ETV Bharat / state

ಬಸ್-ಟಿಪ್ಪರ್‌ ನಡುವೆ ಭೀಕರ ಅಪಘಾತ: ತಪ್ಪಿದ ಭಾರೀ ಅನಾಹುತ - ಕೆಎಸ್ಆರ್​ಟಿಸಿ ಬಸ್ ಹಾಗೂ ಟಿಪ್ಪರ್‌ ನಡುವೆ ಅಪಘಾತ

ಜಗಳೂರು ಕಡೆಯಿಂದ‌ ದಾವಣಗೆರೆಯತ್ತ ಪ್ರಯಾಣಿಸುತ್ತಿದ್ದ ಬಸ್​ಗೆ ಟಿಪ್ಪರ್ ಡಿಕ್ಕಿ ಹೊಡೆದಿದೆ‌. ಪರಿಣಾಮ ಟಿಪ್ಪರ್ ಹಾಗೂ ಬಸ್​ನ ಮುಂದಿನ ಭಾಗ ಸಂಪೂರ್ಣ ನುಜ್ಜುಗುಜ್ಜಾಗಿವೆ.

davangere
ಅಪಘಾತ
author img

By

Published : Dec 9, 2020, 6:51 PM IST

Updated : Dec 9, 2020, 7:03 PM IST

ದಾವಣಗೆರೆ: ಕೆಎಸ್ಆರ್​ಟಿಸಿ ಬಸ್ ಹಾಗೂ ಟಿಪ್ಪರ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ.

ಬಸ್-ಟಿಪ್ಪರ್‌ ನಡುವೆ ಭೀಕರ ಅಪಘಾತ

ದಾವಣಗೆರೆ ತಾಲೂಕಿನ ಚಿತ್ತಾನಹಳ್ಳಿ ಗ್ರಾಮದ ಬಳಿ ರಸ್ತೆ ಅಪಘಾತ ಸಂಭವಿಸಿದ್ದು, ಕೆಎಸ್ಆರ್​ಟಿಸಿ ಬಸ್ ಚಾಲಕ ಹಾಗೂ ಟಿಪ್ಪರ್ ಚಾಲಕರಿಬ್ಬರಿಗೂ ಗಂಭೀರವಾದ ಗಾಯಗಳಾಗಿವೆ. ಗಾಯಾಳುಗಳನ್ನು ದಾವಣಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

40ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದ ಬಸ್ ಇದಾಗಿದ್ದು, ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿದೆ. ಇನ್ನು ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಾಳಾಗಿದ್ದು, ಹತ್ತಿರದ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಪಾಗಲ್​​ ಪ್ರೇಮಿಯ ಹುಚ್ಚಾಟಕ್ಕೆ ಅಕ್ಕ-ತಂಗಿ ಬಲಿ.. ಕಿರುಕುಳವೇ ಕಾರಣವೆಂದು ತಂದೆಯ ಆರೋಪ

ಇನ್ನು ಜಗಳೂರು ಕಡೆಯಿಂದ‌ ದಾವಣಗೆರೆಯತ್ತ ಪ್ರಯಾಣಿಸುತ್ತಿದ್ದ ಬಸ್​ಗೆ ದಾವಣಗೆರೆ ಕಡೆಯಿಂದ‌ ಜಗಳೂರಿಗೆ ತೆರಳುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ‌. ಡಿಕ್ಕಿ ಹೊಡೆದ ಪರಿಣಾಮ ಟಿಪ್ಪರ್ ಹಾಗೂ ಬಸ್​ನ ಮುಂದಿನ ಭಾಗ ಸಂಪೂರ್ಣ ನುಜ್ಜುಗುಜ್ಜಾಗಿವೆ.

Last Updated : Dec 9, 2020, 7:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.