ಹುಬ್ಬಳ್ಳಿ: ಬೆಳಗಾವಿಯ 4.9 ಕೆಜಿ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಪ್ರಕರಣದ ಬೆನ್ನಲ್ಲೇ ಕಿರಣ್ ವೀರನಗೌಡರ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರ ವೇಷದಲ್ಲಿ ಈತ ಸುಲಿಗೆಗೆ ಇಳಿದಿದ್ದ ಎನ್ನುವ ಮಾಹಿತಿಯನ್ನು ಅನ್ಯಾಯಕೊಳ್ಳಗಾದ ಮಹಿಳೆ ತಡವಾಗಿ ಬಹಿರಂಗಪಡಿಸುವ ಮೂಲಕ ಈತನ ಇನ್ನೊಂದು ಮುಖವನ್ನು ತೆರೆದಿಟ್ಟಿದ್ದಾಳೆ.
ಕಳೆದ ವರ್ಷ ಹುಬ್ಬಳ್ಳಿಯ ಪ್ರತಿಷ್ಠಿತ ಮಾಲ್ವೊಂದರ ಮೇಲೆ ಅಸಲಿ ಪೊಲೀಸರ ರೀತಿ ನಕಲಿ ಪೊಲೀಸರು ದಾಳಿ ನಡೆಸಿದ್ದರು. ಇದರ ರೂವಾರಿನೇ ಕಿರಣ್ ವೀರನಗೌಡರ. ತಾನು ಡಿಸಿಪಿಯೆಂದು ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿದ್ದ. ಈತನಿಗೆ ಹುಬ್ಬಳ್ಳಿಯ ಓರ್ವ ಎಎಸ್ಐ, ಪಿಸಿ ಸಾಥ್ ನೀಡಿದ್ದರು. ನಕಲಿ ಪೊಲೀಸರ ಜೊತೆ ಸೇರಿ ಅಸಲಿ ಪೊಲೀಸರು ಎಸಿಪಿ, ಇನ್ಸ್ಪೆಕ್ಟರ್ ಅಂತ ಹೇಳಿ ಪಾರ್ಲರ್ನಲ್ಲಿದ್ದ ಇಬ್ಬರು ಹೆಣ್ಣು ಮಕ್ಕಳನ್ನುಅಪಾರ್ಟ್ಮೆಂಟ್ನಲ್ಲಿ ಕೂಡಿ ಹಾಕಿ ಲೈಂಗಿಕವಾಗಿ ಬಳಸಿಕೊಂಡು ಬಳಿಕ ಮಾಲೀಕ ಹಣ ನೀಡಿದ ಮೇಲೆ ಬಿಟ್ಟು ಕಳುಹಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾಳೆ.ಡಿಸಿಪಿ ಅಂತಾ ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿದ್ದನಂತೆ ಕಿರಣ್ ವೀರನಗೌಡರ! - Hubli police
ಬೆಳಗಾವಿಯ 4.9 ಕೆಜಿ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಆರೋಪಿ ಕಿರಣ್ ವೀರನಗೌಡರಗೆ ಉತ್ತರ ಕರ್ನಾಟಕ ಭಾಗದ ಬಹುತೇಕ ಐಪಿಎಸ್ ಅಧಿಕಾರಿಗಳಿಗೆ ಪರಿಚಯ ಇದೆ ಎನ್ನಲಾಗ್ತಿದೆ. ಇದನ್ನೇ ಲಾಭವಾಗಿಸಿಕೊಂಡಿರುವ ಈತ ಲಕ್ಷ ಲಕ್ಷ ಡೀಲ್ ಮಾಡಿ ಹಲವು ಕುಟುಂಬಗಳಿಗೆ ನಿರಂತರ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಹುಬ್ಬಳ್ಳಿಯಲ್ಲಿ ಕೇಳಿ ಬಂದಿದೆ.
ಡಿಸಿಪಿ ಅಂತಾ ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿದ್ದನಂತೆ ಕಿರಣ್ ವೀರನಗೌಡರ!
ಹುಬ್ಬಳ್ಳಿ: ಬೆಳಗಾವಿಯ 4.9 ಕೆಜಿ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಪ್ರಕರಣದ ಬೆನ್ನಲ್ಲೇ ಕಿರಣ್ ವೀರನಗೌಡರ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರ ವೇಷದಲ್ಲಿ ಈತ ಸುಲಿಗೆಗೆ ಇಳಿದಿದ್ದ ಎನ್ನುವ ಮಾಹಿತಿಯನ್ನು ಅನ್ಯಾಯಕೊಳ್ಳಗಾದ ಮಹಿಳೆ ತಡವಾಗಿ ಬಹಿರಂಗಪಡಿಸುವ ಮೂಲಕ ಈತನ ಇನ್ನೊಂದು ಮುಖವನ್ನು ತೆರೆದಿಟ್ಟಿದ್ದಾಳೆ.
ಕಳೆದ ವರ್ಷ ಹುಬ್ಬಳ್ಳಿಯ ಪ್ರತಿಷ್ಠಿತ ಮಾಲ್ವೊಂದರ ಮೇಲೆ ಅಸಲಿ ಪೊಲೀಸರ ರೀತಿ ನಕಲಿ ಪೊಲೀಸರು ದಾಳಿ ನಡೆಸಿದ್ದರು. ಇದರ ರೂವಾರಿನೇ ಕಿರಣ್ ವೀರನಗೌಡರ. ತಾನು ಡಿಸಿಪಿಯೆಂದು ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿದ್ದ. ಈತನಿಗೆ ಹುಬ್ಬಳ್ಳಿಯ ಓರ್ವ ಎಎಸ್ಐ, ಪಿಸಿ ಸಾಥ್ ನೀಡಿದ್ದರು. ನಕಲಿ ಪೊಲೀಸರ ಜೊತೆ ಸೇರಿ ಅಸಲಿ ಪೊಲೀಸರು ಎಸಿಪಿ, ಇನ್ಸ್ಪೆಕ್ಟರ್ ಅಂತ ಹೇಳಿ ಪಾರ್ಲರ್ನಲ್ಲಿದ್ದ ಇಬ್ಬರು ಹೆಣ್ಣು ಮಕ್ಕಳನ್ನುಅಪಾರ್ಟ್ಮೆಂಟ್ನಲ್ಲಿ ಕೂಡಿ ಹಾಕಿ ಲೈಂಗಿಕವಾಗಿ ಬಳಸಿಕೊಂಡು ಬಳಿಕ ಮಾಲೀಕ ಹಣ ನೀಡಿದ ಮೇಲೆ ಬಿಟ್ಟು ಕಳುಹಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾಳೆ.
Last Updated : Jun 23, 2021, 10:59 PM IST