ETV Bharat / state

ಬಾರ್ ಮುಚ್ಚುವಂತೆ ಆಗ್ರಹಿಸಿ ಧಾರವಾಡದಲ್ಲಿ ಪ್ರತಿಭಟನೆ

ತಮ್ಮ ಬಡಾವಣೆಯಲ್ಲಿ ತಲೆ ಎತ್ತಿರುವ ಬಾರ್​ ಅನ್ನು ಕೂಡಲೇ ಮುಚ್ಚಬೇಕು ಎಂದು ಆಗ್ರಹಿಸಿ ಧಾರವಾಡದಲ್ಲಿ ಎಂ.ಆರ್. ನಗರ ಬಡಾವಣೆಯ ಜನರು ಪ್ರತಿಭಟನೆ ನಡೆಸಿದರು.

ಬಾರ್ ವಿರೋಧಿಸಿ ಪ್ರತಿಭಟನೆ
author img

By

Published : May 16, 2019, 2:51 PM IST

ಧಾರವಾಡ: ತಮ್ಮ ಬಡಾವಣೆಯಲ್ಲಿ ತಲೆ ಎತ್ತಿರುವ ಬಾರ್​ನ್ನು ಕೂಡಲೇ ಮುಚ್ಚುವಂತೆ ಆಗ್ರಹಿಸಿ ಎಂ.ಆರ್. ನಗರ ಬಡಾವಣೆಯ ಜನರು ಬೀದಿಗಿಳಿದಿದ್ದಾರೆ.

ಕೆಲ ದಿನಗಳ ಹಿಂದೆ ಈ ಬಾರ್ ತೆರೆದಾಗ ಹೋರಾಟ ಮಾಡಿ ಸ್ಥಗಿತಗೊಳಿಸಲಾಗಿತ್ತು. ಆದರೆ ನಿನ್ನೆಯಿಂದ ಮತ್ತೆ ಬಾರ್ ಆರಂಭವಾಗಿದೆ. ಇದರಿಂದ ಆಕ್ರೋಶಗೊಂಡಿರುವ ಸ್ಥಳೀಯರು ಬಾರ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಈ‌ ಮುಂಚೆ ಜನರ ಒತ್ತಾಯಕ್ಕೆ ಮಣಿದು ಅಬಕಾರಿ ಇಲಾಖೆ ಅಧಿಕಾರಿಗಳು ಬಾರ್ ಆರಂಭಕ್ಕೆ ತಡೆಯೊಡ್ಡಿದ್ದರು. ಆದರೆ ಇದೀಗ ಬಾರ್ ಮಾಲೀಕ ಧಾರವಾಡ ಹೈಕೋರ್ಟ್‌ನಿಂದ ಅಬಕಾರಿ ಇಲಾಖೆ ಅಧಿಕಾರಿಗಳ ಆದೇಶಕ್ಕೆ ತಡೆಯಾಜ್ಞೆ ತಂದಿದ್ದು, ನಿನ್ನೆಯಿಂದ ಬಾರ್​​ನ್ನು ಪುನಾರಂಭಿಸಿದ್ದಾರೆ.

ಬಾರ್ ವಿರೋಧಿಸಿ ಪ್ರತಿಭಟನೆ

ಇದೇ ವೇಳೆ ಹೈಕೋರ್ಟ್ ಕಳೆದ ಬಾರಿ ಬಾರ್ ಮುಚ್ಚಿಸಿದ್ದ ಅನೇಕ ನಾಯಕರಿಗೆ ನೋಟೀಸ್ ಕೂಡ ನೀಡಿದೆ. ಈ ಬಗ್ಗೆ ಏನೇ ತಕರಾರುಗಳಿದ್ದರೂ ಕೋರ್ಟ್ ಮುಂದೆ ಪ್ರಸ್ತಾಪ ಮಾಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ ಎನ್ನಲಾಗ್ತಿದೆ.

Intro:ಧಾರವಾಡ: ತಮ್ಮ ಬಡಾವಣೆಯಲ್ಲಿ ತಲೆ ಎತ್ತಿರುವ ಬಾರ್ ನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಧಾರವಾಡದಲ್ಲಿ ಎಂ.ಆರ್. ನಗರ ಬಡಾವಣೆಯ ಜನರು ಪ್ರತಿಭಟನೆ ನಡೆಸಿದರು

ಕೆಲ ದಿನಗಳ ಹಿಂದೆ ಈ ಬಾರ್ ತೆರೆದಾಗ ಹೋರಾಟ ಮಾಡಿ ಸ್ಥಗಿತ ಗೊಳಿಸಲಾಗಿತ್ತು. ಆದರೆ ನಿನ್ನೆಯಿಂದ ಮತ್ತೆ ಬಾರ್ ಆರಂಭಗೊಂಡಿದೆ. ಇದರಿಂದ ಆಕ್ರೋಶಗೊಂಡಿರುವ ಸ್ಥಳೀಯರು ಬಾರ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ. Body:ಈ‌ ಮುಂಚೆ ಜನರ ಒತ್ತಾಯಕ್ಕೆ ಮಣಿದು ಅಬಕಾರಿ ಇಲಾಖೆ ಅಧಿಕಾರಿಗಳು ಬಾರ್ ಆರಂಭಕ್ಕೆ ತಡೆಯೊಡ್ಡಿದ್ದರು. ಆದರೆ ಇದೀಗ ಬಾರ್ ಮಾಲೀಕ ಧಾರವಾಡ ಹೈಕೋರ್ಟ್‌ನಿಂದ ಅಬಕಾರಿ ಇಲಾಖೆ ಅಧಿಕಾರಿಗಳ ಆದೇಶಕ್ಕೆ ತಡೆಯಾಜ್ಞೆ ತಂದಿದ್ದು, ನಿನ್ನೆಯಿಂದ ಬಾರ್ ನ್ನು ಆರಂಭಿಸಿದ್ದಾರೆ.

ಇದೇ ವೇಳೆ ಹೈಕೋರ್ಟ್ ಕಳೆದ ಬಾರಿ ಬಾರ್ ಮುಚ್ಚಿಸಿದ್ದ ಅನೇಕ ನಾಯಕರಿಗೆ ನೋಟೀಸ್ ಕೂಡ ನೀಡಿದ್ದು, ಈ ಬಗ್ಗೆ ಏನೇ ತಕರಾರುಗಳಿದ್ದರೂ ಕೋರ್ಟ್ ಮುಂದೆ ಪ್ರಸ್ತಾಪ ಮಾಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ ಎನ್ನಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.