ETV Bharat / state

ಕೋವಿಡ್ ಕಿಟ್ ಖರೀದಿಯಲ್ಲಿ ರಾಜ್ಯ ಸರ್ಕಾರದಿಂದ ಭ್ರಷ್ಟಾಚಾರ: ಖಾದರ್ ಆರೋಪ

ಸರ್ಕಾರ ಸಾಕಷ್ಟು ಮಾಸ್ಕ್ ಖರೀದಿಯ ಲೆಕ್ಕ ನೀಡಿದರೂ ನಗರದ ವೆನ್ ಲಾಕ್ ಅಥವಾ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ವಾರೆಂಟೈನ್ ಗೊಳಗಾಗುವವರಿಗೆ ಮಾಸ್ಕ್ ಕೊಡಲಾಗುತ್ತಿಲ್ಲ. ಕೋವಿಡ್ ಸೋಂಕಿನಿಂದ ಮೃತಪಟ್ಟವರ ವಿಷಯದಲ್ಲೂ ರಾಜ್ಯ ಸರ್ಕಾರ ಭ್ರಷ್ಟಾಚಾರ ನಡೆಸಲು ಹೊರಟಿರುವುದು ಅತ್ಯಂತ ದುರಂತದ ವಿಷಯ ಎಂದು ಶಾಸಕ ಯು.ಟಿ. ಖಾದರ್ ಕಿಡಿಕಾರಿದರು.

author img

By

Published : Jul 4, 2020, 10:33 PM IST

ಮಂಗಳೂರು: ಕೋವಿಡ್ ಸೋಂಕಿನಿಂದ ಮೃತಪಟ್ಟವರ ವಿಷಯದಲ್ಲೂ ರಾಜ್ಯ ಸರ್ಕಾರ ಭ್ರಷ್ಟಾಚಾರ ನಡೆಸಲು ಹೊರಟಿರುವುದು ಅತ್ಯಂತ ದುರಂತದ ವಿಷಯ. ಸರ್ಕಾರದ ಭ್ರಷ್ಟಾಚಾರವನ್ನು ಕಾಂಗ್ರೆಸ್ ಪಕ್ಷ ಜನರ ಮುಂದಿಟ್ಟಿದ್ದು, ಇದರ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಲಿ, ಇಲ್ಲದಿದ್ದಲ್ಲಿ ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಲು ಸಲಹಾ ಸಮಿತಿ ರಚನೆ ಮಾಡಿ ಎಂದು ಶಾಸಕ ಯು.ಟಿ. ಖಾದರ್ ಆಗ್ರಹಿಸಿದರು.

ಶಾಸಕ ಯುಟಿ.ಖಾದರ್ ಸುದ್ದಿಗೋಷ್ಠಿ

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಹೈಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ 1000 ವೆಂಟಿಲೇಟರ್​ಗಳನ್ನು 120 ಕೋಟಿ ರೂ.ಗೆ ಖರೀದಿ ಮಾಡಲಾಗಿದೆ ಎಂದು ಹೇಳಿದೆ. ಆದರೆ ಅದರ ಮಾರುಕಟ್ಟೆ ದರ ಕೇವಲ 40 ಕೋಟಿ ರೂ., 150 ಕೋಟಿ ರೂ. ವೆಚ್ಚದಲ್ಲಿ 4.89 ಲಕ್ಷ ಪಿಪಿಇ ಕಿಟ್ ಖರೀದಿ ಮಾಡಲಾಗಿದೆ. ಆದರೆ ಅದರ ಮಾರುಕಟ್ಟೆ ದರ ಕೇವಲ 50 ಕೋಟಿ ರೂ., 40 ಕೋಟಿ ರೂ.ನಲ್ಲಿ 10 ಲಕ್ಷ ಖರೀದಿ ಮಾಡಲಾಗಿದೆ. ಹಾಗಾದರೆ ಒಂದು ಮಾಸ್ಕ್ ಗೆ 400 ರೂ. ವೆಚ್ಚ ತಗಲುತ್ತದೆ. ಇಷ್ಟೆಲ್ಲಾ ಖರೀದಿ ಮಾಡುವಾಗ ಕಡಿಮೆ ವೆಚ್ಚದಲ್ಲಿ ಬರಬೇಕೆ ಹೊರತು, ಇಲ್ಲಿ ದುಪ್ಪಟ್ಟಾಗಿದೆ. ಇದರಿಂದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಬಯಲಿಗೆ ಬಂದಿದೆ ಎಂದು ಕಿಡಿಕಾರಿದರು.

