ದಾವಣಗೆರೆ: ಎಂದಿನಂತೆ ಮರವೇರಿ ಕೀಟಲೆ ಮಾಡುವ ಕೊತಿಗಳು ಇಂದು ಕೂಡ ಮರವೊಂದರಲ್ಲಿ ಕಚ್ಚಾಟ ಮಾಡಿಕೊಂಡಿವೆ. ಪರಿಣಾಮ ಒಂದು ಕೋತಿ ಮೇಲಿಂದ ಬಿದ್ದು ಸಾವನ್ನಪ್ಪಿದೆ.
ತಾಲೂಕಿನ ಆಲೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಮರವೊಂದರಲ್ಲಿ ಕೀಟಲೆ ಮಾಡಿಕೊಂಡಿದ್ದ ಕೋತಿಗಳ ನಡುವೆ ಕಚ್ಚಾಟ ಶುರುವಾಗಿದೆ. ಈ ವೇಳೆ ಮಂಗವೊಂದು ಮರದಿಂದ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದೆ.
ಇನ್ನು ಈ ದೃಶ್ಯವನ್ನು ಕಂಡ ಗ್ರಾಮಸ್ಥರ ಮನಕಲುಕಿದೆ. ಕೂಡಲೇ ಸಾವನ್ನಪ್ಪಿದ ಕೋತಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಿ, ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.