ETV Bharat / state

ಅಂತರ್​​ಜಿಲ್ಲಾ ಮೊಬೈಲ್ ಕಳ್ಳರ ಬಂಧನ.. ಹುಬ್ಬಳ್ಳಿಯಲ್ಲಿ ಲಕ್ಷಾಂತರ ರೂ. ಮೌಲ್ಯದ 22 ಫೋನ್​ಗಳು ವಶಕ್ಕೆ - mobile theft case

ಮೂವರು ಮೊಬೈಲ್​​ ಕಳ್ಳರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ವಿವಿಧ ಕಂಪನಿಯ 2,78,000 ರೂ. ಮೌಲ್ಯದ 22 ಮೊಬೈಲ್ ಫೋನುಗಳನ್ನು ವಶಪಡಿಸಿಕೊಂಡಿದ್ದಾರೆ.

Mobile thieves arrested at hubli
ಅಂತರ್​​ಜಿಲ್ಲಾ ಮೊಬೈಲ್ ಕಳ್ಳರ ಬಂಧನ
author img

By

Published : May 22, 2021, 9:18 AM IST

ಹುಬ್ಬಳ್ಳಿ: ವಿವಿಧ ಕಂಪನಿಯ ಬೆಲೆ ಬಾಳುವ ಮೊಬೈಲ್​​ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ರವೀಂದ್ರ ಬಸವರಾಜ ಭೋವಿ, ರಂಗಪ್ಪ ತಿಮ್ಮಣ್ಣ ಭೋವಿ ಹಾಗೂ ತುಮಕೂರು‌ ಜಿಲ್ಲೆಯ ಪಾವಗಡದ ರಾಘವೇಂದ್ರ ಬಂಧಿತ ಆರೋಪಿಗಳು.‌ ಬಂಧಿತರಿಂದ ವಿವಿಧ ಕಂಪನಿಯ 2,78,000 ರೂ. ಮೌಲ್ಯದ 22 ಮೊಬೈಲ್ ಫೋನುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ‌‌ ಒಪ್ಪಿಸಲಾಗಿದೆ.

ಇದನ್ನೂ ಓದಿ: ಮಾದಪ್ಪನ ಬೆಟ್ಟದ ಆಸ್ಪತ್ರೆಗೆ ಶೀಘ್ರದಲ್ಲೇ ವೈದ್ಯರು, ಆ್ಯಂಬುಲೆನ್ಸ್: ಸಚಿವ ಸುರೇಶ್ ಕುಮಾರ್

ಈ ಪ್ರಕರಣಗಳನ್ನು ಭೇದಿಸಿದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್​ಪೆಕ್ಟರ್​ ಹಾಗೂ ಸಿಬ್ಬಂದಿಯವರು ಉತ್ತಮ ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯ ವೈಖರಿಯನ್ನು ಪೊಲೀಸ್ ಆಯುಕ್ತ ಲಾಬೂರಾಮ್ ಶ್ಲಾಘಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.