ಸರ್ಕಾರ ಸಾಕಷ್ಟು ಮಾಸ್ಕ್ ಖರೀದಿಯ ಲೆಕ್ಕ ನೀಡಿದರೂ ನಗರದ ವೆನ್ ಲಾಕ್ ಅಥವಾ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ವಾರೆಂಟೈನ್ ಗೊಳಗಾಗುವವರಿಗೆ ಮಾಸ್ಕ್ ಕೊಡಲಾಗುತ್ತಿಲ್ಲ. ಅಲ್ಲದೆ ಎಲ್ಲಿಯೂ ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲ. ದ.ಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರು ಮೃತಪಟ್ಟಲ್ಲಿ‌ ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲು ಒಂದು ಆ್ಯಂಬುಲೆನ್ಸ್ ಇದೆ. ನಿನ್ನೆ ಮೂರು ಸೋಂಕಿತರು ಮೃತಪಟ್ಟಿದ್ದು, ಒಂದು ಮೃತದೇಹ ರವಾನೆಯಾದ ಬಳಿಕ ಉಳಿದ ಮೃತದೇಹ ರವಾನೆ ಮಾಡಲು ಸಾಕಷ್ಟು ಸಮಯ ಕಾಯಬೇಕಾಯಿತು. ಯಾಕೆ ಇವರಿಗೆ ಇನ್ನೂ ಆ್ಯಂಬುಲೆನ್ಸ್ ಖರೀದಿ ಮಾಡಲು ಸಾಧ್ಯವಾಗಿಲ್ಲ. ಸರ್ಕಾರ ಸಂಪೂರ್ಣ ಗೊಂದಲಕ್ಕೊಳಗಾಗಿದ್ದು, ಬರುವಂತಹ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜಿಲ್ಲಾಡಳಿತ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಮೃತದೇಹ ರವಾನೆ ಮಾಡಲು ಹಾಗೂ ಕೋವಿಡ್ ಸೋಂಕಿತರನ್ನೂ ಕೊಂಡೊಯ್ಯಲು ಹೆಚ್ಚುವರಿ ಆ್ಯಂಬುಲೆನ್ಸ್​​ಗಳನ್ನು ಖರೀದಿ ಮಾಡಲಿ ಎಂದು ಒತ್ತಾಯಿಸಿದರು.

ಜಿಲ್ಲಾಡಳಿತ ಕೋವಿಡ್ ನಿಭಾಯಿಸುವಲ್ಲಿ‌ ವಿಫಲವಾದಲ್ಲಿ, ರಾಜ್ಯದ ಇತರೆಡೆಗಳಲ್ಲಿ ಆದ ಸಮಸ್ಯೆ ದ‌.ಕ.ಜಿಲ್ಲೆಯಲ್ಲಿ ಆಗಬಾರದೆಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎನ್​ಜಿಒ ಗಳ ಸಹಕಾರದಿಂದ ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗುತ್ತಿದೆ. ಸೋಂಕಿನಿಂದ ಮೃತಪಟ್ಟವರನ್ನು ಗೌರವಪೂರ್ವಕವಾಗಿ ಅಂತ್ಯಸಂಸ್ಕಾರ ಮಾಡುವ ಕೆಲಸವನ್ನು ಮಾಡಲಾಗುತ್ತದೆ. ಅದಕ್ಕಾಗಿ ವಿಶೇಷ ತಂಡವೊಂದನ್ನು ರಚನೆ ಮಾಡಲಾಗಿದ್ದು, ಆಸಕ್ತ ಆರೋಗ್ಯವಂತರು ಈ ತಂಡದೊಂದಿಗೆ ಕೈಜೋಡಿಸಬಹುದು. ಅದಕ್ಕಾಗಿ ಶುಭೋದಯ ಆಳ್ವ (9886341414), ದಿನೇಶ್ ಕುಂಪಲ (9845479552) ಹಾಗೂ ಸವಾದ್ ಸುಳ್ಯ (9591972357) ರನ್ನು ಸಂಪರ್ಕಿಸಬಹುದು. ಆಸಕ್ತರಿಗೆ ತರಬೇತಿ ನೀಡಿ ನಮ್ಮ ತಂಡದೊಂದಿಗೆ ಕೆಲಸ ನಿರ್ವಹಿಸಲು ಅವಕಾಶ ನೀಡಲಾಗುತ್ತದೆ ಎಂದು ಯು.ಟಿ. ಖಾದರ್ ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.