ಧಾರವಾಡ: ಡಿಸೆಂಬರ್ವರೆಗೂ ರಾಜ್ಯ ರಾಜಕೀಯದಲ್ಲಿ ಬಾಂಬ್ ಬ್ಲಾಸ್ಟ್ ಆಗುತ್ತೆ. ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗ್ತಾರೆ, ಕಾದು ನೋಡಿ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಕುಮಾರಸ್ವಾಮಿ ಅವರಿಗೆ ನನ್ನ ಅರ್ಹತೆ ಗೊತ್ತಿರಲಿಲ್ವಾ?. ರಾಜ್ಯದಲ್ಲಿ 123 ಸ್ಥಾನ ಗೆಲ್ಲುತ್ತೇನೆ ಎನ್ನುವ ಅವರು ಮೊದಲು 59 ಸೀಟು ಗೆದ್ದು ತೋರಿಸಲಿ. ಜಮೀರ್ ಅಹ್ಮದ್ ಖಾನ್ ಅವರನ್ನು ಯಾರೂ ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದರು.
ರಾಹುಲ್ ಗಾಂಧಿ ಅವರು ಇತಿಹಾಸ ಕ್ರಿಯೇಟ್ ಮಾಡ್ತಿದ್ದಾರೆ. ಪಾದಯಾತ್ರೆ ಮೂಲಕ ಇಷ್ಟೊಂದು ಜನ ಬರ್ತಾರೆ ಅಂತ ನಾವು ಅಂದುಕೊಂಡಿರಲಿಲ್ಲ. ಪಾಂಡವಪುರದಿಂದ ಶ್ರೀರಂಗಪಟ್ಟಣದವರೆಗೂ ನಡೆದ ನನಗೆ ಅಲ್ಲಿಯವರೆಗೂ ನಡೆಯೋಕೆ ಆಗಿಲ್ಲ. ಅಂಥದ್ದರಲ್ಲಿ ರಾಹುಲ್ ಗಾಂಧಿ ಇಷ್ಟೊಂದು ನಡೀತಿರೋದು ನಿಜಕ್ಕೂ ಅಚ್ಚರಿ. ಮುಸ್ಲಿಮರಿಗೆ ಕಾಂಗ್ರೆಸ್ನಲ್ಲಿ ಟಿಕೆಟ್ ನೀಡುತ್ತಾರೆ. ಆದ್ರೆ ಅವರನ್ನು ಜನರು ಗೆಲ್ಲಿಸುತ್ತಿಲ್ಲ. ಅವರು ಗೆಲ್ಲಿಸಿದ್ರೆ ಒಳ್ಳೆದು ಎಂದು ಹೇಳಿದರು. ಇದೇ ವೇಳೆ, ಖರ್ಗೆ ಎಐಸಿಸಿ ಅಧ್ಯಕ್ಷರಾಗಿರೋದು ನಮಗೆ ಆನೆಬಲ ಬಂದಂತಾಗಿದೆ ಎಂದರು.
ಇದನ್ನೂ ಓದಿ: ಶಾಸಕ ಜಮೀರ್ ಅವರ ಸ್ವಾತಂತ್ರ್ಯ ಅಮೃತ ಮಹೋತ್ಸವ ನಡಿಗೆ ಮುಕ್ತಾಯ