ETV Bharat / international

ಜನ್ಮದತ್ತ ಪೌರತ್ವಕ್ಕೆ ಟ್ರಂಪ್ ಡೆಡ್​ಲೈನ್: ಅಮೆರಿಕದಲ್ಲಿ ಸಿ-ಸೆಕ್ಷನ್​ ಮೊರೆ ಹೋಗುತ್ತಿರುವ ಭಾರತೀಯ ದಂಪತಿಗಳು - INDIAN COUPLES IN US

ಪ್ರಸೂತಿ ತಜ್ಞರೊಬ್ಬರಿಗೆ ಕಳೆದೆರಡು ದಿನದಲ್ಲಿ 20ಕ್ಕೂ ಹೆಚ್ಚು ದಂಪತಿಗಳು ಕರೆ ಮಾಡಿ ಪೂರ್ವ ಪ್ರಸೂತಿಗೆ ಬೇಡಿಕೆ ಇಟ್ಟಿದ್ದಾರೆ.

indian-couples-in-us-are-rushing-for-preterm-c-section-deliveries-to-meet-the-february-19-deadline
ಸಾಂದರ್ಭಿಕ ಚಿತ್ರ (ಐಎಎನ್​ಎಸ್​​)
author img

By ETV Bharat Karnataka Team

Published : Jan 24, 2025, 3:20 PM IST

ನ್ಯೂಯಾರ್ಕ್​, ಅಮೆರಿಕ: ಅಮೆರಿಕದಲ್ಲಿ ವಾಸವಾಗಿರುವ ಭಾರತ ಮೂಲದ ಗರ್ಭಿಣಿಯರೂ ಸಿ ಸೆಕ್ಷನ್​ ಮೊರೆ ಹೋಗುತ್ತಿದ್ದಾರೆ. ಇದಕ್ಕೆ ಕಾರಣ ಪೌರತ್ವ ಕಾಯ್ದೆಯ ಡೆಡ್​ಲೈನ್​. ಫೆಬ್ರವರಿ 19ರಂದು ಜನ್ಮಜಾತ ಪೌರತ್ವಕ್ಕೆ ಡೆಡ್​ಲೈನ್​ ಹಾಕಿ ಅಮೆರಿಕ ಹೊಸ ಅಧ್ಯಕ್ಷರಾಗಿರುವ ಡೋನಾಲ್ಡ್​ ಟ್ರಂಪ್​ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಸಹಿ ಹಾಕಿದರು.

ಅಮೆರಿಕ ಸರ್ಕಾರದ ಈ ನಡೆ ಇದೀಗ ಭಾರತೀಯ ಗರ್ಭಿಣಿಯರಲ್ಲಿ ಆತಂಕ ಹೆಚ್ಚಿಸಿದ್ದು, ಅದಕ್ಕೂ ಮೊದಲೇ ಮಕ್ಕಳ ಹೆರಿಗೆ ಮಾಡಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಈ ಮೂಲಕ ಪೌರತ್ವ ಪಡೆಯಲು ಮುಂದಾಗಿದ್ದಾರೆ.

ಪೂರ್ವ ಪ್ರಸವಕ್ಕೆ ಹೆಚ್ಚಿದ ಬೇಡಿಕೆ: ಈ ಕುರಿತು ಮಾತನಾಡಿರುವ ಅಮೆರಿಕದ ವೈದ್ಯರು, ಪೂರ್ವ ಪ್ರಸವಕ್ಕೆ ಮುಂದಾಗುತ್ತಿರುವ ದಂಪತಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದಿದ್ದಾರೆ. ಅಲ್ಲದೇ ಪ್ರಸೂತಿ ತಜ್ಞರೊಬ್ಬರಿಗೆ ಕಳೆದೆರಡು ದಿನದಲ್ಲಿ 20ಕ್ಕೂ ಹೆಚ್ಚು ದಂಪತಿಗಳು ಕರೆ ಮಾಡಿ ಈ ಕುರಿತು ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

