ICC Test ODI Team of the Year 2024: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು 2024ರ ವರ್ಷದ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಭಾರತದ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ಯುವ ಆಟಗಾರ ಯಶಸ್ವಿ ಜೈಸ್ವಾಲ್, ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಂಡದಲ್ಲಿದ್ದಾರೆ. ಈ ತಂಡದ ನಾಯಕರಾಗಿ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರನ್ನು ಆಯ್ಕೆ ಮಾಡಲಾಗಿದೆ.
ಏತನ್ಮಧ್ಯೆ, ಇಂಗ್ಲೆಂಡ್ನ ನಾಲ್ವರು ಆಟಗಾರಾದ ಬೆನ್ ಡಕೆಟ್, ಹ್ಯಾರಿ ಬ್ರೂಕ್, ಜೋ ರೂಟ್, ಜಿಮ್ಮಿ ಸ್ಮಿತ್ ಈ ತಂಡದಲ್ಲಿದ್ದಾರೆ. ಉಳಿದಂತೆ ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್), ಕಮಿಂದು ಮೆಂಡಿಸ್ (ಶ್ರೀಲಂಕಾ), ಮ್ಯಾಟ್ ಹೆನ್ರಿ (ನ್ಯೂಜಿಲೆಂಡ್) 11 ಆಟಗಾರರಲ್ಲಿ ಸ್ಥಾನಗಳಿಸಿದ್ದಾರೆ. ICC 2024ರ ODI ವರ್ಷದ ತಂಡವನ್ನು ಟೆಸ್ಟ್ ತಂಡಕ್ಕಿಂತ ಸ್ವಲ್ಪ ಮುಂಚಿತವಾಗಿಯೇ ಘೋಷಿಸಲಾಯಿತು. ಆದರೆ, ಇದರಲ್ಲಿ ಟೀಂ ಇಂಡಿಯಾದ ಒಬ್ಬ ಆಟಗಾರನೂ ಸ್ಥಾನ ಪಡೆದಿಲ್ಲ ಎಂಬುದು ಗಮನಾರ್ಹ. ಕಳೆದ ವರ್ಷ ಭಾರತ ಅತಿ ಕಡಿಮೆ ಏಕದಿನ ಪಂದ್ಯಗಳನ್ನು ಆಡಿರುವುದು ಇದಕ್ಕೆ ಕಾರಣವಾಗಿದೆ.
Congratulations to the incredibly talented players named in the ICC Men's Test Team of the Year 2024 👏 pic.twitter.com/0ROskFZUIr
— ICC (@ICC) January 24, 2025
ಯುವ ಆಟಗಾರ ಜೈಸ್ವಾಲ್ 2024ರಲ್ಲಿ ಭರ್ಜರಿ ಪ್ರದರ್ಶನ ತೋರಿದ್ದಾರೆ. ಕಳೆದ ವರ್ಷ ಟೆಸ್ಟ್ನಲ್ಲಿ ಉತ್ತಮ ಬ್ಯಾಟ್ ಮಾಡಿದ್ದ ಅವರು ಅವರು 1474 ರನ್ ಗಳಿಸಿದ್ದರು. ಅಲ್ಲದೇ 36 ಸಿಕ್ಸರ್‌ಗಳನ್ನು ಬಾರಿಸಿದ್ದರು. ಈ ಕ್ರಮದಲ್ಲಿ, ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಪರ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಕೂಡ ಎನಿಸಿಕೊಂಡರು. ಇದರೊಂದಿಗೆ ಐಸಿಸಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಈ ತಂಡದಲ್ಲೂ ಯಶಸ್ವಿ ಓಪನರ್ ಆಗಿ ಸ್ಥಾನ ಪಡೆದಿದ್ದಾರೆ. ಆಲ್ ರೌಂಡರ್ ಆಗಿ ಮಿಂಚಿದ್ದ ಜಡ್ಡು ಹಾಗೂ ಬುಮ್ರಾ ತಂಡದಲ್ಲಿದ್ದಾರೆ. ಆದರೆ ಟೀಮ್ ಇಂಡಿಯಾ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇದರಲ್ಲಿ ಸ್ಥಾನ ಪಡೆದಿಲ್ಲ. ಕಳೆದ ವರ್ಷ ಈ ಇಬ್ಬರು ಟೆಸ್ಟ್ನಲ್ಲಿ ದಯನೀಯವಾಗಿ ವಿಫಲರಾಗಿದ್ದರು. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. 10 ಪಂದ್ಯಗಳನ್ನಾಡಿರುವ ವಿರಾಟ್ 417 ರನ್ ಗಳಿಸಿದ್ದರೆ ರೋಹಿತ್ 619 ರನ್ ಗಳಿಸಿದ್ದಾರೆ.
ಐಸಿಸಿ ವರ್ಷದ ಬೆಸ್ಟ್ ಟೆಸ್ಟ್ ತಂಡ: ಯಶಸ್ವಿ ಜೈಸ್ವಾಲ್, ಬೆನ್ ಡಕೆಟ್, ಕೇನ್ ವಿಲಿಯಮ್ಸನ್, ಜೋ ರೂಟ್, ಹ್ಯಾರಿ ಬ್ರೂಕ್, ಕಮಿಂದು ಮೆಂಡಿಸ್, ಜಿಮ್ಮಿ ಸ್ಮಿತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಪ್ಯಾಟ್ ಕಮಿನ್ಸ್ (ನಾಯಕ), ಮ್ಯಾಟ್ ಹೆನ್ರಿ, ಜಸ್ಪ್ರೀತ್ ಬುಮ್ರಾ.