ETV Bharat / state

ವಾಣಿಜ್ಯ ನಗರಿಯಲ್ಲಿ ಸಿದ್ಧವಾಗುತ್ತಿದ್ದಾನೆ ಕೊರೊನಾ ನಿವಾರಕ ಗಣೇಶ - hubli news

ಕೊರೊನಾ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕೊರೊನಾ ನಿವಾರಕ ಗಣೇಶನ ಪ್ರತಿಮೆ ತಯಾರಾಗುತ್ತಿದ್ದು ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.

corona killer ganesha
ಕೊರೊನಾ ನಿವಾರಕ ಗಣೇಶ
author img

By

Published : Jun 24, 2020, 5:53 PM IST

ಹುಬ್ಬಳ್ಳಿ: ಕೊರೊನಾ ಇಡೀ ವಿಶ್ವವನ್ನೇ ತಲ್ಲಣಗೊಳಿಸುತ್ತಿದೆ. ಕೊರೊನಾ ನಾಗಾಲೋಟವನ್ನು ಕಟ್ಟಿಹಾಕಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಆದರೆ ಕೊರೊನಾ ಸಂಹಾರಕ್ಕೆ ವಿಘ್ನ‌ವಿನಾಶಕ‌ ಸಜ್ಜಾಗುತ್ತಿದ್ದಾನೆ. ನಗರದ ಸಚಿನ ಕುಂಬಾರ ಎಂಬ ಯುವಕ ಕೊರೊನಾ ಸಂಹಾರ ಮಾಡುವ ಗಣೇಶನನ್ನು ತಯಾರಿಸುತ್ತಿದ್ದಾರೆ. ಕೊರೊನಾ ವೈರಸ್ ಅನ್ನು ವಿಘ್ನ ನಿವಾರಕ ವಿನಾಯಕ ಹೋಗಲಾಡಿಸುತ್ತಾನೆ ಎಂಬ ಕಲ್ಪನೆಯಲ್ಲಿ ವಿಗ್ರಹವನ್ನು ಸಚಿನ ಕುಂಬಾರ ತಯಾರಿಸುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಕೊರೊನಾ ನಿವಾರಕ ಗಣೇಶ

ಕಣ್ಣಿಗೆ ಕಾಣದ ವೈರಸ್ ಅನ್ನು ಹೇಗೆ ಹೊಡೆದೋಡಿಸಬೇಕೆಂದು ಯಾರಿಗೂ ತಿಳಿಯುತ್ತಿಲ್ಲ. ಪ್ರತಿ ದಿನವೂ ಕೊರೊನಾ ವೈರಸ್ ವೇಗವಾಗಿ ಜನರಿಂದ ಜನರಿಗೆ ಹರಡುತ್ತಿದೆ. ಅಷ್ಟೇ ಅಲ್ಲ, ಸರ್ಕಾರವು ಕೂಡ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಎಷ್ಟೇ ಜನಜಾಗೃತಿ ಮೂಡಿಸಿದರೂ ಸರಿಯಾದ ಫಲ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೊರೊನಾ ಸಂಹಾರಿ ಗಣೇಶ ಎಲ್ಲರ ಆಕರ್ಷಣೆಯ ಕೇಂದ್ರವಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.