ಜನವರಿ 2-ರಂದು ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಡೋನಾಲ್ಡ್​ ಟ್ರಂಬ್​​ ಅಮೆರಿಕ ಸಂವಿಧಾನಕ್ಕೆ 14ನೇ ತಿದ್ದುಪಡಿ ಅಡಿ ಜನ್ಮಜಾತ ಪೌರತ್ವದ ಆದೇಶಕ್ಕೆ ಸಹಿ ಹಾಕಿದರು. ಫೆ. 19ರ ಬಳಿಕ ಅಮೆರಿಕದಲ್ಲಿ ಜನಿಸಿದ ಶಿಶುಗಳು ಅಲ್ಲಿನ ಶಾಶ್ವತ ನಿವಾಸಿಗಳಾಗುವುದಿಲ್ಲ. ಪೋಷಕರಲ್ಲಿ ಒಬ್ಬರು ಗ್ರೀನ್​ ಕಾರ್ಡ್​ ಪಡೆದಿದ್ದಲಿ ಮಾತ್ರ ಆ ದಂಪತಿಗೆ ಜನಿಸಿದ ಮಗು 21 ವರ್ಷ ತುಂಬಿದ ಬಳಿಕ ಪೌರತ್ವ ಪಡೆಯುತ್ತದೆ. ಈ ತಿದ್ದುಪಡಿಯು ಇದೀಗ ಅಮೆರಿಕದಲ್ಲಿರುವ ಎಚ್​1ಬಿ ಅಥವಾ ಎಲ್​1 ವೀಸಾದಲ್ಲಿರುವ ಅನೇಕ ಭಾರತೀಯ ಕುಟುಂಬಕ್ಕೆ ಸಂದಿಗ್ಧತೆ ಮೂಡಿಸಿದೆ.

ಈ ಅಂತಿಮ ಗಡುವಿಗೆ ಮುನ್ನ ಅಮೆರಿಕ ನೆಲದಲ್ಲಿ ಮಕ್ಕಳನ್ನು ಹೇರುವ ಮೂಲಕ ಅಲ್ಲಿನ ಪೌರತ್ವ ಪಡೆಯಲು ಮುಂದಾಗಿದ್ದು, ಇದಕ್ಕಾಗಿ ಸಿ ಸೆಕ್ಷನ್​ಗೆ ಒಳಗಾಗಲು ಮುಂದಾಗುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಅಮೆರಿಕದ ಪ್ರಸೂತಿ ತಜ್ಞರು ಹೇಳುವಂತೆ ಸದ್ಯ ಈ ರೀತಿಯ ವೀಸಾ ಸಂಬಂಧಿತ ಭಾರತೀಯ ಗರ್ಭಿಣಿಯರು ಸಿ ಸೆಕ್ಷನ್​ಗೆ ಒಳಗಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವರದಿ ತಿಳಿಸಿದೆ.

