ETV Bharat / state

ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪನವರಿಗೆ 93ನೇ ಜನ್ಮದಿನದ ಸಂಭ್ರಮ; ಅದ್ಧೂರಿ ಆಚರಣೆ

ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪನವರ 93ನೇ ಹುಟ್ಟುಹಬ್ಬವನ್ನು ದಾವಣಗೆರೆಯ ಎಸ್ಎಸ್​ ಹಾಲ್​ನಲ್ಲಿ ಶುಕ್ರವಾರ ಅದ್ಧೂರಿಯಾಗಿ ಆಚರಿಸಲಾಯಿತು.

Shamanur Shivashankarappa
ಶಾಮನೂರು ಶಿವಶಂಕರಪ್ಪ
author img

By

Published : Jun 16, 2023, 10:38 PM IST

ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪನವರಿಗೆ 93ನೇ ಜನ್ಮ ದಿನದ ಸಂಭ್ರಮ..

ದಾವಣಗೆರೆ: ಹಿರಿಯ ಶಾಸಕ, ಲಿಂಗಾಯತ ಸಮುದಾಯದ ಪ್ರಬಲ ನಾಯಕ ಶಾಮನೂರು ಶಿವಶಂಕರಪ್ಪನವರಿಗಿಂದು 93ನೇ ಹುಟ್ಟುಹಬ್ಬದ ಸಂಭ್ರಮ. ರಾಜ್ಯದ ಏಕೈಕ ಅತ್ಯಂತ ಹಿರಿಯ ಶಾಸಕ ಎಂದು ಹೆಸರುವಾಸಿಯಾಗಿರುವ ಶಿವಶಂಕರಪ್ಪನವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಜನ್ಮದಿನಕ್ಕೆ ಶುಭಕೋರಲು ದಾವಣಗೆರೆಗೆ ಅಭಿಮಾನಿಗಳ ದಂಡೇ ಹರಿದುಬಂದಿತ್ತು. ಹಿರಿ ವಯಸ್ಸಿನಲ್ಲೂ ಈ ಬಾರಿ ವಿಧಾನಸಭೆ ಚುನಾವಣೆ ಎದುರಿಸಿ ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಗೆಲುವಿನ ನಗೆ ಬೀರಿದ್ದರು. ರಾಜ್ಯ ರಾಜಕಾರಣದಲ್ಲಿ ಅವರ ಗೆಲುವು ಅಚ್ಚರಿ ಮೂಡಿಸಿತ್ತು. ವಿಧಾನಸಭೆಗೆ ಆಯ್ಕೆಯಾದ ರಾಜ್ಯದ ಏಕೈಕ ಹಿರಿಯ ಶಾಸಕ ಎಂದು ಹೆಗ್ಗಳಿಕೆಗೆ ಶಾಮನೂರು ಪಾತ್ರರಾಗಿದ್ದಾರೆ.

ಇಂದಿಗೂ ಕೂಡ ಉತ್ಸಾಹದಲ್ಲೇ ರಾಜಕೀಯ ಜೀವನ ಕಳೆಯುತ್ತಿದ್ದಾರೆ. ಇಷ್ಟು ಗಟ್ಟಿಮುಟ್ಟಾಗಿರುವ ಗುಟ್ಟೇನು ಎಂದು ಕೇಳಿದ್ರೆ, ಅದಕ್ಕೆ ಉತ್ತರಿಸಲು ಖಡಾಖಂಡಿತವಾಗಿ ಅವರು ನಿರಾಕರಿಸಿದರು. 93ಕ್ಕೆ ಪಾದಾರ್ಪಣೆ ಮಾಡಿರುವ ಶಾಮನೂರು ತಮ್ಮ ಜನ್ಮದಿನವನ್ನು ಎಸ್ಎಸ್​ಹಾಲ್​ನಲ್ಲಿ ಸಾವಿರಾರು ಅಭಿಮಾನಿಗಳು ಮಧ್ಯೆ ಆಚರಿಸಲಾಯಿತು. ಅರಣ್ಯ ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲಿ ದೊಡ್ಡ ಕೇಕ್ ಕಟ್ ಮಾಡಿದರು. ಹುಟ್ಟುಹಬ್ಬಕ್ಕೆ ಶುಭ ಕೋರಲು ಆಗಮಿಸಿದ್ದ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರಿಗೆ ವಿವಿಧ ಖಾದ್ಯ ಒಳಗೊಂಡಿರುವ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಸಚಿವ ಈಶ್ವರ್ ಬಿ. ಖಂಡ್ರೆ ಮಾತನಾಡಿ, ''ನನಗೆ ವಯಸ್ಸಾಗಿಲ್ಲ, ಯುವಕನಿದ್ದೇನೆ, ಸೇವೆ ಮಾಡುತ್ತೇನೆ ಎಂದು ಚುನಾವಣೆ ಸ್ಪರ್ಧೆ ಮಾಡಿ ಗೆದ್ದು ಬೀಗಿದ್ದಾರೆ. ಜನರ ಸೇವೆ ಮಾಡಲು ಚುನಾವಣೆಯಲ್ಲಿ ಸಿಕ್ಸ್ ಹೊಡೆದಿದ್ದಾರೆ. ಅವರಿಗೆ ಜನರ ಮೇಲೆ ಪ್ರೀತಿ, ವಿಶ್ವಾಸ ಹೆಚ್ಚು. ಆದ್ದರಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರು ಮಾಡಿರುವ ಕಾರ್ಯಗಳು ಅಜಾರಮರ. ಜಾತಿ ಧರ್ಮ ನೋಡದೇ ಕಷ್ಟ ಸುಖದಲ್ಲಿ ಭಾಗಿಯಾಗಿರುವ ಏಕೈಕ ನಾಯಕರು. ರಾಜಕೀಯ ಜೀವನದಲ್ಲಿ ಅವರು ಮುಖ್ಯಮಂತ್ರಿ ಆಗ್ಬೇಕಾಗಿತ್ತು'' ಎಂದು ಹೇಳಿದರು.

93 ಸಸಿಗಳನ್ನು ನೆಟ್ಟ ಅಭಿಮಾನಿಗಳು: ಶಾಮನೂರು ಶಿವಶಂಕರಪ್ಪನವರ 93ನೇ ಹುಟ್ಟುಹಬ್ಬದ ನಿಮಿತ್ತ, ಅಭಿಮಾನಿಗಳು 93 ಸಸಿಗಳನ್ನು ನೆಟ್ಟರು. ದಾವಣಗೆರೆ ನಗರದಲ್ಲಿರುವ ಎಂಬಿಎ ಕಾಲೇಜಿನ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಸಚಿವ ಈಶ್ವರ್ ಖಂಡ್ರೆ ಸಸಿ ನೆಡುವ ಮೂಲಕ ಚಾಲನೆ ನೀಡಿದರು.

ಇದನ್ನೂ ಓದಿ: MLA's conference: ಮುಂಬೈನಲ್ಲಿ ಪ್ರಪ್ರಥಮ ರಾಷ್ಟೀಯ ಶಾಸಕರ ಸಮ್ಮೇಳನ: ಸಭಾಪತಿ ಬಸವರಾಜ ಹೊರಟ್ಟಿ ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.