ಧಾರವಾಡ: ನವಲೂರು ರೈಲ್ವೆ ಗೇಟ್ ಬಳಿ ನಾಯಿಗಳು ದಾಳಿ ನಡೆಸಿದ ಪರಿಣಾಮ 11 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಪ್ರಥಮ ನೀರಲಕಟ್ಟಿ (11) ಸಾವಿಗೀಡಾದ ಬಾಲಕ. ದುಮ್ಮವಾಡ ಗ್ರಾಮದಿಂದ ರಜೆ ಸಮಯ ಕಳೆಯಲೆಂದು ನವಲೂರಿಗೆ ಬಾಲಕ ಬಂದಿದ್ದ.
ಅಜ್ಜನಿಗೆ ಊಟ ಕೊಡಲು ತೋಟಕ್ಕೆ ಹೋಗುತ್ತಿದ್ದಾಗ ನಾಯಿಗಳು ಮೈಮೇಲೆರಗಿವೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾನೆ. ಈ ಹಿಂದೆಯೂ ಇದೇ ಜಾಗದಲ್ಲಿ ಓರ್ವ ಯುವಕ ನಾಯಿಗಳ ದಾಳಿಗೆ ಪ್ರಾಣ ಕಳೆದುಕೊಂಡಿದ್ದ.
ಇದನ್ನೂ ಓದಿ: 3.5 ವರ್ಷದ ಪೋರನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