ಡಾ ರಮಾ ಹೇಳುವುದಿಷ್ಟು: ನ್ಯೂಜೆರ್ಸಿಯ ಡಾ ಎಸ್​ಡಿ ರಮಾ ಪ್ರಕಾರ, 7 ತಿಂಗಳ ಗರ್ಭಿಣಿಯೊಬ್ಬರು ತಮ್ಮ ಗಂಡನೊಂದಿಗೆ ಬಂದು ಅವಧಿ ಪೂರ್ವ ಪ್ರಸವಕ್ಕೆ ಸಹಿ ಹಾಕಿದ್ದಾರೆ. ಆಕೆಯ ಹೆರಿಗೆ ಸಮಯ ಮಾರ್ಚ್​ಗೆ ನೀಡಲಾಗಿದ್ದರೂ, ಪೌರತ್ವಕ್ಕಾಗಿ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಟೆಕ್ಸಾಸ್​​​ನ ಸ್ತ್ರೀ ಮತ್ತು ಪ್ರಸೂತಿ ತಜ್ಞೆ ಡಾ ಎಸ್​ಜಿ ಮುಕ್ಕಳ ಹೇಳುವಂತೆ, ಕಳೆದ ಕೆಲವು ದಿನದಲ್ಲಿ 20ಕ್ಕೂ ಹೆಚ್ಚು ದಂಪತಿಗಳು ಈ ಕುರಿತು ಮಾತನಾಡಿದ್ದಾರೆ. ಈ ಪ್ರಸವ ಪೂರ್ವ ಹೆರಿಗೆ ಸಂದರ್ಭದಲ್ಲಿ ಎದುರಾಗುವ ಅಪಾಯದ ಕುರಿತು ಕೂಡ ಪೋಷಕರಿಗೆ ತಿಳಿಸಲಾಗಿದ್ದು, ಇದು ಶಿಶುವಿನ ಶ್ವಾಸಕೋಶ, ಸಮಸ್ಯೆ, ಕಡಿಮೆ ಜನನ ತೂಕ, ನರ ಸೇರಿದಂತೆ ಅನೇಕ ಸಮಸ್ಯಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಆದೇಶದಿಂದಾಗಿ ಅಮೆರಿಕದಲ್ಲಿರುವ ಅನೇಕ ಭಾರತೀಯರು ಅಸಹಾಯಕ ಸ್ಥಿತಿಯಲ್ಲಿದ್ದು, ಅವರ ನಮ್ಮ ಭವಿಷ್ಯ ಇದೀಗ ಅನಿಶ್ಚಿತವಾಗಿದೆ ಎಂದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಏನಿದು ಜನ್ಮಜಾತ ಪೌರತ್ವ ಕುರಿತು ಟ್ರಂಪ್​ ಆದೇಶ?: ಟ್ರಂಪ್​ ಆದೇಶದ ಪ್ರಕಾರ, ಶಿಶುವಿನ ತಾಯಿ ಕಾನೂನಾತ್ಮಕ ವಲಸಿಗ ಸ್ಥಿತಿ ಹೊಂದಿರಬಾರದು. ಅವರು ಕಾನೂನಾತ್ಮಕ ಪೌರತ್ವ ಹೊಂದಿರಬೇಕು. ತಂದೆ ಅಮೆರಿಕ ನಾಗರಿಕರಾಗಿದ್ದರೆ ಅಥವಾ ಕಾನೂನಾತ್ಮಕವಾಗಿ ಶಾಶ್ವತ ನಿವಾಸಿಯಾಗಿದ್ದಾಗ ಮಾತ್ರ ಮಗುವು ಅಲ್ಲಿನ ಪೌರತ್ವ ಪಡೆಯುತ್ತದೆ.

ಈ ಆದೇಶ ಸಹಿ ಹಾಕುತ್ತಿದ್ದಂತೆ ಇದು ಅಮೆರಿಕದೆಲ್ಲೆಡೆ ಕಾನೂನಾತ್ಮಕ ಸವಾಲಿಗೆ ಕೂಡ ಕಾರಣವಾಗಿದ್ದು, ಈ ಸಂಬಂಧ 22 ರಾಜ್ಗಗಳು ಕನಿಷ್ಠ 5 ದಾವೆ ಹೂಡಿವೆ. ಈ ಸಂಬಂಧ ಮೊದಲ ವಿಚಾರಣೆ ನಡೆಸಿದ ಫೆಡರಲ್​ ನ್ಯಾಯಮೂರ್ತಿಗಳು ಈ ಆದೇಶವೂ ಸ್ಪಷ್ಟವಾಗಿ ಅಸಂವಿಧಾನಿಕವಾಗಿದೆ ಎಂದು ಕರೆದಿದ್ದು, ಈ ಕಾರ್ಯಾಕಾರಿ ಆದೇಶಕ್ಕೆ ತಾತ್ಕಲಿಕ ತಡೆ ನೀಡಿದ್ದಾರೆ.

ಇದನ್ನೂ ಓದಿ: ಅಮೆರಿಕ ಹೊರಬಿದ್ದ ಬೆನ್ನಲ್ಲೇ, ಡಬ್ಲ್ಯೂಎಚ್​​ಒಗೆ ಬೆಂಬಲ ಘೋಷಿಸಿದ ಚೀನಾ

ಇದನ್ನೂ ಓದಿ: ಗಡೀಪಾರು ಆತಂಕದಲ್ಲಿ 18,000 ಭಾರತೀಯರು; ಕಾನೂನುಬದ್ಧ ವಾಪಸಾತಿ ಭರವಸೆ ನೀಡಿದ ಜೈಶಂಕರ್​​ -

ETV Bharat Logo

Copyright © 2025 Ushodaya Enterprises Pvt. Ltd., All Rights Reserved.