲ ಬ್ರಾಹ್ಮಣರೆಂದು ನಾವು ನೋಡ್ತಿಲ್ಲ. ಮೀಸಲಾತಿ ವಿಚಾರದಲ್ಲಿ ಜೋಶಿ ನಮ್ಮ ಜೊತೆ ನಿಂತಿದ್ದಾರೆ ಎಂದು ಹೇಳಿದರು.

ಬಳ್ಳಾರಿಯಿಂದಲೇ ಸ್ಪರ್ಧೆ: ಚುನಾವಣೆಗೆ ಸ್ಪರ್ಧೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ನಾನು ಬಳ್ಳಾರಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿದ್ದೇನೆ ಎಂದು ತಿಳಿಸಿದರು. ಇನ್ನು, ಸಾರಿಗೆ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಉಚಿತ ತರಬೇತಿಗಾಗಿ ಲಂಚ ಪಡೆಯಲಾಗುತ್ತಿದೆ ಎಂಬ ಆರೋಪಕ್ಕೆ, ನಮ್ಮ ಇಲಾಖೆಯಲ್ಲಿ ಲಂಚ ಪಡೆದು ತರಬೇತಿ ನೀಡುತ್ತಿಲ್ಲ. ಇಂತಹ ವಿಷಯಕ್ಕೆ ನಾನು ಅವಕಾಶವನ್ನೂ ಮಾಡಿಕೊಡುವುದಿಲ್ಲ ಎಂದು ಹೇಳಿದರು.

ರೆಡ್ಡಿ ಅವರ ಮನವೊಲಿಸುವ ಕೆಲಸ ಮಾಡಲಾಗುತ್ತಿದೆ ಎಂಬ ವಿಚಾರದ ಬಗ್ಗೆ ಮಾತನಾಡಿ, ಜನಾರ್ದನ ರೆಡ್ಡಿ ಈಗಾಗಲೇ ತಮ್ಮ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದೆ. ನಾವು ನಮ್ಮ ಪಕ್ಷದ ಸಿದ್ದಾಂತ ಮತ್ತು ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ಮೋದಿ ಮತ್ತು ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದರು.

ಇದನ್ನೂ ಓದಿ: ಮಹದಾಯಿ ಯೋಜನೆಗಿಂತ ನಮಗೆ ಪ್ರಚಾರ ಮುಖ್ಯ ಎಂದಿದ್ದರು ಶೆಟ್ಟರ್: ಹೆಚ್‌ಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.