ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಅಂಜುಮನ್ ಇಸ್ಲಾಂ ಸಂಘಟನೆ, ವಿವಿಧ ದಲಿತ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ನಗರದಲ್ಲಿಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ನಗರದ ನೆಹರೂ ಮೈದಾನದಲ್ಲಿ ಶಾಂತಿ ಸಭೆ ನಡೆಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಜನ ಪ್ರತಿಭಟನಾಕಾರರು ಜಮಾವಣೆಗೊಂಡಿದ್ದರು. ಪ್ರತಿಭಟನಾ ಮೆರವಣಿಗೆ ಹಾಗೂ ಶಾಂತಿ ಸಭೆಯ ಬಿಗಿ ಭದ್ರತೆಗೆ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿತ್ತು. ಆದರೆ, ಪ್ರತಿಭಟನೆ ಹಾಗೂ ಮೆರವಣಿಗೆಯಲ್ಲಿ ಯಾವುದೇ ಗದ್ದಲ ಇಲ್ಲದೇ ಶಾಂತ ರೀತಿಯಲ್ಲಿ ನಿರ್ವಹಿಸಿ ಕೊಟ್ಟಿದ್ದಕ್ಕೆ ಪೊಲೀಸರಿಗೆ ಪ್ರತಿಭಟನಾಕಾರರು ಹೂ ನೀಡಿ ನೀಡಿ ಗೌರವ ವಂದನೆ ಸಲ್ಲಿಸಿದ್ರು.
ಪೊಲೀಸರು ರಾತ್ರಿ ಹಗಲು ಎನ್ನದೇ ಯಾವುದೇ ತೊಂದರೆಗಳು ಆಗಬಾರದೆಂಬ ಹಿನ್ನೆಲೆಯಲ್ಲಿ ಭದ್ರತೆ ಒದಗಿಸಿದ್ದಾರೆ. ಪೊಲೀಸ್ ಕಾರ್ಯ ಮೆಚ್ಚುವಂತದ್ದಾಗಿದೆ. ಹೀಗಾಗಿ ವಾಣಿಜ್ಯ ನಗರಿಯಲ್ಲಿ ಶಾಂತಿ ನೆಲೆಸಲು ಪೊಲೀಸರ ಪಾತ್ರ ದೊಡ್ಡದು ಎಂದು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ ಪ್ರತಿಭಟನಾಕಾರು ಅವರಿಗೆ ಗುಲಾಬಿ ಹೂ ಕೊಟ್ಟು ಧನ್ಯವಾದಗಳನ್ನು ತಿಳಿಸಿದ್ದಾರೆ.